ಗೋಕಾಕ:ಮಾನವನಲ್ಲಿ ಇರುವ ಒಳ್ಳೆಯ ಮೌಲ್ಯಗಳು ಅವರನ್ನು ಸಮಾಜದಲ್ಲಿ ಎತ್ತರಕ್ಕೆ ಬೆಳೆಸುತ್ತವೆ : ಡಾ.ತೋಂಟದ ಸಿದ್ದರಾಮ ಸ್ವಾಮೀಜಿ
ಮಾನವನಲ್ಲಿ ಇರುವ ಒಳ್ಳೆಯ ಮೌಲ್ಯಗಳು ಅವರನ್ನು ಸಮಾಜದಲ್ಲಿ ಎತ್ತರಕ್ಕೆ ಬೆಳೆಸುತ್ತವೆ : ಡಾ.ತೋಂಟದ ಸಿದ್ದರಾಮ ಸ್ವಾಮೀಜಿ
ಗೋಕಾಕ ಮಾ 26 : ಮಾನವನಲ್ಲಿ ಇರುವ ಒಳ್ಳೆಯ ಮೌಲ್ಯಗಳು ಅವರನ್ನು ಸಮಾಜದಲ್ಲಿ ಎತ್ತರಕ್ಕೆ ಬೆಳೆಸುತ್ತವೆ ಎಂದು ಡಂಬಳ-ಗದುಗಿನ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ರವಿವಾರದಂದು ನಗರದ ಶ್ರೀ ಮಹಾಲಕ್ಷ್ಮಿ ಸಭಾಂಗಣದಲ್ಲಿ ಡಾ.ಸಿ.ಕೆ.ನಾವಲಗಿ ಷಷ್ಟಿಪೂರ್ತಿ ಅಭಿನಂದನ ಸಮಿತಿ ಅವರು ಹಮ್ಮಿಕೊಂಡ ಖ್ಯಾತ ಜಾನಪದ ವಿದ್ವಾಂಸ ಡಾ.ಸಿ.ಕೆ.ನಾವಲಗಿ ಅವರ ಷಷ್ಟಿಪೂರ್ತಿ ಹಾಗೂ ಎಸಳು ಯಾಲಕ್ಕಿ ಗೊನಿ ಅಭಿನಂದನ ಗ್ರಂಥ ಬಿಡುಗಡೆ ಮತ್ತು ಅಭಿನಂದನ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಡಾ.ಸಿ.ಕೆ.ನಾವಲಗಿ ಎಂದರೆ ಗೋಕಾಕ ನಾಡಿಗೆ ಅಚ್ಚುಮೆಚ್ಚಿನ ಸಾಹಿತಿ. ಜಾನಪದ ಅಧ್ಯಯನ ಪೀಠದ ಮೊದಲ ವಿದ್ಯಾರ್ಥಿಯಾಗಿ ಚಿನ್ನದ ಪದಕದೊಂದಿಗೆ ಉತ್ತಿರ್ಣರಾಗಿ ಜಾನಪದವನ್ನು ಇಡೀ ರಾಜ್ಯಕ್ಕೆ ಪರಿಚಯಿಸುತ್ತಿದ್ದಾರೆ. ಅವರಲ್ಲಿಯ ಮೌಲ್ಯಗಳು ಇಂದು ಅವರನ್ನು ಎತ್ತರಕ್ಕೆ ಬೆಳೆಸಿದೆ ಮೌಲ್ಯಗಳು ಇಲ್ಲದೆ ಇದ್ದರೆ ಏನು ಸಾಧನೆ ಮಾಡಲು ಸಾಧ್ಯವಿಲ್ಲ ಎಂದ ಅವರು ಬೆಳೆಕಟ್ಟಲು ಸಾಧ್ಯವಾಗದ ರತ್ನ ಜಾನಪದ ತಜ್ಞ ಡಾ.ಸಿ.ಕೆ.ನಾವಲಗಿ ಅವರು ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ , ನಿವೃತ್ತಿಯಾದರು ಸಹ ತಮ್ಮ ಸಾಹಿತ್ಯಿಕ ಚಟುವಟಿಕೆಗಳನ್ನು ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ. ಶರಣ ಪರಂಪರೆಯ ಹರಿಕಾರರಾಗಿ ಡಾ.ಸಿ.ಕೆ.ನಾವಲಗಿ ಬೆಳಗಾವಿ ನಾಡಿನಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಆದರ್ಶಗಳನ್ನು ಗೌರವಿಸುವ ಕಾರ್ಯ ಸಮಾಜದಲ್ಲಿ ನಡೆಯಬೇಕು. ಪುಸ್ತಕಗಳನ್ನು ಪ್ರೀತಿಯಿಂದ ಕಾಣಿ ಅವುಗಳನ್ನು ಓದುವ ಕಾರ್ಯ ಸಮಾಜದಲ್ಲಿ ನಡೆಯಬೇಕಾಗಿದೆ. ಮಠಗಳು ಪುಸ್ತಕಗಳನ್ನು ಪ್ರೀತಿಸುವ ಕಾರ್ಯಗಳನ್ನು ಮಾಡಿ ಸಾಹಿತಿಗಳನ್ನು ಮತ್ತು ಸಾಹಿತ್ಯವನ್ನು ಉಳಿಸಿ, ಬೆಳೆಸಬೇಕಾಗಿದೆ ಅಂತಹ ಕಾರ್ಯ ಗೋಕಾಕಕಿನ ಶ್ರೀ ಶೂನ್ಯ ಸಂಪಾದನ ಮಠ ಮಾಡುತ್ತಿರುವದು ಇತರರಿಗೆ ಮಾದರಿಯಾಗಿದೆ. ತಮ್ಮ ಸೇವಾ ಅವಧಿಯಲ್ಲಿ ಕನ್ನಡದ ಜ್ಞಾನವನ್ನು ಹರಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡುವ ಮೂಲಕ ಉನ್ನತ ಆದರ್ಶಗಳನ್ನು ಬೆಳೆಸಿದ್ದಾರೆ. ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದಂತಹ ಹಲವು ಲೇಖನಗಳು ಈ ಕೃತಿಯಲ್ಲಿ ಇವೆ.ಇದು ಜಾನಪದ ಮತ್ತು ವಚನ ಸಾಹಿತ್ಯದ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ. ಪುಸ್ತಕಗಳನ್ನು ಬರೆಯುವ ಮತ್ತು ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸಮಾಜದಲ್ಲಿ ಮಾಡಬೇಕಾಗಿದೆ.ಇದರ ಜೊತೆಗೆ ಸಮಾಜದ ಉಳಿದ ಕ್ಷೇತಗಳಲ್ಲಿ ಕಾರ್ಯ ಮಾಡಿದ ಹಾಗೂ ಮಾಡುವವರನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯ ಮಾಡಬೇಕಾಗಿದೆ. ಡಾ.ಸಿ.ಕೆ.ನಾವಲಗಿ ಅವರಿಂದ ಇನ್ನಷ್ಟು,ಮತ್ತಷ್ಟು ಕೃತಿಗಳು ಹೊರಬರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆರ್ಶಿವರ್ಚನ ನೀಡಿದರು.
” ಎಸಳು ಯಾಲಕ್ಕಿ ಗೊನಿ” ಅಭಿನಂದನಗ್ರಂಥವನ್ನು ನಾಡೋಜ ಡಾ.ಗೊ.ರು ಚನ್ನಬಸಪ್ಪ ಅವರು ಲೋಕಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಡಾ.ಸಿ.ಕೆ.ನಾವಲಗಿ ಅವರಿಗೆ ಕಲಿಸಿದ ಗುರುಗಳಿಗೆ ಸತ್ಕರಿಸಿ , ಗೌರವಿಸಲಾಯಿತು ಮತ್ತು ಎಸಳು ಯಾಲಕ್ಕಿ ಗೊನಿ ಅಭಿನಂದನ ಗ್ರಂಥ ಸಮಿತಿಯವರು ಡಾ.ಸಿ.ಕೆ.ನಾವಲಗಿ ದಂಪತಿಗಳನ್ನು ಸಹ ಸತ್ಕರಿಸಿದರು.
ಸಮಿತಿಯ ವತಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಜಾನಪದ ವಿದ್ವಾಂಸ ಡಾ.ಸಿ.ಕೆ ನಾವಲಗಿ ಅವರು ಷಷ್ಟಿಪೂರ್ತಿ ಸಮಾರಂಭವನ್ನು 60 ವಯಸ್ಸಿನವರೆಗೆ ಕಾಯದೆ 50ರ ವಯಸ್ಸಿನಲ್ಲಿಯೇ ಮಾಡಿಕೊಂಡು ತಮ್ಮ ಸಾಧನೆಗಳನ್ನು ಸಮಾಜಮುಖಿಯಾಗಿ ತೋರಿಸಿಕೊಂಡು ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಡಾ. ವಿರಣ್ಣ ರಾಜು , ಡಾ.ಎಂ.ಡಿ.ಚುನಮರಿ, ಚಂದ್ರಶೇಖರ್ ಕೊಣ್ಣೂರ, ಮಲ್ಲಿಕಾರ್ಜುನ ಈಟಿ, ಡಾ.ಮಹಾಂತೇಶ ಕಡಾಡಿ, ಪ್ರೋ.ಎಂ.ಆರ್.ಉಳ್ಳೇಗಡಿ, ಶಿವಾನಂದ ಮೂಲಿಮನಿ, ಡಿ.ಬಿ.ಹಿರೇಮಠ , ಶಂಕರ ಗೋರೋಶಿ, ಜಿ.ವ್ಹಿ ಮಳಗಿ, ಬಸವರಾಜ ಖಾನಪ್ಪನವರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.