RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಆಧುನಿಕ ಪದ್ದತಿಯಿಂದ ಪ್ರಾಯೋಗಿಕವಾಗಿ ಮಕ್ಕಳಿಗೆ ಕಲಿಸಿ ಅವರ ಜ್ಞಾನಮಟ್ಟವನ್ನು ಹೆಚ್ಚಿಸಿ : ರೋಹಿ ಶಿರಗುಪ್ಪ

ಗೋಕಾಕ:ಆಧುನಿಕ ಪದ್ದತಿಯಿಂದ ಪ್ರಾಯೋಗಿಕವಾಗಿ ಮಕ್ಕಳಿಗೆ ಕಲಿಸಿ ಅವರ ಜ್ಞಾನಮಟ್ಟವನ್ನು ಹೆಚ್ಚಿಸಿ : ರೋಹಿ ಶಿರಗುಪ್ಪ 

ಆಧುನಿಕ ಪದ್ದತಿಯಿಂದ ಪ್ರಾಯೋಗಿಕವಾಗಿ ಮಕ್ಕಳಿಗೆ ಕಲಿಸಿ ಅವರ ಜ್ಞಾನಮಟ್ಟವನ್ನು ಹೆಚ್ಚಿಸಿ : ರೋಹಿ ಶಿರಗುಪ್ಪ

ಗೋಕಾಕ ಮಾ 26 : ಆಧುನಿಕ ಪದ್ದತಿಯಿಂದ ಪ್ರಾಯೋಗಿಕವಾಗಿ ಮಕ್ಕಳಿಗೆ ಕಲಿಸಿ ಅವರ ಜ್ಞಾನಮಟ್ಟವನ್ನು ಹೆಚ್ಚಿಸುವಂತೆ ಸ್ಮಾರ್ಟ್ ಕಿಡ್ಸ್ ಶಾಲೆಯ ಪ್ರಾಚಾರ್ಯ ರೋಹಿ ಶಿರಗುಪ್ಪ ಹೇಳಿದರು.
ಶನಿವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಆಂಗ್ಲ  ಮಾಧ್ಯಮ ಶಾಲೆಯ ಕ್ರೀಡೊ ಪ್ರೀ ಸ್ಕೂಲ್ ನ ಗ್ರಾಜುವೇಷನ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಇಂದಿನ ಮಕ್ಕಳ ಬೌದ್ಧಿಕ ಮಟ್ಟವನ್ನು ಅರಿತು ಅವರಿಗೆ ಶಿಕ್ಷಣ ನೀಡಿ ಅವರನ್ನು ಸ್ವರ್ದಾತ್ಮಕ ಯುಗಕ್ಕೆ ಸಿದ್ದಗೋಳಿಸಬೇಕಿದೆ. ಮಕ್ಕಳಿಗೆ  ಆಟವಾಡುತ್ತಾ ಕಲಿಸಿದರೆ ಅದು ಪರಿಣಾಮಕಾರಿಯಾಗಿರುತ್ತದೆ. ಅಂತಹ ವ್ಯವಸ್ಥೆಯೊಂದಿಗೆ ಮಕ್ಕಳ ಶಿಕ್ಷಣ ಪ್ರಗತಿಗೆ ಶ್ರಮಿಸುತ್ತಿರುವ ಸಂಸ್ಥೆ, ಪಾಲಕರು ಮಕ್ಕಳನ್ನು ಮೊಬೈಲ್ ನಿಂದ ದೂರವಿಟ್ಟು ಉತ್ತಮ ಸಂಸ್ಕಾರವನ್ನು ಅವರಲ್ಲಿ ಬೆಳೆಸಿ ಒಳ್ಳೆಯ ನಾಗರಿಕರನ್ನಾಗಿ ಮಾಡುವಂತೆ ಹೇಳಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ಸುವರ್ಣ ಭೀಮಶಿ ಜಾರಕಿಹೊಳಿ ಉದ್ಘಾಟಿಸಿದರು. ವ್ಯವಸ್ದಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಅವರ ಅಧ್ಯಕ್ಷ ವಹಿಸಿದ್ದರು.
ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಿ ಬಿ.ಕೆ.ಕುಲಕರ್ಣಿ, ಮುಖ್ಯೋಪಾಧ್ಯಾಯರಾದ ಎಚ್.ವ್ಹಿ.ಪಾಗನಿಸ, ಆರ್.ಎಂ.ದೇಶಪಾಂಡೆ, ಪಿ.ವಿ.ಚಚಡಿ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಅರುಣ್ ಪೂಜೇರ್ ಇದ್ದರು.

Related posts: