RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:1032 ಕೋ.ರೂ. ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ : ಜಾರಕಿಹೊಳಿ ಸೋದರರ ಗೆಲ್ಲಿಸಲು ಸಿ ಎಂ ಕರೆ

ಗೋಕಾಕ:1032 ಕೋ.ರೂ. ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ : ಜಾರಕಿಹೊಳಿ ಸೋದರರ ಗೆಲ್ಲಿಸಲು ಸಿ ಎಂ ಕರೆ 

1032 ಕೋ.ರೂ. ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ : ಜಾರಕಿಹೊಳಿ ಸೋದರರ ಗೆಲ್ಲಿಸಲು ಸಿ ಎಂ ಕರೆ

ಗೋಕಾಕ ಮಾ 28 : ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ  ಶಾಸಕ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ 50 ಸಾವಿರಕ್ಕಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಿಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರದಂದು ನಗರದಲ್ಲಿ 1032.99 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ, ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದರೆ ಮಾತ್ರ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಅಭಿವೃದ್ಧಿಗೆ ಕಾರ್ಯಗಳಿಗೆ ಬೆಲೆ ನೀಡಿದಂತಾಗುತ್ತದೆ. ರಾಜ್ಯ ರಾಜಕೀಯವನ್ನು ಬೆಳಗಾವಿ ಜಿಲ್ಲೆಯ ರಾಜಕೀಯ ನಿರ್ಧರಿಸುತ್ತದೆ.  ಇಲ್ಲಿ ಬರುವ ಚುನಾವಣೆಯಲ್ಲಿ 18ಕ್ಕೆ 18 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ  ಬರುವ ಸುಳ್ಳಿನ ಸಂತೆಯಾಗಿದೆ. ಜಿಲ್ಲೆಯ ಪ್ರತಿಯೊಬ್ಬರು ಒಂದಾಗಿ ಒಗ್ಗಟಿನಿಂದ  ಬೆಳಗಾವಿಯಲ್ಲಿ  ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕು  ಎಂದು ಮನವಿ ಮಾಡಿದ ಅವರು ಗೋಕಾಕದಲ್ಲಿ ನೇರೆದ ಜನ ನೋಡಿ 2023ರ ಚುನಾವಣೆಯ ವಿಜಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಭಾಸವಾಗುತ್ತಿದೆ.ರಮೇಶ್ ಜಾರಕಿಹೊಳಿ ಬೇರೆ ಪಕ್ಷದಲ್ಲಿ ಇದ್ದರೂ ಸಹ ನನ್ನ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದರು. ಜಾರಕಿಹೊಳಿ ಮನೆತನದ ಜೊತೆಗೆ ನನ್ನ ಆತ್ಮೀಯ ಸಂಬಂಧ ವಿದೆ ಎಂದು ಜಾರಕಿಹೊಳಿ ಕುಟುಂಬದ ಜೊತೆಗಿನ ತಮ್ಮ ಒಡನಾಟವನ್ನು ಬಿಚ್ಚಿಟ್ಟರು. ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಯತ್ನದ ಫಲವಾಗಿ ಇಂದು ಘಟ್ಟಿ  ಬಸವಣ್ಣ ಡ್ಯಾಂ ಕಟ್ಟಿ 4 ಟಿಎಂಸಿ ನೀರು ನಿಲ್ಲಿಸುವ ಕಾರ್ಯ ಪ್ರಾರಂಭವಾಗಿದೆ. ಎಂಥಾ  ಬರಗಾಲ ಬಂದರು ಗೋಕಾಕ ಮತ್ತು ಅರಭಾವಿ ಶಾಶ್ವತವಾಗಿ ನೀರು ದೊರಕಲ್ಲಿದೆ. ರಮೇಶ ಜಾರಕಿಹೊಳಿ ಅವರು ಊಡ ಇದ್ದಂತೆ ಒಂದು ಕೆಲಸ ಹಿಡಿದರೆ ಛಲ ಬಿಡದೆ ನಿಮ್ಮಗೋಸ್ಕರ ಕಾರ್ಯ ಮಾಡಿದ್ದಾರೆ. ಜನರ ಬಗ್ಗೆ ಕಾಳಜಿ ಹೊತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೇಳಲು ನನ್ನ ಬಳಿ   ಬಂದಿದ್ದಾರೆ ಹೊರೆತು ವಯಕ್ತಿಕ ಕೆಲಸಕ್ಕೆ ಇಲ್ಲಾ.
ಇಂದು ಗೋಕಾಕದಲ್ಲಿ ಪ್ರವಾಹ ಸಂದರ್ಭದಲ್ಲಿ ನೀರು ನಗರದಲ್ಲಿ ಬರಬಾರದು ಎಂದು  ತಡೆಗೋಡೆ ನಿರ್ಮಾಣ, ಒಳ್ಳೆಯ ಆರೋಗ್ಯ ನೀಡುವ ನಿಟ್ಟಿನಲ್ಲಿ ತಾಯಿ ಮಕ್ಕಳ ಆಸ್ಪತ್ರೆ , ಕಲ್ಮಡಿ ಎತ್ತ ನೀರಾವರಿ, ಜಲಸಂಪನ್ಮೂಲ ಇಲಾಖೆಯಿಂದ ಘಟಪ್ರಭಾ ನದಿಯಿಂದ ನೀರು ತುಂಬಿಸು ಕಾರ್ಯ ಹತ್ತು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಅನುದಾನವನ್ನು ಬಿಜೆಪಿ ಸರಕಾರ ನೀಡಿದೆ ‌. ಉತ್ತರ ಕರ್ನಾಟಕ ಅಭಿವೃದ್ಧಿಗೆ ಬಿಜೆಪಿ ಸರಕಾರ  ಚಾಲನೆ ನೀಡಿ.ಆರೋಗ್ಯ , ಶಿಕ್ಷಣ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ.  ನಾನು
ಮುಖ್ಯಮಂತ್ರಿಯಾಗಿ 4 ಘಂಟೆ ಒಳಗೆ ರೈತರ ವಿದ್ಯಾಸಿರಿನಿಧಿ  ಮಾಡಿ  ರೈತರ ಮಕ್ಕಳಿಗೆ ವಿದ್ಯೆ ಕೊಡಲು ವ್ಯವಸ್ಥೆ ಮಾಡಿದ್ದೇವೆ. ಈ ಯೋಜನೆಯಿಂದ 11 ಲಕ್ಷ ರೈತರಿಗೆ ಲಾಭವಾಗಿದೆ. ರೈತರ ಮಕ್ಕಳು ಕೂಡಾ ಬೇರೆ ಬೇರೆ ವೃತ್ತಿಯಲ್ಲಿ ಹೋಗಬೇಕು.
ಅತ್ಯಂತ ತಳಗಡೆ ಇರುವ ಜನಾಂಗದ ಮಕ್ಕಳಿಗೆ ಶಿಕ್ಷಣ ದೊರೆಯಲು  ವಿದ್ಯಾಸಿರಿ ಯೋಜನೆ ಸಹಕಾರಿಯಾಗಿದೆ. ಇದನ್ನು ವಿಸ್ತರಿಸಿ   ಆಟೋ ಚಾಲಕರಿಗ ಮಕ್ಕಳಿಗೆ ವಿದ್ಯಾಸಿರಿ  ಕೊಟ್ಟಿದ್ದೇವೆ.  ಎಲ್ಲಾ ವರ್ಗದವರಿಗೂ ಸಮಾಜಿಕ ನ್ಯಾಯವನ್ನು ಒದಗಿಸುತ್ತಿದ್ದೇವೆ.  ಕಾಂಗ್ರೆಸ್ ನವರು ನೀಡಿಲ್ಲ ನಿಜವಾದ ಸಾಮಾಜಿಕ ನ್ಯಾಯವನ್ನು ನೀಡಿದ ನಿಜವಾದ ಸರ್ಕಾರ ನಮ್ಮ ಸರಕಾರ. ವೋಟ ಬ್ಯಾಂಕ್ ರಾಜಕೀಯ ನಡೆಯುವದಿಲ್ಲ. ಇನ್ನುಮುಂದೆ ಕಾಂಗ್ರೆಸ್ ನ ಆಟ ನಡೆಯುವದಿಲ್ಲ. ಬಂಜಾರ ಬಂಧುಗಳಿಗೂ ಸಹ ಸಾಮಾಜಿಕ ನ್ಯಾಯ ನೀಡಿದ್ದೇವೆ. ಇಡಿ ಕಾಂಗ್ರೆಸ್ ಪಕ್ಷ ಶಕುನಿಯ ಕಾರ್ಯಾ ಮಾಡುತ್ತಿದ್ದೆ. ಹೆಣ್ಣು ಮಕ್ಕಳಿಗೆ ಸ್ತ್ರೀ ಸಾರ್ಮಥ್ಯ ಯೋಜನೆ, ಬ್ಯಾಂಕಿನಿಂದ ಸಾಲ ಕೊಟ್ಟು ಅವರು ಸ್ವಯಂ ಉದ್ಯೋಗ ಮಾಡುಲು ಪ್ರೋತ್ಸಾಹ, ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ಯುವಕರಿಗು ಮುಂದೆ ಬರಲು ಸರಕಾರ ಯೋಜನೆ ನೀಡಿದೆ.ಇಂದು ಬಿಜೆಪಿ ದುಡಿಮೆಯೆ ದೊಡ್ಡಪ್ಪ ಎಂದು ಸಾರಿ ಹೇಳಿದೆ. ಬಡವರಾಗಿ ಹುಟ್ಟುವುದು ಪಾಪಾವಲ್ಲ ಬಡವರಾಗಿ ಸಾಯಿವುದು ಪಾಪ. ಬಡವನಾಗಿ  ಹುಟ್ಟಿದ ಪ್ರತಿಯೊಬ್ಬರು ಶ್ರೀಮಂತನಾಗಬೇಕು ಎಂಬುವುದು  ನಮ್ಮ ಧ್ಯೇಯವಾಗಿದೆ. ಕರ್ನಾಟಕ ಬರುವ ದಿನಗಳಲ್ಲಿ ದೇಶದಲ್ಲಿ ನಂ 1 ರಾಜ್ಯವಾಗಲ್ಲಿದೆ. ಇಡಿ ದೇಶದಲ್ಲಿ ಉದ್ಯೋಗ ನೀಡುವ ರಾಜ್ಯ ಬೇರೊಂದಿಲ್ಲ . ಇಂದು ಎಲ್ಲಾ ಸಮುದಾಯದವರು ಜಾಗೃತಿರಾಗಿದ್ದಾರೆ. ಬೊಮ್ಮಾಯಿ ಅವರನ್ನು ನಾಯಿ ಎಂದು ಕರೆಯುತ್ತಿದ್ದಾರೆ ಆದರೆ ನಾನು 7 ಕೋಟಿ ಜನರ ಹಿತರಕ್ಷಣೆ ಮಾಡುವ ಉದ್ದೇಶ ನಾನು ಹೊಂದಿದ್ದೆನೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಮಾಲಿಕರು ನೀವು ನಿರ್ಧರಿಸುವವರು ರಾಜ್ಯವನ್ನು ಆಳುತ್ತಾರೆ.ನೀವೇ   ನಮ್ಮ ಮಾಲೀಕರು.  ಎಸಿಬಿಯನ್ನು ತಮ್ಮ ಕೈಯಲ್ಲಿ ಇಟ್ಟು ಕಾಂಗ್ರೆಸ್ ಭ್ರಷ್ಟಾಚಾರವನ್ನು ಮಾಡಿದ್ದಾರೆ. ಅದನ್ನು ತಗೆಯಲು ನಾವು ಲೋಕಾಯುಕ್ತವನ್ನು ಮರುಸ್ಥಾಪನೆ ಮಾಡಿದ್ದೇವೆ.ಕಾಂಗ್ರೆಸ್ ಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿ ಸರಕಾರ ಹೆಚ್ಚಿನ ಶುಲ್ಕ ವಸೂಲಿ ಮಾಡಿ ರಾಜ್ಯದ ಅಭಿವೃದ್ಧಿ ಮಾಡುತ್ತಿದೆ ಎಂದ ಅವರು ಮುಂದಿನ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಶಾಸಕರನ್ನು ಆರಿಸಿ ಕೊಡಬೇಕು.  ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಬಗ್ಗೆ ಬಹಳ ಗೌರವವಿದೆ. ರೈಲ್ವೆ  ಯೋಜನೆ,  ಟೈಕ್ಸಟೇಲ್ಸ ಪಾರ್ಕ್, ಹೆದ್ದಾರಿ ಸೇರಿದಂತೆ ಇತರ ಹತ್ತಾರು ಯೋಜನೆಗಳನ್ನು ರಾಜ್ಯಕ್ಕೆ  ನೀಡಿದ್ದಾರೆ.150 ಕ್ಷೇತ್ರದಲ್ಲಿ ಹೋಗಿದ್ದಾ ಎಲ್ಲರೂ. ಬಿಜೆಪಿ ಬೆಂಬಲಿಸುತ್ತಿದ್ದಾರೆ ಬೆಳಗಾವಿ ಜಿಲ್ಲೆಯ ಜನರು ಸಹ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು‌ ಎಂದು ಮನವಿ ಮಾಡಿದರು.
ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ ಗೋಕಾಕ ಮತಕ್ಷೇತ್ರದಲ್ಲಿಯ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಹಂತಹಂತವಾಗಿ ಮಂಜೂರಾತಿ ನೀಡಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದು ಸಂತೋಷ ನೀಡಿದೆ‌. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತಮ್ಮದೆ ಆದ ಸಿದ್ದಾಂತ ಹೊಂದಿದೆ. ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಮತ್ತು ದೇವೆಗೌಡ ಇದ್ದರೆ. ಕಾಂಗ್ರೆಸ್ ನಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಷ್ಟೆ ಅಧಿಕಾರ ಅನುಭವಿಸುವದು. ಬಿಜೆಪಿಯಲ್ಲಿ ಎಲ್ಲರಿಗೂ ಅವಕಾಶ ದೊರೆಯುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದರು ಸದಾಶಿವ ವರದಿ ಜಾರಿಗೆ ತರಲಿಲ್ಲ  ಈಗ ಅಧಿಕಾರಕ್ಕೆ ಬಂದರೆ ಮಾಡುತ್ತೇವೆ ಎನ್ನುತ್ತಿರುವ ಕಾಂಗ್ರೆಸ್ ಪಕ್ಷ ಬರಿ ಸುಳ್ಳು ಹೇಳುತ್ತಿದೆ. ಇಂದು ಜಗತ್ತೆ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿದೆ. 2023ರಲ್ಲಿ ಪೂರ್ಣ ಪ್ರಮಾಣದ ಅಧಿಕಾರ ನಡೆಸುತ್ತದೆ ಎಂದು ಹೇಳಿದರು.
ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ  ಗೋಕಾಕದಲ್ಲಿ ನಡೆದ ಸಮಾವೇಶ ಇತಿಹಾಸವನ್ನು ನಿರ್ಮಿಸಿದೆ. ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ 4 ಟಿಎಂಸಿ ನೀರು ನಿಲ್ಲಿಸಿ ಗೋಕಾಕ ಮತ್ತು ಅರಭಾವಿ ಕ್ಷೇತ್ರದ ಜನರ ನೀರಿನ ಧಾಹವನ್ನು ಈಡೇರಿಸಲಿದೆ. ಪ್ರವಾಹದ ಸಂದರ್ಭದಲ್ಲಿ ನಗರದಲ್ಲಿ ನೀರು ಬರದಂತೆ ತಡೆಯಲು ತಡೆಗೋಡೆಯನ್ನು ನಿರ್ಮಿಸುವುದು ಒಳ್ಳೆಯ ಕಾರ್ಯವಾಗಿದೆ. 2023ರಲ್ಲಿ ಜನರ ಮತ್ತು ದೇವರ ಆರ್ಶಿವಾದದಿಂದ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಇದರಲ್ಲಿ ಸಂಶಯವಿಲ್ಲ. ಅರಭಾವಿ ಭಾಗದಲ್ಲಿಯೂ ಸಹ ನೀರಾವರಿ ಸೇರಿದಂತೆ ಇತರ ಯೋಜನೆಗಳಿಗೆ ಮಂಜೂರಾತಿ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸೇರಿ ದೇಶ ಮತ್ತು ರಾಜ್ಯವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಲಿಂಗಾಯತ ಸಮಾಜದ ಮತಗಳು ವಿಭಜನೆ ಮಾಡಬಾರದು. ಮುಂದೆ ಲಿಂಗಾಯತರ ಮುಖ್ಯಮಂತ್ರಿ ಮಾಡುವ ಪಕ್ಕ ಬಿಜೆಪಿ ಎಂದ ಅವರು ಮುಂದಿನ ಚುನಾವಣೆಯಲ್ಲಿ ಡಬಲ್ ಇಂಜನ ಸರಕಾರ ಬಿಜೆಪಿ ಪಕ್ಷವನ್ನು ಬೆಂಬಲಿಸಿ 125 ಕಮಲ ಹೂಗಳನ್ನು ವಿಧಾನಸಭೆಗೆ ಕಳುಹಾಸಬೇಕು  ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಲಿಂಗಾಯತ ಪಂಚಮಶಾಲಿ ಸಮಾಜದ ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದ  ಮುಖಂಡರು ಮತ್ತು ವಿವಿಧ ಸಮಾಜದ ಮುಖಂಡರು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ  ಸಚಿವ ಸಿ.ಸಿ.ಪಾಟೀಲ್, ಶಾಸಕ  ಮಹೇಶ್ ಕುಮಟೋಳಿ ,  ಮಾಜಿ ಶಾಸಕರುಗಳಾದ ಸಂಜಯ ಪಾಟೀಲ್, ಎಂ.ಎಲ್.ಮುತ್ತೆನ್ನವರ , ಸುಭಾಷ್ ಪಾಟೀಲ್, ಅಂಬಿರಾವ ಪಾಟೀಲ್, ಅರಮನಾಥ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಭೀಮಶಿ ಭರಮನ್ನವರ, ರಾಜೇಂದ್ರ ಗೌಡಪ್ಪಗೋಳ, ಭೀಮಗೌಡ ಪೋಲೀಸ್ ಗೌಡರ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು .

Related posts: