RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನಿಸ್ವಾರ್ಥಿಗಳು ಸಂತೃಪ್ತ ಜೀವನದಿಂದ ಉತ್ತಮ ಆರೋಗ್ಯ ಹೊಂದಿ ಹೆಚ್ಚುಕಾಲ ಬದುಕುತ್ತಾರೆ : ಡಾ‌.ವಿಜಯಲಕ್ಷ್ಮಿ ಬಾಳೇಕುಂದ್ರಿ

ಗೋಕಾಕ:ನಿಸ್ವಾರ್ಥಿಗಳು ಸಂತೃಪ್ತ ಜೀವನದಿಂದ ಉತ್ತಮ ಆರೋಗ್ಯ ಹೊಂದಿ ಹೆಚ್ಚುಕಾಲ ಬದುಕುತ್ತಾರೆ : ಡಾ‌.ವಿಜಯಲಕ್ಷ್ಮಿ ಬಾಳೇಕುಂದ್ರಿ 

ನಿಸ್ವಾರ್ಥಿಗಳು ಸಂತೃಪ್ತ ಜೀವನದಿಂದ ಉತ್ತಮ ಆರೋಗ್ಯ ಹೊಂದಿ  ಹೆಚ್ಚುಕಾಲ ಬದುಕುತ್ತಾರೆ : ಡಾ‌.ವಿಜಯಲಕ್ಷ್ಮಿ ಬಾಳೇಕುಂದ್ರಿ

ಗೋಕಾಕ ಏ 2 : ನಿಸ್ವಾರ್ಥಿಗಳು ಸಂತೃಪ್ತ ಜೀವನದಿಂದ ಉತ್ತಮ ಆರೋಗ್ಯ ಹೊಂದಿ  ಹೆಚ್ಚುಕಾಲ ಬದುಕುತ್ತಾರೆ ಎಂದು ಖ್ಯಾತ ಹೃದಯರೋಗ ತಜ್ಞೆ ಡಾ‌.ವಿಜಯಲಕ್ಷ್ಮಿ ಬಾಳೇಕುಂದ್ರಿ ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ರೋಟರಿ ಸೇವಾ ಸಂಘ ಹಾಗೂ ಇನರವ್ಹೀಲ್ ಸಂಸ್ಥೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ 75 ವಸಂತಗಳನ್ನು ಪೂರೈಸಿದ ಹಿರಿಯ ಜೀವಿಗಳನ್ನು ಗೌರವಿಸುವ ಅಮೃತಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಹಿರಿಯರನ್ನು ಗೌರವಿಸಿ ಹಬ್ಬವನ್ನಾಗಿ ಆಚರಿಸುತ್ತಿರುವ ರೋಟರಿ ಸಂಸ್ಥೆ ಅವರ ಕಾರ್ಯ ಮಾದರಿಯಾಗಿದೆ ಎಂದರು.
ದುರಭ್ಯಾಸಗಳಿಂದ ದೂರವಿದ್ದವರು ಧೀಘಾಯುಷಿಗಳಾಗಿರುತ್ತಾರೆ. ಚಿತೆ ಸತ್ತವರನ್ನು ಸುಟ್ಟರೆ, ಚಿಂತೆ ಬದುಕಿದವರನ್ನು ಸುಡುತ್ತದೆ. ಚಿಂತೆಗಳಿಂದ ದೂರವಾಗಿ ಒಳ್ಳೆಯ ಚಿಂತನೆಗೊಳೊಂದಿಗೆ ದೇವರ ನಾಮಸ್ಮರಣೆ ಮಾಡಬೇಕು. ಹಿರಿಯರು ತಂದೆ,ತಾಯಿಗಳು ನಮ್ಮ ಆಸ್ತಿ ಅವರನ್ನು ಗೌರವಾದಾರದಿಂದ ಕಾಣಬೇಕು. ಕೋಪವಿದ್ದಲ್ಲಿ ಎಲ್ಲವೂ ಸರ್ವನಾಶವಾಗುತ್ತದೆ. ಸದಾ ಹಸ್ಮುಖಿಗಳಾಗಿ ಸಾತ್ವಿಕ ಆಹಾರ ಸೇವನೆಯೊಂದಿಗೆ ಧೀರ್ಘಾಯುಷಿಗಳಾಗಿ ಎಂದು ಹಾರೈಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಘೋಡಗೇರಿಯ ಶ್ರೀ ಮಲ್ವಯ್ಯ ಸ್ವಾಮಿಗಳು ವಹಿಸಿ ಆಶಿರ್ವಚನ ನೀಡಿದರು.
ವೇದಿಕೆಯಲ್ಲಿ ರೋಟರಿ ಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೋಳಿ, ಕಾರ್ಯದರ್ಶಿ ಸೋಮಶೇಖರ ಮಗದುಮ್ಮ, ಸಹ ಕಾರ್ಯದರ್ಶಿ ಸತೀಶ ಬೆಳಗಾವಿ,  ರೋಟರಿ ಸಂಸ್ಥೆಯ ಅಧ್ಯಕ್ಷ ಸತೀಶ್ ನಾಡಗೌಡ, ಕಾರ್ಯದರ್ಶಿ ಮಲ್ಲಿಕಾರ್ಜುನ ಈಟಿ, ಇನರವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಆರತಿ ನಾಡಗೌಡ, ಕಾರ್ಯದರ್ಶಿ ಸೀತಾ ಬೆಳಗಾವಿ ಇದ್ದರು.
ಜಗದೀಶ್ ಚುನಮರಿ ಸ್ವಾಗತಿಸಿದರು, ವಿದ್ಯಾ ಗುಲ್ ವಂದಿಸಿದರು.

Related posts: