ಗೋಕಾಕ:ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ, ತಲೆ ಕೆಡಿಸಿಕೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ
ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ, ತಲೆ ಕೆಡಿಸಿಕೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ
ಗೋಕಾಕ ಏ 5 : ನಗರದ ಘಟಪ್ರಭಾ ನದಿ ದಡದಲ್ಲಿ ಲೋಳಸೂರ ಗ್ರಾಮದ ಬಳಿ ಬುಧವಾರದಂದು ಮಧ್ಯಾಹ್ನ 2 ಘಂಟೆ ಸುಮಾರಿಗೆ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕಳೆದು ಕೆಲ ದಿನಗಳ ಹಿಂದೆ ನಗರದ ಶಿಂಗಳಾಪೂರ ಸೇತುವೆ ಬಳಿ ಪ್ರತ್ಯಕ್ಷಗೊಂಡು ನದಿ ದಡದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಮೊಸಳೆ ಬುಧವಾರದಂದು ಮತ್ತೆ ಪ್ರತ್ಯಕ್ಷಗೊಂಡ ಪರಿಣಾಮ ಜನರ ಭಯ ಭೀತಗೊಂಡಿದ್ದಾರೆ. ಕೆಲವರು ಲೋಳಸೂರ ಸೇತುವೆಯ ಮೇಲೆ ನಿಂತು ಮೊಸಳೆಯ ಪೋಟೋ ತಗೆಯಲು ಮುಗಿಬಿದ್ದಿರುವ ದೃಶ್ಯಗಳು ಕಂಡು ಬಂದಿವೆ . ಕಳೆದ ಹಲವು ದಿನಗಳ ಹಿಂದೆ ಮೊಳಸೆ ಪ್ರತ್ಯಕ್ಷವಾಗಿದ್ದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡೆಸಿಕೊಳ್ಳದ ಪರಿಣಾಮ ಮೊಸಳೆ ಘಟಪ್ರಭಾ ನದಿಯಲ್ಲಿಯೇ ವಾಸವಾಗಿ ಆವಾಗಾವಾ ಪ್ರತ್ಯಕ್ಷಗೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಮೊಸಳೆ ಹಿಡಿಯಲು ಚಾಣಾಕ್ಷ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.