ಗೋಕಾಕ:ಡಾ.ಮಹಾಂತೇಶ ಕಡಾಡಿಗೆ ಕಾಂಗ್ರೆಸ್ ಟಿಕೆಟ್ : ಮೌನಕ್ಕೆ ಶರಣಾದ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ
ಡಾ.ಮಹಾಂತೇಶ ಕಡಾಡಿಗೆ ಕಾಂಗ್ರೆಸ್ ಟಿಕೆಟ್ : ಮೌನಕ್ಕೆ ಶರಣಾದ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ
ಗೋಕಾಕ ಏ 6 : ಕಾಂಗ್ರೆಸ್ ಪಕ್ಷದ ಟಿಕೆಟ್ ಡಾ.ಮಹಾಂತೇಶ ಕಡಾಡಿಗೆ ಘೋಷಣೆಯಾಗುತ್ತಿದ್ದಂತೆ ಪ್ರಬಲ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮೌನಕ್ಕೆ ಶರಣಾಗಿದ್ದಾರೆ.
ಈ ಕುರಿತು ಪ್ರತಿಕೆಯೊಂದಿಗೆ ಮಾತನಾಡಿದ ಅಶೋಕ ಪೂಜಾರಿ ಅವರು ಕಳೆದ ಹಲವು ದಿನಗಳಿಂದ ಸಕ್ರಿಯವಾಗಿದ್ದು ಕಾಂಗ್ರೆಸ್ ಟಿಕೆಟ್ ಘೋಷಣೆಯಿಂದ ನನ್ನ ಮೇಲಿದ್ದ ಒತ್ತಡದಿಂದ ಮುಕ್ತನಾದಂತಾಗಿದ್ದು, ಎರಡ್ಮೂ ದಿನಗಳವರೆಗೆ ವಿಶ್ರಾಂತಿ ಪಡೆಜು ನನ್ನ ರಾಜಕೀಯ ನಿಲುವನ್ನು ಎರಡ್ಮೂರು ದಿನಗಳ ನಂತರ ತಿಳಿಸಲಾಗುವುದು ಎಂದ ಅವರು ತಾವು ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಸ್ವರ್ಧಿಸು ಬಹುದಾದ ನಿಲುವನ್ನು ಜೀವಂತವಾಗಿಟ್ಟಂತಾಗಿದೆ.
ಕಳೆದ ಹಲವು ದಿನಗಳಿಂದ ಗೋಕಾಕ ಮತಕ್ಷೇತ್ರದ ಜನರ ನಿದ್ದೆ ಗೆಡಿಸಿದ್ದ ಕಾಂಗ್ರೆಸ್ ಪಕ್ಷದ ಟಿಕೆಟ್ ಡ್ರಾಮಾಗೆ ಹೈಕಮಾಂಡ್ ಮತ್ತು ಕಾಂಗ್ರೆಸ್ ರಾಜ್ಯ ನಾಯಕರು ತೆರೆ ಎಳೆದಿದ್ದಾರೆ.
ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂಬ ಒಪ್ಪಂದದ ಮೇರೆಗೆ ಜೆಡಿಎಸ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ್ದ ಅಶೋಕ್ ಪೂಜಾರಿ ಅವರಿಗೆ ಕಾಂಗ್ರೆಸ್ ನಾಯಕರು ಬಿಗ್ ಶಾಕ್ ನೀಡಿದ್ದಾರೆ.
ಗುರುವಾರದಂದು ತನ್ನ ಎರಡನೇ ಪಟ್ಟಿ ಬಿಡುಗಡೆ ಗೊಳಿಸಿದ ಕಾಂಗ್ರೆಸ್ ಪಕ್ಷ ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ಡಾ.ಮಹಾಂತೇಶ ಕಡಾಡಿ ಅವರಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿಯನ್ನು ಮೂಡಿಸಿದೆ. ತನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರೆಯುತ್ತದೆ ಎಂದು ಭಾವಿಸಿಕೊಂಡು ಕಳೆದ ಒಂದು ವರ್ಷದಿಂದಲೂ ಸಹ ಗೋಕಾಕ ಮತಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕ್ಷೇತ್ರಾದ್ಯಂತ ಸಂಚಾರ ಮಾಡಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದ ಕಾಂಗ್ರೆಸ್ ಮಖಂಡ ಅಶೋಕ ಪೂಜಾರಿ ಅವರ ಸ್ವರ್ಧೆಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದ್ದು, ಅಶೋಕ್ ಪೂಜಾರಿ ಅವರು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಾರೊ ಅಥವಾ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಸ್ವರ್ಧಿಸಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುತ್ತಾರೊ ಎಂಬುದನ್ನ ಕಾದು ನೋಡಬೇಕಾಗಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಅವರ ಸ್ವಷ್ಟ ನಿಲುವಿನ ಮೇಲಿ ನಿಂತಿದೆ ಎಂದು ಜನ ಮಾತನಾಡುತ್ತಿದ್ದಾರೆ.