ಗೋಕಾಕ:ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಸರ್ವೇ ಆಧರಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ : ಸತೀಶ ಜಾರಕಿಹೊಳಿ ಅಭಿಮತ
ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಸರ್ವೇ ಆಧರಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ : ಸತೀಶ ಜಾರಕಿಹೊಳಿ ಅಭಿಮತ
ಗೋಕಾಕ ಏ 6 : ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಸರ್ವೇ ಆಧರಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ ಎಂದು ಯಮಕನಮರಡಿ ಶಾಸಕ , ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು
ಗುರುವಾರದಂದು ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರನ್ನು ಉದ್ದೇಶಿ ಮಾತನಾಡಿದ ಅವರು ಸ್ಥಳೀಯ ನಾಯಕರ ಅಭಿಪ್ರಾಯ, ಸರ್ವೇ ರಿಪೋರ್ಟ್ ಆಧರಿಸಿ ಕಾಂಗ್ರೆಸ್ ರಾಜ್ಯ ನಾಯಕರು ಮತ್ತು ಹೈಕಮಾಂಡ್ ಗೋಕಾಕ ಸೇರಿದಂತೆ ಇತರ ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆದಷ್ಟು ಬೇಗ ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಧಿಕೃತ ಗೊಳಿಸಲಾಗುವದು ಎಂದ ಅವರು ಪಕ್ಷದ ಆದೇಶ ಅನುಸಾರ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು ಎಂದು ಹೇಳಿದರು. ಕೆಲವು ಕ್ಷೇತ್ರಗಳಲ್ಲಿ ಒಂದು, ಕೆಲವು ಕ್ಷೇತ್ರಗಳಲ್ಲಿ ಎರೆಡರಿಂದ ಮೂರು ಅಭ್ಯರ್ಥಿಗಳ ಹೆಸರು ಕಳುಹಿಸಲಾಗಿತ್ತು ಕೊನೆಯಲ್ಲಿ ಅಳೆದು ತೂಗಿ ಹೈಕಮಾಂಡ್ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಿದೆ. ಕೆಲವರಿಗೆ ಟಿಕೆಟ್ ಸಿಗಬೇಕಾಗಿತ್ತು, ಆದರೆ ಸಿಕ್ಕಿಲ್ಲ ಅನಿವಾರ್ಯವಾಗಿ ಪಕ್ಷ ಟಿಕೆಟ್ ನೀಡಿದವರನ್ನು ಬೆಂಬಲಿಸಿ ಪಕ್ಷದ ಆದೇಶ ಪಾಲನೆ ಮಾಡಬೇಕಾಗಿದೆ ಎಂದು ಹೇಳಿದರು.
ಚಿತ್ರ ನಟ ಸುದೀಪ್ ಅವರನ್ನು ಬಿಜೆಪಿ ಬಳಿಸಿಕೊಳ್ಳುತ್ತಿದೆ : ಕನ್ನಡ ಚಿತ್ರರಂಗದ ನಟ ಸುದೀಪ್ ಅವರನ್ನು ಬಿಜೆಪಿ ಪಕ್ಷ ಬಳಿಸಿಕೊಳ್ಳುತ್ತಿದ್ದೆ ಅಷ್ಟೇ. ಸುದೀಪ್ ಅವರ ತಮಗೆ ಬೇಕಾದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದಷ್ಟೇ ಹೇಳಿದ್ದಾರೆ ಹೋರೆತು ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿಲ್ಲಾ, ಕಳೆದ ಚುನಾವಣೆಯಲ್ಲಿ ಬಿಜೆಪಿ ವಾಲ್ಮೀಕಿ ಸಮುದಾಯ ಮತಗಳನ್ನು ಪಡೆಯಲು ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಹೇಳಿ ಕೊನೆಯಲ್ಲಿ ಮಾಡಲೇ ಇಲ್ಲ, ಇದು ಹಾಗೆಯೇನೆ ಸುದೀಪ್ ಅವರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಪ್ರಚಾರ ಮಾಡಿದರು ಏನು ಆಶ್ಚರ್ಯ ಪಡಬೇಕಾಗಿಲ್ಲ ಎಂದ ಅವರು ಬಿಜೆಪಿ ತಮ್ಮ ಲಾಭಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದವಿದೆ ಎಂದು ವ್ಯಂಗ್ಯವಾಡಿದ ಅವರು ಸುದೀಪ್ ಪ್ರಚಾರದಿಂದ ಯಾರಿಗೂ ಲಾಭವಾಗುವದಿಲ್ಲ ಇದು ಸುದೀಪ್ ಅವರಿಗೆ ನಷ್ಟವಾಗುತ್ತದೆ. ಏಕೆಂದರೆ ಸುದೀಪ್ ಅವರ ಅಭಿಮಾನಿಗಳು ಕಾಂಗ್ರೆಸ್ ಪಕ್ಷದಲ್ಲಿಯೂ ಇದ್ದಾರೆ, ಜೆಡಿಎಸ್ ಪಕ್ಪದಲ್ಲಿಯೂ ಇದ್ದಾರೆ ಅವರು ಒಂದು ಪಕ್ಷದ ಪರ ಪ್ರಚಾರ ಮಾಡಿದರೆ ಬೇರೆ ಪಕ್ಷದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಾರೆ ಹಾಗಾಗಿ ಇದು ಸುದೀಪ್ ಅವರಿಗೆ ಹಿನ್ನಡೆಯಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಎಲ್ಲಾ ಸಮೀಕ್ಷೆಯಲ್ಲಿ ಮುಂದಿದೆ : ರಾಜ್ಯದಲ್ಲಿ ನಡೆಯುತ್ತಿರುವ ಎಲ್ವಾ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ ಮುಂದಿದೆ. ಈ ಸಾರಿ ಕಾಂಗ್ರೆಸ್ ಪರವಾಗಿ ವಾತಾವರಣವಿದೆ. ಜನಸಾಮಾನ್ಯರು ಕೇಂದ್ರ ಮತ್ತು ರಾಜ್ಯ ಸರಕಾರದ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ.ಈ ಸಾರಿ ಕರ್ನಾಟಕ ಜನತೆ ಕಾಂಗ್ರೆಸ್ ಪರವಾಗಿ ನಿಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.