ಗೋಕಾಕ:ಗೋಕಾಕ ಕಾಂಗ್ರೆಸ್ ಟಿಕೆಟ್ ಬದಲಾವಣೆ ಸಾಧ್ಯತೆ ?
ಗೋಕಾಕ ಕಾಂಗ್ರೆಸ್ ಟಿಕೆಟ್ ಬದಲಾವಣೆ ಸಾಧ್ಯತೆ ?
ಗೋಕಾಕ ಏ 10 : ಮೊನ್ನೆಯಷ್ಟೇ ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಡಾ.ಮಹಾಂತೇಶ ಕಡಾಡಿ ಅವರಿಗೆ ಘೋಷಣೆ ಯಾಗಿರುವ ಬೆನ್ನಲ್ಲೇ ಗೋಕಾಕ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ನಲ್ಲಿ ಅಸಮಾಧಾನ ಹೆಚ್ಚಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಸಹ ಕೆರಳಿಸುವಂತೆ ಮಾಡಿದೆ.
ಕಳೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದ ಅಶೋಕ್ ಪೂಜಾರಿ ಅವರನ್ನು 2023 ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಕೊಡುವುದಾಗಿ ಭರವಸೆ ನೀಡಿ ಪಕ್ಷಕ್ಕೆ ಕರೆದುಕೊಂಡು ಬರಲಾಗಿತ್ತು ಮತ್ತು ಕೆಪಿಸಿಸಿ ವತಿಯಿಂದ ಅಶೋಕ್ ಪೂಜಾರಿ ಅವರ ಏಕೈಕ ಹೆಸರನ್ನು ಶಿಫಾರಸು ಮಾಡಿ ಹೈಕಮಾಂಡ್ ಗೆ ರವಾನಿಸಲಾಗಿತ್ತು. ಆದರೆ ದೆಹಲಿ ಮಟ್ಟದಲ್ಲಿ ಜಿಲ್ಲಾ ಕಾಂಗ್ರೆಸ್ ಗೆ ತಿಳಿಸದೆ. ಅವರ ಗಮನಕ್ಕೆ ತಾರದೆ ಅಶೋಕ್ ಪೂಜಾರಿ ಅವರ ಹೆಸರು ತಗೆದು ಹೊಸ ಮುಖ ಡಾ.ಮಹಾಂತೇಶ ಕಡಾಡಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಲಾಗಿದೆ . ಹೈಕಮಾಂಡ್ ನ ಈ ಕ್ರಮ ಗೋಕಾಕ ಅಷ್ಟೇ ಅಲ್ಲಾ ಇಡೀ ಜಿಲ್ಲೆಗೆ ಶಾಕ್ ನೀಡಿದೆ . ಶಾಸಕ ಸತೀಶ್ ಜಾರಕಿಹೊಳಿ ಅವರು ಕೂಡಾ ಹೈಕಮಾಂಡ್ ನಿರ್ಧಾರಕ್ಕೆ ಬಹಿರಂಗ ಅಲ್ಲದಿದ್ದರೂ ಕೂಡಾ ಒಳಗೊಳಗೆ ಬೆಸರಗೊಂಡಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂರ್ಪಕಿಸಿ ಗೋಕಾಕ ಟಿಕೆಟ್ ವಿಚಾರವಾಗಿ ಚರ್ಚೆ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು. ಸೋಮವಾರ ಸಾಯಂಕಾಲ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಗೋಕಾಕ ಮತಕ್ಷೇತ್ರದ ಕೈ ಟಿಕೆಟ್ ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹೀಗೆನಾದರೂ ಆದರೆ ಡಾ.ಮಹಾಂತೇಶ ಕಡಾಡಿ ಅವರ ಬದಲಾಗಿ ಅಶೋಕ್ ಪೂಜಾರಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ
.