RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದಲ್ಲಿ ಜ್ಞಾನಮಟ್ಟ ಹೆಚ್ಚಿಸಲು ಸಹಕಾರಿ : ಪ್ರಾಚಾರ್ಯ ಐ.ಎಸ್.ಪವಾರ

ಗೋಕಾಕ:ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದಲ್ಲಿ ಜ್ಞಾನಮಟ್ಟ ಹೆಚ್ಚಿಸಲು ಸಹಕಾರಿ : ಪ್ರಾಚಾರ್ಯ ಐ.ಎಸ್.ಪವಾರ 

ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದಲ್ಲಿ ಜ್ಞಾನಮಟ್ಟ ಹೆಚ್ಚಿಸಲು ಸಹಕಾರಿ : ಪ್ರಾಚಾರ್ಯ ಐ.ಎಸ್.ಪವಾರ

ಗೋಕಾಕ ಏ 12 : ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದಲ್ಲಿ ಜ್ಞಾನಮಟ್ಟ ಹೆಚ್ಚಿಸಲು ಸಹಕಾರಿ ಯಾಗುತ್ತವೆ ಎಂದು ಎಸ್.ಎಲ್.ಜೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಸಿಂಡಿಕೇಟ್ ಸದಸ್ಯ ಐ.ಎಸ್ ಪವಾರ್ ಹೇಳಿದರು.
ಬುಧವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ  ಕಾಲೇಜ್ ಆಫ್ ಎಜುಕೇಶನ್ (ಬಿ.ಇಡಿ) ನಾ ವಿವಿಧ ಒಕ್ಕೂಟಗಳ ಮತ್ತು ಸಂಘಗಳ ಹಾಗೂ ಸಾಂಸ್ಕೃತಿಕ ಕ್ರೀಡಾ ಚುಟುವಟಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು
ಅಪಾರವಾದ ಕನಸುಗಳೊಂದಿಗೆ ಪದವಿ ಪಡೆಯುತ್ತಿರುವ ಪ್ರಾಶಿಕ್ಪಣಾರ್ಥಿಗಳು  ಸೂಕ್ತ ಮಾರ್ಗದರ್ಶನ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಸತತ ಪ್ರಯತ್ನಶೀಲರಾದರೆ ಸಾಧನೆ ಸುಲಭ ಸಾಧ್ಯ ಎಂದ ಅವರು ಈ ನಿಟ್ಟಿನಲ್ಲಿ ಮಹಾವಿದ್ಯಾಲಯವು  ವಿದ್ಯಾರ್ಥಿಗಳ ಸಾಧನೆಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಂಸ್ಥೆಗಳು ಬೆಳೆಯಬೇಕಾದರೆ ಯೋಜನೆ ರೂಪಿಸುವ ಯೋಜಕರು, ಮುನ್ನಡೆದು ಅಭಿವೃದ್ದಿ ಹೊಂದಲು ಆರ್ಥಿಕ ಪ್ರಬಲತೆಯನ್ನು ಒದಗಿಸುವ ಜನರ ಸಹಕಾರ ಮುಖ್ಯ ಹಾಗೂ  ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಗೈಯುವ ಶಿಕ್ಷಕರು ಅತ್ಯವಶ್ಯಕ . ಅದರಂತೆ ಎಲ್.ಇ ಟಿ  ಸಂಸ್ಥೆ ಇಂದು ರಾಜ್ಯಮಟ್ಟದಲ್ಲಿ  ಗುರುತಿಸಿಕೊಳ್ಳಬೇಕಾದರೆ ಇವರೆಲ್ಲರ ನಿಸ್ವಾರ್ಥ ಸೇವೆ ಕಾರಣ. ಅದರಲ್ಲಿಯೂ ಮುಖ್ಯವಾಗಿ ಸಂಸ್ಥೆಯ ವ್ಯವಸ್ಥಾಪಕ  ನಿರ್ದೇಶಕ ಸನತ್ ಜಾರಕಿಹೊಳಿ ಹಾಗೂ ಅವರ ತಂಡದ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ‌‌‌‌‌‌‌‌‌‌‌‌ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಮಾತನಾಡಿ ಈ ವೇದಿಕೆಗಳ ಸದುಪಯೋಗದಿಂದ ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಪ್ರತಿಭಾವಂತರಾಗಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹಾಗೂ ಪ್ರಾಚಾರ್ಯ ಐ.ಎಸ್ ಪವಾರ ಅವರು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಸಿಂಡಿಕೇಟ್ , ಅಕ್ಯಾಡಮಿ ಕೌನ್ಸಿಲ್ ಹಾಗೂ ವಿದ್ಯಾರ್ಥಿ ಕಲ್ಯಾಣ ಸಲಹಾ ಘಟಕಕ್ಕೆ ಸದಸ್ಯರಾಗಿ ಆಯ್ಕೆ ಹಿನ್ನೆಲೆಯಲ್ಲಿ ಅವರನ್ನು ಸತ್ಕರಿಸಲಾಯಿತು.
ವೇದಿಕೆಯಲ್ಲಿ ಪ್ರಾಚಾರ್ಯ ಎ.ಬಿ.ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ಲಕ್ಷ್ಮಿ ಜಟ್ಟೇನ್ನವರ, ಕೀರ್ತಿ ಖಾನಟ್ಟಿ ಇದ್ದರು.ಲತಾ ಕಾಗಲಕೊಂಬಾ ಸ್ವಾಗತಿಸಿದರು, ಕೀರ್ತಿ ಲಕ್ಷ್ಮೇಶ್ವರ ವಂದಿಸಿದರು.

Related posts: