RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ಕಾರ್ಯಕರ್ತರೆ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಬೇಕು: ಬೆನಚಿಣಮರಡಿ ಗ್ರಾಮದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದ ರಮೇಶ ಜಾರಕಿಹೊಳಿ

ಗೋಕಾಕ:ಕಾರ್ಯಕರ್ತರೆ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಬೇಕು: ಬೆನಚಿಣಮರಡಿ ಗ್ರಾಮದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದ ರಮೇಶ ಜಾರಕಿಹೊಳಿ 

ಕಾರ್ಯಕರ್ತರೆ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಬೇಕು: ಬೆನಚಿಣಮರಡಿ ಗ್ರಾಮದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದ ರಮೇಶ ಜಾರಕಿಹೊಳಿ

ಗೋಕಾಕ ಏ 21 : ತಾಲೂಕಿನ ಬೆನಚಿನಮರಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು 7ನೇ ಬಾರಿ ಆಯ್ಕೆ ಬಯಸಿ ತಮ್ಮ ಚುನಾವಣಾ ಪ್ರಚಾರವನ್ನು  ಪಾದಯಾತ್ರೆ ಮಾಡುವ ಮೂಲಕ ಮತಯಾಚನೆ ಮಾಡಿದರು
ಈ ಸಂದರ್ಭದಲ್ಲಿ ನೂರಾರು ಗ್ರಾಮಸ್ಥರು ಪಾಲ್ಗೊಂಡು ಶಾಸಕರಗೆ  ಅಭೂತಪೂರ್ವ ಸ್ವಾಗತ ಕೋರಿದರು. ನಂತರ ಗ್ರಾಮದ ವಿವಿಧ ಓಣಿಗಳಲ್ಲಿ ಸಂಚರಿಸಿ ಈ ಬಾರಿಯೂ ನನ್ನನ್ನು ಆರ್ಶಿವದಿಸಿ ದಾಖಲೆಯ ಅಂತರದಿಂದ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು ಈ ಬಾರಿಯ ಚುನಾವಣೆಯಲ್ಲಿ ಕಾರ್ಯಕರ್ತರೆ  ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಬೇಕು. ರಮೇಶ್ ಜಾರಕಿಹೊಳಿ ಅವರ ಗುರ್ತು ಕಮಲ ಎಂದು ತಾಯಂದಿರಿಗೆ ತಿಳಿಹೇಳಬೇಕು. ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗಳಿಗೆ ಕಿವಿಕೊಡದೆ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು‌ . ನನ್ನ ಅಭಿವೃದ್ಧಿ ಕಾಮಗಾರಿಗಳನ್ನು ಗಮನಿ ಈ ಸಾರಿ ನನಗೆ ಹೆಚ್ಚಿನ  ಮತಗಳ ಅಂತರದಿಂದ ಗೆಲ್ಲಿಸಬೇಕು.  ನೀರಾವರಿ, ಆರೋಗ್ಯ ,ಶಿಕ್ಷಣಕ್ಕೆ ಮಹತ್ವ ನೀಡಿ ರಾಜ್ಯದಲ್ಲಿ ಗೋಕಾಕ ಮತಕ್ಷೇತ್ರದವನ್ನು ಅಭಿವೃದ್ಧಿ ಪಡಿಸೋಣ. ಚಹಾ ಮಾರಿ ಕಷ್ಟಪಟ್ಟು ಇಂದು ಮೋದಿ ಅವರು ದೇಶದ ಪ್ರಧಾನಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾರತವನ್ನು ಗುರುತಿಸುವ ಕಾರ್ಯಮಾಡಿದ್ದಾರೆ‌. 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಿ, ಜನಸಾಮಾನ್ಯರ ಕಷ್ಟಗಳನ್ನು ಅರಿತ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡೋಣ ಎಂದ ಅವರು ಲಕ್ಷ್ಮಣ ಸವದಿ, ಶೆಟ್ಟರ್ ಅವರು ಪಕ್ಷ ಬಿಟ್ಠಟಿದ್ದು, ಪಕ್ಷಕ್ಕೆ ಹಾನಿ ಆಗುವುದಿಲ್ಲ. ಡಿಕೆಶಿ ಅವರ ಷಡ್ಯಂತ್ರ  ಮಾಡುತ್ತಿದ್ದಾರೆ. ನಾನು ವಾಲ್ಮೀಕಿ ಸಮಾಜದಲ್ಲಿ ಹುಟ್ಟಿದರೂ ಸಹ  ಹಿಂದುಳಿದ ಜನರ ಪ್ರತಿನಿಧಿಯಾಗಿ ಕಾರ್ಯಾಮಾಡುತ್ತೇನೆ ನನಗೆ ಈ ಬಾರಿ ಆರ್ಶಿವದಿಸಿಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಟಿ.ಆರ್.ಕಾಗಲ, ಮಡೆಪ್ಪ ತೋಳಿನವರ, ರಾಜೇಂದ್ರ ಗೌಡಪ್ಪಗೋಳ, ಭೀಮಶಿ ಭರಮನ್ನವರ,  ಲಕ್ಕಪ್ಪ ಮಾಳಗಿ , ಲಕ್ಷ್ಮಣ ಕಿಲಾರಿ, ಹನುಮಂತಗೌಡ ಪಾಟೀಲ, ಪ್ರಕಾಶ ವಡ್ಡರ, ಮುತ್ಯೆಪ್ಪಾ ಕಿಲಾರಿ, ವಿಠಲ ಗುಂಡಿ, ಬಾಳೇಶ ಗಿಡ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .

Related posts: