RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ಜೆಡಿಎಸ್ ಸೇರಿ 6 ಜನ ಕಣದಿಂದ ಹಿಂದೆ : ಅಂತಿಮವಾಗಿ ಶಾಸಕ ರಮೇಶ ಜಾರಕಿಹೊಳಿ, ಡಾ.ಮಹಾಂತೇಶ ಕಡಾಡಿ ಸೇರಿ ಒಟ್ಟು 10 ಜನ ಕಣದಲ್ಲಿ

ಗೋಕಾಕ:ಜೆಡಿಎಸ್ ಸೇರಿ 6 ಜನ ಕಣದಿಂದ ಹಿಂದೆ : ಅಂತಿಮವಾಗಿ ಶಾಸಕ ರಮೇಶ ಜಾರಕಿಹೊಳಿ, ಡಾ.ಮಹಾಂತೇಶ ಕಡಾಡಿ ಸೇರಿ ಒಟ್ಟು 10 ಜನ ಕಣದಲ್ಲಿ 

ಜೆಡಿಎಸ್ ಸೇರಿ 6 ಜನ ಕಣದಿಂದ ಹಿಂದೆ : ಅಂತಿಮವಾಗಿ ಶಾಸಕ ರಮೇಶ ಜಾರಕಿಹೊಳಿ, ಡಾ.ಮಹಾಂತೇಶ ಕಡಾಡಿ  ಸೇರಿ ಒಟ್ಟು 10 ಜನ ಕಣದಲ್ಲಿ

ಗೋಕಾಕ ಏ 24 : ಕರ್ನಾಟಕ ವಿಧಾನಸಭೆ ಚುನಾವಣೆ 2023ರ ನಾಮಪತ್ರ ವಾಪಸ್ ಪಡೆಯಲು ಸಮಯ ಅಂತ್ಯವಾಗಿದ್ದು, ಕೊನೆಯ ದಿನವಾದ ಏಪ್ರಿಲ್ 24ರಂದು ಹಲವರು ನಾಪಪತ್ರ ವಾಪಸ್ ಪಡೆದಿದ್ದಾರೆ.  ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದೆ ಬಂಡಾಯವೆದ್ದಿದ್ದ ಹಲವರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು.
ಗೋಕಾಕ ಮತಕ್ಷೇತ್ರದಲ್ಲಿ ಆಯ್ಕೆ ಬಯಸಿ ಒಟ್ಟು 16 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಸೋಮವಾರದಂದು ನಾಮಪತ್ರ ವಾಪಸ ಪಡೆಯಲು ಕೊನೆಯ ದಿನವಾಗಿದ್ದರಿಂದ ಜೆಡಿಎಸ್ ಸೇರಿ ಒಟ್ಟು 6 ಜನ ಅಭ್ಯರ್ಥಿಗಳು ಚುನಾವಣೆ ಕಣದಿಂದ ಹಿಂದೆ ಸರಿದು ತಮ್ಮ ನಾಮಪತ್ರವನ್ನು ವಾಪಸ ಪಡೆದುಕೊಂಡಿದ್ದಾರೆ.
ಚಂದನ ಗಿಡ್ನವರ , ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ಜ ಅಮರನಾಥ ಜಾರಕಿಹೊಳಿ, ಸಂಜೀವ ಪೂಜಾರಿ, ಸತೀಶ್ ಪೂಜಾರಿ, ಪ್ರಕಾಶ ಬಾಗೋಜಿ,ಬಸವರಾಜ ಹುದ್ದಾರ ತಮ್ಮ ನಾಮಪತ್ರವನ್ನು ವಾಪಸ ಪಡೆದುಕೊಂಡಿದ್ದಾರೆ.
ಅಂತಿಮವಾಗಿ ಬಿಜೆಪಿಯಿಂದ ಶಾಸಕ ರಮೇಶ ಜಾರಕಿಹೊಳಿ, ಕಾಂಗ್ರೆಸ್ ವತಿಯಿಂದ ಡಾ.ಮಹಾಂತೇಶ ಕಡಾಡಿ, ಆಮ್ ಆದ್ಮಿ ಪಾರ್ಟಿ ವತಿಯಿಂದ ಜೆ.ಎಂ ಕರೆಪ್ಟಗೋಳ, ಬಹುಜನ ಸಮಾಜ ಪಾರ್ಟಿಯಿಂದ ಬಿ‌.ಲೋಹತ, ಸೋಸಲಿಯಸ್ಟ ಪಾರ್ಟಿ ಇಂಡಿಯಾ ವತಿಯಿಂದ ಜಗದೀಶ್ ಸಿ.ಕೆ., ಉತ್ತಮ ಪ್ರಜಾಕೀಯ ಪಾರ್ಟಿ ಯಿಂದ  ಸುರೇಶ್ ಪಟ್ಟಣಶೆಟ್ಟಿ, ಸ್ವಯಂ ಕೃಷಿ ಪಾರ್ಟಿ ಯಿಂದ ಹಣಮಂತ ನಾಗನೂರ, ಪುಂಡಲೀಕ ಕುಳ್ಳೂರ,ಭೀಮಶಿ ನಾಯಿಕ,ಸುರೇಶ್ ಮರಲಿಂಗಣ್ಣವರ ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಅಂತಿಮವಾಗಿ ಒಟ್ಟು 10 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದರೂ ಸಹ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಎಲ್ಲರೂ ಮೇ 10 ರಂದು ನಡೆಯುವ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ.

Related posts: