ಗೋಕಾಕ:ಡಾ.ಮಹಾಂತೇಶ ಕಡಾಡಿ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು
ಡಾ.ಮಹಾಂತೇಶ ಕಡಾಡಿ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು
ಗೋಕಾಕ ಏ 24 : ಗೋಕಾಕ ಮತಕ್ಷೇತ್ರದ ರಾಜನಕಟ್ಟಿ, ಗಡಾ ಹಾಗೂ ಕಡಬಗಟ್ಟಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಗೂ ವಿದ್ಯುತ್‍ನಿಂದ ವಂಚಿತವಾಗಿದೆ ಎಂದು ಕಾಂಗ್ರೇಸ್ ಅಭ್ಯರ್ಥಿ ತಮ್ಮ ಪ್ರಣಾಳಿಕೆಯಲ್ಲಿ ಮುದ್ರಿಸಿರುವದು ಸತ್ಯಕ್ಕೆ ದೂರವಾಗಿದೆ ಎಂದು ಆ ಗ್ರಾಮಗಳ ಗ್ರಾಮಸ್ಥರು ಹೇಳಿದರು.
ಅವರು, ಸೋಮವಾರದಂದು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ, ನಮ್ಮ ಗ್ರಾಮಗಳು ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ಸೇರಿದಂತೆ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಪಡೆದಿದೆ. ಶಾಸಕರು ನಮ್ಮ ಗ್ರಾಮಗಳಿಗೆ ಎಲ್ಲ ರೀತಿಯ ಯೋಜನೆಗಳೊಂದಿಗೆ ಗ್ರಾಮಗಳ ಅಭಿವೃದ್ಧಿಗೆ ಸ್ಫಂಧಿಸುತ್ತಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿಯ ಈ ಪ್ರಕಟನೆಯಿಂದ ನಮ್ಮ ಗ್ರಾಮಗಳ ಹೆಸರು ಕೇಡುತ್ತಿದೆ. ಬೇರೆ ಗ್ರಾಮಗಳ ಗ್ರಾಮಸ್ಥರು ಸಂಬಂಧವನ್ನು ಬೆಳೆಸಲು ಹಿಂದೆ ಸರೆಯುತ್ತಿದ್ದಾರೆ. ಇದರಿಂದ ಗ್ರಾಮದ ಮರ್ಯಾದೆ ಹೋಗುತ್ತಿದೆ. ರಾಜಕೀಯಕ್ಕಾಗಿ ಇಂತಹ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಉಗ್ರ ಹೋರಾಟ ಮಾಡಲಾಗುವದು. ತಕ್ಷಣ ಕ್ಷಮೆಯಾಚಿಸದಿದ್ದಲ್ಲಿ ನಾವು ಆ ಅಭ್ಯರ್ಥಿಗೆ ಬಹಿಷ್ಕಾರ ಹಾಕುವದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಕಾಂತ ಬಾದರವಾಡಿ, ಯಲ್ಲಪ್ಪ ಪೂಜೇರಿ, ಆನಂದ ಬಾರಿಮರದ, ರಾಜು ಕೌಸನಗೌಡರ, ಮಲ್ಲಪ್ಪ ನೇಸರಗಿ, ಸಿದ್ಧಪ್ಪ ಗಸ್ತಿ, ನಾಗಪ್ಪ ದೊಡ್ಡನ್ನವರ, ಹಾಲಪ್ಪ ಕೌಸನಗೌಡರ, ಬಸವಣ್ಣಿ ಬಾದರವಾಡಿ ಸೇರಿದಂತೆ ಅನೇಕರು ಇದ್ದರು.