ಗೋಕಾಕ:ಕಳೆದ 3 ದಶಕಗಳಿಂದ ಗೋಕಾಕ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಮೇಶ ಜಾರಕಿಹೊಳಿ ಅವರಿಗೆ ಇನ್ನಷ್ಟು ಶಕ್ತಿ ತುಂಬಿ : ಬಸವರಾಜ ಖಾನಪ್ಪನವರ
ಕಳೆದ 3 ದಶಕಗಳಿಂದ ಗೋಕಾಕ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಮೇಶ ಜಾರಕಿಹೊಳಿ ಅವರಿಗೆ ಇನ್ನಷ್ಟು ಶಕ್ತಿ ತುಂಬಿ : ಬಸವರಾಜ ಖಾನಪ್ಪನವರ
ಗೋಕಾಕ ಮೇ 3 : ಕಳೆದ 3 ದಶಕಗಳಿಂದ ಗೋಕಾಕ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಮೇಶ ಜಾರಕಿಹೊಳಿ ಅವರಿಗೆ ಇನ್ನಷ್ಟು ಶಕ್ತಿ ತುಂಬಲು ಬಿಜೆಪಿ ಪಕ್ಷಕ್ಕೆ ಮತ ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮನವಿ ಮಾಡಿದರು.
ಬುಧವಾರದಂದು ಗೋಕಾಕ ಮತಕ್ಷೇತ್ರದ ಪಾಮಲದಿನ್ನಿ, ನವಿಲಮಾಳ, ಕುಂದರಗಿ, ತೆಳಗಿನಟ್ಟಿ, ದಾಸನಟ್ಟಿ ಗ್ರಾಮದದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.
ಗೋಕಾಕ ಮತಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಸರಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಮಾಡಿ ಗ್ರಾಮಗಳನ್ನು ಅಭಿವೃದ್ಧಿ ಪತದತ್ತ ಕೊಂಡೈಯ್ಯುವ ಕಾರ್ಯವನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಅವರನ್ನು 7ನೇ ಬಾರಿಗೆ ಶಾಸಕರನ್ನಾಗಿ ಮಾಡಿ ಗೋಕಾಕ ಮತಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಅವರಿಗೆ ಸಹಕಾರ ನೀಡಲು ಬರುವ ಮೇ 10 ರಂದು ಜರಗುವ ಚುನಾವಣೆಯಲ್ಲಿ ಅವರಿಗೆ ಮತನೀಡಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ, ಪಪ್ಪು ಹಂದಿಗುಂದ, ಬಸವರಾಜ ಗಾಡಿವಡ್ಡರ, ರಾಮ ಕಂಗನೋಳ್ಳಿ, ಸಂಜೀವ ಗಾಡಿವಡ್ಡರ, ರಮೇಶ ಪುಂಡಬಂಗಿ, ಲಕ್ಷ್ಮಣ ಗೋರಗುದ್ದಿ, ಮುಗುಟ ಪೈಲವಾನ, ಯಾಸಿನ್ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.