ಗೋಕಾಕ:ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ನ್ಯಾಯವಾದಿಗಳ ಸಂಘ ಸಂಪೂರ್ಣ ಬೆಂಬಲ : ರಾಜು ಕೊಟಗಿ
ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ನ್ಯಾಯವಾದಿಗಳ ಸಂಘ ಸಂಪೂರ್ಣ ಬೆಂಬಲ : ರಾಜು ಕೊಟಗಿ
ಗೋಕಾಕ ಮೇ 3 : ಪ್ರಭುದ್ಧ ಅನುಭವಿ ರಾಜಕಾರಣಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ನ್ಯಾಯವಾದಿಗಳ ಸಂಘ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಕೊಟಗಿ ಹೇಳಿದರು.
ಬುಧವಾರದಂದು ನಗರದ ನ್ಯಾಯಾಲಯದ ಆವರಣದ ನ್ಯಾಯವಾದಿಗಳ ಸಂಘದ ಕಾರ್ಯಾಲಯದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಮತಯಾಚನೆಗೆ ಆಗಮಿಸಿದ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಅವರು ಅದ್ಭುತ ಜಯ ಸಾಧಿಸಿ ಒಳ್ಳೆಯ ಕಾರ್ಯಗಳನ್ನು ಮಾಡಲೆಂದು ಹಾರೈಸಿದರು.
ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಮಾತನಾಡುತ್ತ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಸರಕಾರ ರಚಿಸಲಿದೆ. ಬಿಜೆಪಿ ಪಕ್ಷ ಶಿಸ್ತುಬದ್ಧ ಪಕ್ಷವಾಗಿದ್ದು ಎಲ್ಲ ಸಮುದಾಯಗಳ ಅಭಿವೃದ್ಧಿ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದ ಅಭಿವೃದ್ಧಿಗಾಗಿ ಕಾರ್ಯಪ್ರವೃತ್ತವಾಗಿದೆ. ಕಾಂಗ್ರೇಸ್ ಪಕ್ಷ ತನ್ನ ದೋರಣೆಯಿಂದ ಅವನತಿಯತ್ತ ಸಾಗುತ್ತೀದೆ. ಸರ್ವೋಚ್ಛ ನ್ಯಾಯಾಲಯದಲ್ಲಿರುವ ಮಹಾಜನ ವರದಿಯ ತೀರ್ಪು ಬಂದ ನಂತರ ನಮ್ಮ ನಿಮ್ಮೇಲ್ಲರ ಬೇಡಿಕಾದ ಗೋಕಾಕ ಜಿಲ್ಲೆ ಮಾಡಲು ಕಾರ್ಯಪ್ರವೃತ್ತರಾಗೋಣ ಎಂದ ಅವರು ರಾಜ್ಯದ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ನ್ಯಾಯವಾದಿಗಳು ಬಿಜೆಪಿ ಪಕ್ಷವನ್ನು ಬೆಂಬಲಿಸಿ ನನಗೆ ತಮ್ಮ ಮತಗಳನ್ನು ನೀಡುವ ಮೂಲಕ ಆಶೀರ್ವಧಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಬಿ ಬಿ ಬೀರಣಗಡ್ಡಿ, ಸಹ ಕಾರ್ಯದರ್ಶಿ ಜಗದೀಶ ಕಂಬಾರ, ನ್ಯಾಯವಾದಿಗಳಾದ ಎಸ್ ಪರಪ್ಪನವರ, ಎಮ್ ಆರ್ ಭಜಂತ್ರಿ, ಎಸ್ ವ್ಹಿ ದೇಮಶೆಟ್ಟಿ, ವಿ ಎಚ್ ಗಡೇನ್ನವರ, ಸಿ ಡಿ ಹುಕ್ಕೇರಿ, ಕೆ ಟಿ ಉದಪುಡಿ, ಜಿ ಆರ್ ಪೂಜೇರಿ, ಎಸ್ ಬಿ ನೇಸರಗಿ, ಆರ್ ಎಸ್ ಬೀರಣ್ಣವರ, ಎಲ್ ಎಚ್ ಭಂಡಿ, ರಮೇಶ ಭಂಡಿ, ಚೇತನ ಚಂದರಗಿ ಸೇರಿದಂತೆ ಅನೇಕರು ಇದ್ದರು.