RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ : ಕರವೇ ಅಧ್ಯಕ್ಷ ಬಸವರಾಜ ಮನವಿ

ಮೂಡಲಗಿ:ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ : ಕರವೇ ಅಧ್ಯಕ್ಷ ಬಸವರಾಜ ಮನವಿ 

ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಅವರನ್ನು ಅತ್ಯಧಿಕ ಮತಗಳಿಂದ  ಗೆಲ್ಲಿಸಿ : ಕರವೇ ಅಧ್ಯಕ್ಷ ಬಸವರಾಜ ಮನವಿ

ಮೂಡಲಗಿ ಮೇ 4 : ಕೆಎಂಎಫ್ ಅಧ್ಯಕ್ಷ  ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ 5 ಬಾರಿ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿಯು ಮತದಾರರು ಅವರನ್ನು ಅತ್ಯಧಿಕ ಮತಗಳಿಂದ  ಗೆಲ್ಲಿಸಬೇಕು ಎಂದು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ  ಮನವಿ ಮಾಡಿದರು.
ಗುರುವಾರದಂದು ಅರಭಾವಿ ಮತಕ್ಷೇತ್ರದ ಬಳೋಬಾಳ, ಹುಣಶ್ಯಾಳ.ಪಿ.ಜಿ., ಧರ್ಮಟ್ಟಿ, ರಾಜಾಪೂರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಪರ ಮನೆ,ಮನೆಗೆ ತೆರಳಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜನಪರ ಆಡಳಿತ ನೀಡುತ್ತಿವೆ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ತಂದು ಅರಭಾವಿ ಮತಕ್ಷೇತ್ರವನ್ನು ನಂದನವನ ಮಾಡಿರುವ ಬಾಲಚಂದ್ರ  ಜಾರಕಿಹೊಳಿ ಅವರು ಅರಭಾವಿ ಮತಕ್ಷೇತ್ರದ ದೇವರು ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ‌. ಅವರನ್ನು ಬರುವ ಮೇ 10 ಜರಗುವ ಚುನಾವಣೆಯಲ್ಲಿ ಮತಗಳನ್ನು ನೀಡುವ ಮೂಲಕ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ, ಬಸವರಾಜ ಕಾಡಾಪೂರ, ರಾಮನಾಯಕಿ ನಾಯಿಕ,ಮಲ್ಲಪ್ಪ ಕೊಣ್ಣೂರ, ಪುಂಡಲೀಕ ಸುಕಂದ, ಗಂಗಪ್ಪ ಡಬ್ಬನವರ, ಕೆಂಚಪ್ಪ ತಿಗಡಿ,ಮಹಾದೇವ ಮಕ್ಕಳಗೇರಿ,ಕಿರಣ ತೊಗರಿ,ಸಂತೋಷ ಹೂಲಿಕಟ್ಟಿ, ಶಿವಾನಂದ ಸಂಕಣ್ಣವರ,ಹಸನಸಾಬ ನದಾಫ,ಅಮನ ನದಾಫ, ಇಮ್ರಾನ್ ಫಿರಜಾದೆ,ಕೆಂಪಣ್ಣ ಬಡಕವ್ವಗೋಳ,ರಾಜು ಹರಿಜನ,ಬಸವರಾಜ ಮೇಗಡಿ,ಮಲೀಕ ನಾಯಕ, ಪರಶುರಾಮ ಬಿಲಕುಂದಿ, ಸಂಜೀವ ಯಕ್ಷಂಬಿ. ಭೀಮಶಿ ಕೆಂಪವ್ವಗೋಳ.ರಾಜು ಪೂಜೇರಿ ಚೂನಪ್ಪ ತಳಗಡೆ.ಲಕ್ಷ್ಮಣ್ ಯಕ್ಷಂಬಿ,ಭೀಮಪ್ಟ ಪೂಜೇರಿ,ಲಗಮಣ್ಣ ಕುಟ್ರಿ, ಮುತ್ತೆಪ್ಪ ಪೂಜೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Related posts: