RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ರಾಜ್ಯದಲ್ಲಿ ಸುಭದ್ರ ಆಡಳಿತ ನೀಡಲು ಬಿಜೆಪಿ ಪಕ್ಷವನ್ನು ಬೆಂಬಲಿಸಿ : ರಮೇಶ ಜಾರಕಿಹೊಳಿ

ಗೋಕಾಕ:ರಾಜ್ಯದಲ್ಲಿ ಸುಭದ್ರ ಆಡಳಿತ ನೀಡಲು ಬಿಜೆಪಿ ಪಕ್ಷವನ್ನು ಬೆಂಬಲಿಸಿ : ರಮೇಶ ಜಾರಕಿಹೊಳಿ 

ರಾಜ್ಯದಲ್ಲಿ ಸುಭದ್ರ ಆಡಳಿತ ನೀಡಲು ಬಿಜೆಪಿ ಪಕ್ಷವನ್ನು ಬೆಂಬಲಿಸಿ : ರಮೇಶ ಜಾರಕಿಹೊಳಿ

ಗೋಕಾಕ ಮೇ 4 : ರಾಜ್ಯದಲ್ಲಿ ಸುಭದ್ರ ಆಡಳಿತ ನೀಡಲು ಬಿಜೆಪಿ ಪಕ್ಷವನ್ನು ಬೆಂಬಲಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಹಕರಿಸುವಂತೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು.
ಅವರು, ತಾಲೂಕಿನ ಮೇಲ್ಮಟ್ಟಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿ ಮಾತನಾಡಿ, ಕಳೆದ ಮೂರು ದಶಕಗಳಿಂದ ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ ಸುಮಾರು 95ಪ್ರತಿಶತದಷ್ಟು ಕ್ಷೇತ್ರವನ್ನು ನೀರಾವರಿ ಕ್ಷೇತ್ರವನ್ನಾಗಿ ಮಾರ್ಪಡಿಸಲು ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಶಿಕ್ಷಣ, ಆರೋಗ್ಯ ಸೇರಿದಂತೆ ಉತ್ತಮ ರಸ್ತೆಗಳ ಜೊತೆಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಮತ್ತೊಮ್ಮೆ ನಮ್ಮ ಸೇವೆ ಮಾಡಲು ಅನುಕೂಲ ಮಾಡಿಕೋಡುವಂತೆ ವಿನಂತಿಸಿದರು.
ನನ್ನ ಕ್ಷೇತ್ರದಲ್ಲಿ ಹಿಂದು, ಮುಸ್ಲಿಂ, ಕ್ರೀಶ್ಚಿಯನ್ ಸಮುದಾಯ ಸೇರಿ ಎಲ್ಲರೂ ಭಾವೈಕ್ಯತೆಯಿಂದ ಜೀವನ ನಡೆಸುತ್ತಿದ್ದಾರೆ. ಮೊದಲಿನಿಂದಲೂ ಪಕ್ಷಾತೀತವಾಗಿ ಜಾತ್ಯಾತೀತವಾಗಿ ನನ್ನನ್ನು ಬೆಂಬಲಿಸಿದ್ದಿರಿ. ಕಳೆದ ಉಪಚುನಾವಣೆಯಲ್ಲಿ ಸ್ವಲ್ಪ ಮತಗಳ ವಿಕೇಂದ್ರಿಕರಣವಾಯಿತು. ಆದರೆ ಈ ಬಾರಿ ಹಾಗೇ ಆಗದಂತೆ ಕಾರ್ಯಕರ್ತರು ವಯಸ್ಸಾದ ಹಿರಿಯರಿಗೆ ತಿಳಿಸಿ ನನ್ನ ಭಾವಚಿತ್ರ ಗಮನಿಸಿ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಹೇಳಬೇಕು. ಬಿಜೆಪಿ ಸರಕಾರ ಮತ್ತೋಮ್ಮೆ ಅಧಿಕಾರಕ್ಕೆ ತರುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡಯ್ಯೋಣ ಎಂದರು.
ಈ ಬಾರಿ ಹಿಂದು, ಮುಸ್ಲಿಂ ಕ್ರೀಶ್ಚಿಯನ್ ಸಮುದಾಯ ಸೇರಿ ಎಲ್ಲರೂ ಈ ಬಾರಿ ಬಿಜೆಪಿ ಬೆಂಬಲಿಸುತ್ತಿರುವದು ಗೋಕಾಕ ಮತಕ್ಷೇತ್ರದಲ್ಲಿ ನನಗೆ ಹೆವ್ಮ್ಮೇಯ ಸಂಗತಿ. ವಿರೋಧಿಗಳು ನಮ್ಮ ಬಗ್ಗೆ ಹಲವು ವರ್ಷಗಳಿಂದ ಅಪಪ್ರಚಾರ ಮಾಡುತ್ತ ಬಂದಿದ್ದಾರೆ. ಅವರ ಮಾತುಗಳಿಗೆ ಕಿವಿಗೋಡಬೇಡಿ. ಮತದಾರರಾದ ನೀವು ಬುದ್ಧಿವಂತರು. ನಿಮ್ಮ ಆಯ್ಕೆ ಬಿಜೆಪಿಯೇ ಆಗಿರುತ್ತದೆ ಹೀಗಾಗಿ ವಿರೋಧಿಗಳು ಹತಾಶರಾಗಿದ್ದಾರೆ. ತಮ್ಮ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ. ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಅತ್ಯಧಿಕ ಮತಗಳ ಅಂತರದಲ್ಲಿ ಆರಿಸಿ ತರುವಂತೆ ಕೋರಿದರು.
ಕಡಬಗಟ್ಟಿ, ಮಲೇಬೈಲ, ಗೊಡಚಿನಮಲ್ಕಿ, ಶಿವಾಪೂರ, ನಂದಗಾವ, ಖಾನಾಪೂರ, ಸಾವಳಗಿ, ಮುತ್ನಾಳ, ಕೊಣ್ಣೂರ, ಮರಡಿಮಠ, ನಾಯಿವಾಡಿ, ಮಾನಿಕವಾಡಿ, ವಾಲ್ಮೀಕಿ ನಗರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಭರ್ಜರಿ ಸ್ವಾಗತ ಮಾಡಿದರು. ಅಭಿಮಾನಿಗಳು ಹೂಮಳೆಗೈದು ಸುಮಂಗಲೆಯರು ಆರತಿ ಮಾಡಿ ಸ್ವಾಗತಿಸಿದ್ದು ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು-ಸದಸ್ಯರು, ಪುರಸಭೆ ಅಧ್ಯಕ್ಷರು-ಸದಸ್ಯರು, ಜನಪ್ರತಿನಿಧಿಗಳು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: