RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಮೇ 13 ರಂದು ಬಿಜೆಪಿ ಪಕ್ಷ 130 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಮತ್ತೆ ಸರಕಾರ ರಚಿಸಲಿದೆ : ರಮೇಶ ಜಾರಕಿಹೊಳಿ ವಿಶ್ವಾಸ

ಗೋಕಾಕ:ಮೇ 13 ರಂದು ಬಿಜೆಪಿ ಪಕ್ಷ 130 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಮತ್ತೆ ಸರಕಾರ ರಚಿಸಲಿದೆ : ರಮೇಶ ಜಾರಕಿಹೊಳಿ ವಿಶ್ವಾಸ 

ಮೇ 13 ರಂದು ಬಿಜೆಪಿ ಪಕ್ಷ 130 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಮತ್ತೆ ಸರಕಾರ ರಚಿಸಲಿದೆ  : ರಮೇಶ ಜಾರಕಿಹೊಳಿ ವಿಶ್ವಾಸ

ಗೋಕಾಕ ಮೇ 10 : ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದು, ಮೇ 13 ರಂದು ಬಿಜೆಪಿ ಪಕ್ಷ 130 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಮತ್ತೆ ಸರಕಾರ ರಚಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು
ಬುಧವಾರದಂದು ನಗರದ ಎನ್.ಇ ಎಸ್ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 136 ರಲ್ಲಿ  ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಮತ ಚಲಾವಣೆ ಮಾಡಿ ಪತ್ರಕರ್ತರೊಂದಿಗೆ  ಮಾತನಾಡಿದರು.
ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ 13 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದ್ದೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ , ಜೆ.ಪಿ.ನಡ್ಡಾ, ನಳಿನಕುಮಾರ್ ಕಟಿಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಬಿಜೆಪಿ  ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಪಕ್ಷ ಗೆಲ್ಲಲು ಶ್ರಮಿಸಿದ್ದಾರೆ ಅವರಿಗೆ ಧನ್ಯವಾದಗಳು ಎಂದ ರಮೇಶ   ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಡಿಕೆಶಿ ಅವನಿಂದ ಬ್ಲ್ಯಾಕ್ಮೇಲ್ : ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಹಿಂದೆ ಸರಿಯಲು ಮಹಾನಾಯಕ ಡಿಕೆಶಿ ನನಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಎಂದು ಇದೇ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದರು. ರಾಜ್ಯದಲ್ಲಿ ಬರುವ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸಿ.ಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ನಿನ್ನೆ ರಾತ್ರಿ 12 ಘಂಟೆಗೆ ಪೋನ ಮಾಡಿ ಸಿ.ಡಿ.ಬಿಡುತ್ತೇನೆ ಎಂದು  ನನ್ನ ಮೇಲೆ ಬ್ಲ್ಯಾಕ್ಮೇಲ್ ತಂತ್ರ ಉಪಯೋಗಿಸಿದ್ದಾರೆ. ಸಿಬಿಐ ತನಿಖೆಗೆ ಆದರೆ ನಾನೋಬ್ಬ ಅಲ್ಲ ನೂರಾರು ಜನರು ನೆಮ್ಮದಿಯಿಂದ ಬಾಳುತ್ತಾರೆ. ನಾನೊಬ್ಬ ಗಟ್ಟಿಯಾಗಿ ನಿಂತಿದ್ದೇನೆ ಎಂದರು. ಡಿಕೆಶಿ ಒಬ್ಬ ದೊಡ್ಡ ರಾಜಕಾರಣಿ , ಮುಖ್ಯಮಂತ್ರಿ ಆಕಾಂಕ್ಷಿ ಇಂತಹ ಸಣ್ಣ ಮಟ್ಟದ ರಾಜಕೀಯ ಮಾಡಬಾರದು. ನಾನು ಧೈರ್ಯದಿಂದ ಎಲ್ಲವನ್ನು ಎದುರಿಸಲು ಸಿದ್ಧನಿದ್ದೇನೆ. ಅವನ ನನ್ನ ಸಂಬಂಧ ಸರಿಯಿದ್ಜಾಗ ಡಿಕೆಶಿ ಒಳ್ಳೆಯ ವ್ಯಕ್ತಿ ಇದ್ದ ವಿಷಕನ್ಯೆ ಹಿಂದೆ ಬಿದ್ದು ಹೀಗೆ ಮಾಡುತ್ತಿದ್ದಾನೆ. ಮುಂದೆ ಮಂತ್ರಿ ಮಂಡಳ ರಚನೆ ಸಂದರ್ಭದಲ್ಲಿಯೂ ಅವನು ನನಗೆ ಬ್ಲ್ಯಾಕ್ಮೇಲ್ ಮಾಡುತ್ತಾನೆ.ವಿಷಕನ್ಯೆಯನ್ನು ಬಿಟ್ಟು ಹಿಂದೆ ಸರಿಯಲ್ಲ ಎಂದರ ಅವನಿಗೆ ಭವಿಷ್ಯವಿಲ್ಲ  ಎಂದು ಅವರು ವೈಯಕ್ತಿಕ ಅವನೊಂದಿಗೆ ನನಗೆ ದ್ವೇಷವಿಲ್ಲ ವಿಷಕನ್ಯೆಯಿಂದ ಅವನು ಹೋರಬರಬೇಕು ಎಂದು ಸಲಹೆ ನೀಡಿದರು.

ಬೈಕ್ ಮೇಲೆ ಬಂದು ಮತ ಚಲಾವಣೆ :  ಮತದಾನದ ದಿನವಾದ ಬುಧವಾರದಂದು ಬೆಳಿಗ್ಗೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು  ತಮ್ಮ ಪುತ್ರ ಅಮರನಾಥ ನೊಂದಿಗೆ ಬೈಕ್ ಮೇಲೆ ಬಂದು ಮತದಾನ ಮಾಡಿದರು. ಬೈಕ್ ಮೇಲೆ ಬಂದು ಮತ ಚಲಾವಣೆ ಮಾಡುವುದು ಶುಭ ಎಂದು ತಿಳಿದಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಕಳೆದ 6 ಅವಧಿಗೂ ಸಹ ಮಗನ ಜೊತೆ ಬೈಕ್ ಮೇಲೆ ಬಂದು ಮತದಾನ ಮಾಡಿದ್ದು, ಈ ಬಾರಿಯೂ ಬೈಕ್ ಸಂಪ್ರದಾಯವನ್ನು ಮುಂದು ವರೆಸಿದರು.

Related posts: