ಗೋಕಾಕ:ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಉದ್ಯೋಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ : ಮಂಜುನಾಥ್ ಸಿ
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಉದ್ಯೋಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ : ಮಂಜುನಾಥ್ ಸಿ
ಗೋಕಾಕ ಮೇ 12 : ವಿದ್ಯಾರ್ಥಿಗಳಿಗೆ ಕೌಶಲ್ಯ ಶಿಕ್ಷಣ ತರಬೇತಿ, ಔದ್ಯೋಗಿಕ ತರಬೇತಿ,ವ್ಯಕ್ತಿತ್ವ ವಿಕಸನ ಸೇರಿದಂತೆ ಅನೇಕ ಪ್ರೇರಣಾ ತರಬೇತಿಗಳನ್ನು ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಉದ್ಯೋಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸೆಲೋನಿಸ ಪ್ರೋಸೆಸ್ಸ ಮೈನಿಂಗ್ ಕಂಪನಿಯ ಬಿಜನಿಸ್ ಡವಲೇಪಮೆಂಟ್ ಆಪೀಸರ ಮಂಜುನಾಥ್ ಸಿ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಬಿಸಿಎ ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಲು ಕರ್ನಾಟಕದ 7 ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ ಪ್ರಾರಂಭಿಸಲಾದ ಸೆಲೋನಿಸ್ ಸೆಂಟರ್ ಆಫ್ ಎಕ್ಸಲೆನ್ಸ್ ನ್ನು ಉದ್ಘಾಟಿಸಿ ಮಾತನಾಡಿದ ಅವರು ಉನ್ನತ ಶಿಕ್ಷಣ ವ್ಯವಸ್ಥೆಗೆ ಸಂಬಂಧಸಿದಂತೆ ಸಹಭಾಗಿತ್ವ ಸಾಧಿಸುವ ಅವಕಾಶಗಳನ್ನು ಗುರುತಿಸುವ ಕುರಿತು ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಕಾಲೇಜಿನೊಂದಿಗೆ ಬೆಂಗಳೂರಿನ ಐಸಿಟಿ ಅಕ್ಯಾಡಮಿ, ಗ್ಲೋಬಲ್ ಟೈಲೆಂಟ್ ಟ್ರ್ಯಾಕ್ , ಸೆಲೋನಿಸ ಪ್ರೋಸೆಸ್ಸ ಮೈನಿಂಗ್, ಟೇಕ್ ಪ್ರಾರ್ಚೂನ ಟೆಕ್ನಾಲಜಿಸ್ಸ, ರೂಬಿಕಾನ ಸ್ಕಿಲ್ ಡವಲೇಪಮೆಂಟ್ ಹಾಗೂ ಕೋರೆಂಪೊ ಟೆಕ್ನಾಲಜಿ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ವಿದ್ಯಾರ್ಥಿಗಳಲ್ಲಿ ಶಿಕ್ಷಣ ಪಡೆಯುವಲ್ಲಿ ಆಸಕ್ತಿಗಳನ್ನು ಹೆಚ್ಚಿಸುವುದು ಹಾಗೂ ಕೌಶಲ್ಯಗಳನ್ನು ಮೈಗೂಡಿಸುವಂತೆ ಮಾಡುವುದು ಇಂದಿನ ಅವಶ್ಯಕತೆವಾಗಿದೆ ಅದನ್ನು ಅರಿತು ಈ ಕಂಪನಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕಾರ್ಯ ಮಾಡಲಿವೆ. ಬದಲಾದ ಶೈಕ್ಷಣಿಕ ನೀತಿಯೊಂದಿಗೆ ವಿಧ್ಯಾರ್ಥಿಗಳನ್ನು ಸಿದ್ದಪಡಿಸಿ ಅವರು ವಿದ್ಯಾರ್ಥಿ ಜೀವನದಲ್ಲಿಯೇ ಉದ್ಯೋಗ ಪಡೆದು ಒಳ್ಳೆಯ ಜೀವನ ನಡೆಸ ಬಲ್ಲರು ಎಂಬ ದೃಢವಾದ ಭರವಸೆಯನ್ನು ನೀಡುವ ಕಾರ್ಯವನ್ನು ಕಂಪನಿಯ ನುರಿತ ಅಧಿಕಾರಿಗಳು ಮಾಡಲಿದ್ದಾರೆ ಇದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಅಡಿವೇಶ ಗವಿಮಠ, ವಿವಿಧ ಕಂಪನಿಗಳ ಅಧಿಕಾರಿಗಳಾದ ಪವನ, ತೇಜಸ್ವಿ ಕಟ್ಟಿಮನಿ, ನವೀನ ಸೇರಿದಂತೆ ಬಿಸಿಎ ಕಾಲೇಜಿನ ಪ್ರಾಚಾರ್ಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.