RNI NO. KARKAN/2006/27779|Sunday, December 22, 2024
You are here: Home » breaking news » ಬೆಳಗಾವಿ:ಅಥಣಿಯಲ್ಲಿ ಸವದಿ , ಯಮಕನಮರಡಿಯಲ್ಲಿ ಸತೀಶ ಜಾರಕಿಹೊಳಿ ಭಾರಿ ಗೆಲುವು

ಬೆಳಗಾವಿ:ಅಥಣಿಯಲ್ಲಿ ಸವದಿ , ಯಮಕನಮರಡಿಯಲ್ಲಿ ಸತೀಶ ಜಾರಕಿಹೊಳಿ ಭಾರಿ ಗೆಲುವು 

ಅಥಣಿಯಲ್ಲಿ ಸವದಿ , ಯಮಕನಮರಡಿಯಲ್ಲಿ ಸತೀಶ ಜಾರಕಿಹೊಳಿ ಭಾರಿ ಗೆಲುವು

ಬೆಳಗಾವಿ ಮೇ 13 : ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ 2 ಕ್ಷೇತ್ರೆಳಲ್ಲ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷ ತಮ್ಮ ಖಾತೆಯನ್ನು ತೆರೆದಿದೆ.
ತುಂಬಾ ಜಿದ್ದಾಜಿದ್ದಿನಿಂದ ಕೂಡಿದ್ದ ಅಥಣಿ ಮತ್ತು ಯಮಕನಮರಡಿ ಮತಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ಪ್ರಭಲ ಪೈಪೋಟಿ ಒಡ್ಡಿದ್ದು, ಅಥಣಿ ಮತಕ್ಷೇತ್ರದಲ್ಲಿ ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ಎಡಬಿಡದೆ ಅಥಣಿಯಲ್ಲಿ ಟಿಕಾಣಿ ಹೂಡಿದ್ದರು ಸಹ ಮತದಾರರ ಮಹೇಶ್ ಕುಮಟೋಳ್ಳಿ ಅವರನ್ನು ತಿರಸ್ಕರಿಸಿದ್ದಾರೆ.  ಕಾಂಗ್ರೆಸ್ ಪಕ್ಷದ ಲಕ್ಷ್ಮಣ ಸವದಿ ಭಾರಿ ಗೆಲುವು ಸಾಧಿಸಿದ್ದಾರೆ.
ಇನ್ನೂ ಯಮಕನಮರಡಿ ಮತಕ್ಷೇತ್ರದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಬರುವುದಲ್ಲದೆ. ಭಜರಂಗದಳ, ಆರ್.ಎಸ್.ಎಸ್.ಕಾರ್ಯಕರ್ತರು ಟಿಕ್ಕಾಣಿ ಹೂಡಿ ಪ್ರಚಾರ ಮಾಡಿದರು ಸಹ ಯಾವುದೇ ಪ್ರಯೋಜನ ವಾಗಲಿಲ್ಲ . ಕಳೆದ ಬಾರಿ ಕೆವಲ ಕೆಲವು ಮತಗಳ ಅಂತರದಿಂದ ಗೆದ್ದು ಬಂದಿದ್ದ ಸತೀಶ ಜಾರಕಿಹೊಳಿ ಅವರು ಈ ಬಾರಿ   ಜಯಭೇರಿ ಭಾರಿಸಿದ್ದಾರೆ‌

Related posts: