ಬೆಳಗಾವಿ:ಜಾರಕಿಹೊಳಿ ಸಾಮ್ರಾಜ್ಯ ಭದ್ರ : ರಮೇಶ ,ಸತೀಶ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೆ ಒಲಿದ ವಿಜಯದ ಮಾಲೆ
ಜಾರಕಿಹೊಳಿ ಸಾಮ್ರಾಜ್ಯ ಭದ್ರ : ರಮೇಶ ,ಸತೀಶ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೆ ಒಲಿದ ವಿಜಯದ ಮಾಲೆ
ಗೋಕಾಕ ಮೇ 13 : ರಾಜ್ಯ ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸಿರುವ ಜಾರಕಿಹೊಳಿ ಕುಟುಂಬದ 3 ಸಹೋದರರು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಸಾಮ್ರಾಜ್ಯವನ್ನು ಭದ್ರ ಪಡೆಸಿಕೊಂಡಿದ್ದಾರೆ. ಅತ್ಯಂತ ಕುತೂಹಲ ಕೆರಳಿಸಿದ್ದ ಗೋಕಾಕ , ಅರಭಾವಿ ಮತ್ತು ಯಮಕನಮರಡಿ ಮತಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಗೋಕಾಕ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಒಟ್ಟು 104068 ಮತಗಳನ್ನು ಪಡೆದು 24,637 ಅಂತರದಿಂದ ಗೆಲುವು ಸಾಧಿಸಿದರೆ, ಯಮಕನಮರಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು ಒಟ್ಟು 100290 ಮತಗಳನ್ನು ಪಡೆದು 57211 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹಾಗೂ ಅರಭಾವಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಒಟ್ಟು 114242 ಮತಗಳನ್ನು ಪಡೆದು 71,349 ಮತಗಳ ಅಂತರದಿಂದ ಗೆಲುವು ಸಾಧಿಸಿ 16ನೇ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು 7ನೇ ಭಾರಿಗೆ ಗೆಲುವನ್ನು ಸಾಧಿಸಿದರೆ. ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು 4ನೇ ಬಾರಿಗೆ ಜಯ ಸಾಧಿಸಿದ್ದು, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 6 ನೇ ಬಾರಿಗೆ ವಿಜಯವನ್ನು ಸಾಧಿಸಿ ಜಾರಕಿಹೊಳಿ ಸಾಮ್ರಾಜ್ಯವನ್ನು ಭದ್ರಪಡೆಸಿಕೊಂಡಿದ್ದಾರೆ.