RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನಿಸ್ವಾರ್ಥ ಸೇವೆಯಿಂದ ಜೀವನ ಸಾರ್ಥಕ: ರವೀಂದ್ರ ತಳವಾರ

ಗೋಕಾಕ:ನಿಸ್ವಾರ್ಥ ಸೇವೆಯಿಂದ ಜೀವನ ಸಾರ್ಥಕ: ರವೀಂದ್ರ ತಳವಾರ 

ನಿಸ್ವಾರ್ಥ ಸೇವೆಯಿಂದ ಜೀವನ ಸಾರ್ಥಕ: ರವೀಂದ್ರ ತಳವಾರ

ಗೋಕಾಕ ಮೇ 31 : ಸರ್ಕಾರಿ ಸೇವೆಯಲ್ಲಿದ್ದವರಿಗೆ ನಿವೃತ್ತಿ ಅನಿವಾರ್ಯ. ಆದರೆ ನಿಸ್ವಾರ್ಥ ಸೇವೆಯಿಂದ ಮಾತ್ರ ಜೀವನವನ್ನು ಸಾರ್ಥಕ ಮಾಡಿಕೊಳ್ಳಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ರವೀಂದ್ರ ತಳವಾರ ಹೇಳಿದರು.
ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಎಸ್..ವ್ಹಿ.ಕಲಪ್ಪನವರ ಅವರು ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ  ಸಭಾಂಗಣದಲ್ಲಿ  ಬುಧವಾರದಂದು ಇಲಾಖೆಯ  ನೌಕರರ  ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಲ್ಲರಿಗೂ ಸರ್ಕಾರಿ ಸೇವೆ ಮಾಡುವ ಅವಕಾಶ ದೊರೆಯುವುದಿಲ್ಲ. ಸೇವೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾರು ಸರಿಯಾಗಿ ಸ್ಪಂದಿಸುತ್ತಾರೋ ಅವರು ಬಹಳ ದಿನ ಜನಮನದಲ್ಲಿ ಉಳಿದುಕೊಳ್ಳುತ್ತಾರೆ. ಎಸ್.ವ್ಹಿ.ಕಲಪ್ಪನವರ   ನಿರಂತರವಾಗಿ 34 ವರ್ಷಗಳ ಕಾಲ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸೇವೆ ಮಾಡಿದ್ದು  ಅನನ್ಯವಾಗಿದೆ ಎಂದ ಅವರು ಕಲಪ್ಪನವರ ಅವರ ಸೇವೆ ನಮ್ಮೆಲ್ಲರಿಗೂ ಅನುಕರುಣೀಯವಾಗಿದೆ. ಅವರ ಸುಧೀರ್ಘ ಸೇವೆಯಲ್ಲಿ ಒಮ್ಮೆಯೂ ಉನ್ನತ ಅಧಿಕಾರಿಗಳಿಂದ ಹೇಳಿಸಿಕೊಂಡವರಲ್ಲ.  ಅವರ ಸೇವೆ ನಮ್ಮ ಸಮಾಜ ಕಲ್ಯಾಣ ಇಲಾಖೆಗೆ  ಇನ್ನೂ ಬೇಕಿತ್ತು. ಸರ್ಕಾರ ಆದೇಶದನ್ವಯ ನಿವೃತ್ತಿ ಹೊಂದಿರುವ ಅವರ ಮುಂದಿನ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಎಸ್.ವ್ಹಿ.ಕಲಪ್ಪನವರ ಅವರನ್ನು ಇಲಾಖೆಯ ಸಿಬ್ಬಂದಿಯರು, ವಿವಿಧ ಸಂಘಟನೆಗಳ ಮುಖಂಡರುಗಳು ಸತ್ಕರಿಸಿ, ಬಿಳ್ಕೋಟರು
ಈ ಸಂದರ್ಭದಲ್ಲಿ ಶ್ರೀಮತಿ ಜಯಶ್ರೀ ಗೋಟುರ, ಬಿಇಒಗಳಾದ ಜಿ.ಬಿ.ಬಳಗಾರ, ಅಜೀತ ಮನ್ನಿಕೇರಿ, ಬಿ.ಎಲ್.ಸುಣಗಾರ, ಲಕ್ಷ್ಮಣ ತಳಗಡೆ, ರಮೇಶ ಸಣ್ಣಕ್ಕಿ, ಶಾಮ ಸಣ್ಣಕ್ಕಿ, ಬಾಳೇಶ ಸಂತವ್ವಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: