RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ನಿರ್ದಿಷ್ಠ ಗುರಿಯೊಂದಿಗೆ ಪ್ರಯತ್ನಶೀಲರಾದರೆ ಸಾಧಕರಾಗಬಹುದು : ಶೃತಿ ಯರಗಟ್ಟಿ

ಗೋಕಾಕ:ವಿದ್ಯಾರ್ಥಿಗಳು ನಿರ್ದಿಷ್ಠ ಗುರಿಯೊಂದಿಗೆ ಪ್ರಯತ್ನಶೀಲರಾದರೆ ಸಾಧಕರಾಗಬಹುದು : ಶೃತಿ ಯರಗಟ್ಟಿ 

ವಿದ್ಯಾರ್ಥಿಗಳು ನಿರ್ದಿಷ್ಠ ಗುರಿಯೊಂದಿಗೆ ಪ್ರಯತ್ನಶೀಲರಾದರೆ ಸಾಧಕರಾಗಬಹುದು : ಶೃತಿ ಯರಗಟ್ಟಿ
ಗೋಕಾಕ ಜೂ 7 : ವಿದ್ಯಾರ್ಥಿಗಳು ನಿರ್ದಿಷ್ಠ ಗುರಿಯೊಂದಿಗೆ ಅವಕಾಶಗಳ ಸದುಪಯೋಗ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನಶೀಲರಾದರೆ ಸಾಧಕರಾಗಬಹುದೆಂದು ಯುಪಿಎಸ್‍ಸಿಯಲ್ಲಿ 362ನೇ ರ್ಯಾಂಕ್ ಪಡೆದ ಶೃತಿ ಯರಗಟ್ಟಿ ಹೇಳಿದರು.
ಅವರು, ಬುಧವಾರದಂದು ನಗರದ ಕೆಎಲ್‍ಇ ಸಂಸ್ಥೆಯ ಸಿಎಸ್ ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಸ್ಫರ್ಧಾತ್ಮಕ ಪರೀಕ್ಷೆಗೆ ಅತ್ಯಂತ ಕಠೀಣ ಶ್ರಮ ಅಗತ್ಯ. ಸಾಧಿಸುವ ಛಲದಿಂದ ಸಾಧನೆ ಸಾಧ್ಯ. ಯಶಸ್ಸು ಕಲ್ಲು ಮುಳ್ಳುಗಳ ದಾರಿಯಾಗಿದ್ದು ಅದನ್ನು ಧೈರ್ಯ ಆತ್ಮ ವಿಶ್ವಾಸದಿಂದ ನಡೆದು ಗುರಿ ಮುಟ್ಟಬೇಕು. ಸಾಮಾನ್ಯ ಜ್ಞಾನ ಮಟ್ಟವನ್ನು ಹೆಚ್ಚಿಸಿಕೊಳ್ಳಲು ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಂದೆ ತಾಯಿಗಳ ಸಹಕಾರ ಶಿಕ್ಷಕರ ಪ್ರೋತ್ಸಾಹದಿಂದ ಪ್ರಯತ್ನಶೀಲರಾಗಿ ಪ್ರತಿಭಾನ್ವಿತರಾಗಿರೆಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಮಾತನಾಡುತ್ತ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಸಾಧಕರಾಗಿರಿ ಸಾಧನೆಗೆ ಪೂರಕವಾದ ಎಲ್ಲ ರೀತಿಯ ಸೌಲಭ್ಯಗಳನ್ನು ಸಂಸ್ಥೆಯಿಂದ ಕಲ್ಪಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ರ್ಯಾಂಕ್ ಪಡೆದ ದೀಪಾ ಹೊನ್ನಕುಪ್ಪಿಯನ್ನು ಸತ್ಕರಿಸಲಾಯಿತು.
ವೇದಿಕೆಯ ಮೇಲೆ ಸ್ಥಳೀಯ ಕೆಎಲ್‍ಇ ಆಡಳಿತ ಮಂಡಳಿ ಅಧ್ಯಕ್ಷ ಎಮ್ ಡಿ ಚುನಮರಿ, ಆಡಳಿತಾಧಿಕಾರಿಗಳಾದ ಜಿ ಎಮ್ ಅಂದಾನಿ, ಅನುಪಾ ಕೌಶಿಕ, ಪ್ರಾಚಾರ್ಯರಾದ ಕೆ ಬಿ ಮೇವುಂಡಿ ಹಾಗೂ ಶಿವಾನಂದ ಯರಗಟ್ಟಿ ಇದ್ದರು.
ಪ್ರಾಚಾರ್ಯ ಎಮ್ ಎ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕರಾದ ಬಿ ಎಚ್ ಮಾರದ ನಿರೂಪಿಸಿದರು. ಪಿ ಎಸ್ ಬಾಸೂರ ವಂದಿಸಿದರು.

Related posts: