RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಭಾವನೆಗಳು ಬದಲಾದರೆ ಬದುಕು ಬದಲಾಗುತ್ತದೆ : ಸವಿತಾ ರಮೇಶ

ಗೋಕಾಕ:ಭಾವನೆಗಳು ಬದಲಾದರೆ ಬದುಕು ಬದಲಾಗುತ್ತದೆ : ಸವಿತಾ ರಮೇಶ 

ಭಾವನೆಗಳು ಬದಲಾದರೆ ಬದುಕು ಬದಲಾಗುತ್ತದೆ : ಸವಿತಾ ರಮೇಶ

ಗೋಕಾಕ ಜೂ 14 : ಭಾವನೆಗಳು ಬದಲಾದರೆ ಬದುಕು ಬದಲಾಗುತ್ತದೆ. ಬದುಕು ಬದಲಾದಾಗ ಸುಖಿ ಜೀವನ ಸಾಧ್ಯ ಎಂದು ರಾಷ್ಟ್ರೀಯ ತರಬೇತುದಾರರಾದ  ಸವಿತಾ ರಮೇಶ ಹೇಳಿದರು.
ಮಂಗಳವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾಂಗಣದಲ್ಲಿ ರೋಟರಿ ಸಂಸ್ಥೆ ಹಾಗೂ ಇನರವ್ಹೀಲ್ ಸಂಸ್ಥೆ ಇವರು ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಹಾಗೂ ರೋಟರಿ ಪರಿವಾರದ ಸಭೆಯಲ್ಲಿ ಹ್ಯಾಪಿ ಮ್ಯಾರೇಜ್ ಲ್ಯಾಫ ಕುರಿತು ಮಾತನಾಡುತ್ತಿದ್ದರು.
ಬದುಕಿನಲ್ಲಿ ಧನಾತ್ಮಕ ಭಾವನೆಗಳಿರಬೇಕು. ನಂಬಿಕೆ ವಿಶ್ವಾಸ ಸುಖಿ ಕುಟುಂಬದ ಬುನಾದಿ ಪತ್ನಿಯಿಂದ ಸಿಗುವ ನೆಮ್ಮದಿ ಇಡಿ ಕುಟುಂಬದ ನೆಮ್ಮದಿಯಾಗಿರುತ್ತದೆ. ವರ್ತನೆಯೂ ಆತ್ಮೀಯ ಮಿತ್ರ ಹಾಗೂ ಶತ್ರುವಾಗಿದ್ದು ಅದು ವರವಾಗಬೇಕು. ಬಸವಾದಿ ಶರಣರ ನಾಡಿನಲ್ಲಿ ಬದುಕುತ್ತಿರುವ ನಾವು ಅವರ ಆದರ್ಶಗಳ ಆಚರಣೆಯೊಂದಿಗೆ ಬದುಕಿದರೆ ಸುಖಿ ದಾಂಪತ್ಯ ಜೀವನ ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಸತೀಶ ನಾಡಗೌಡ, ಇನರವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಆರತಿ ನಾಡಗೌಡ, ಪದಾಧಿಕಾರಿಗಳಾದ ಮಹಾಂತೇಶ ತಾವಂಶಿ, ಮಲ್ಲಿಕಾರ್ಜುನ ಈಟಿ, ವಿಶ್ವನಾಥ್ ಕಡಕೋಳ, ವಂದನಾ ವರದಾಯಿ, ಮಲ್ಲಿಕಾರ್ಜುನ ಕಲ್ಲೋಳಿ, ರಾಜು ಮುನ್ನೋಳಿಮಠ, ಸೋಮಶೇಖರ ಮಗದುಮ್ಮ ಇದ್ದರು.

Related posts: