ಗೋಕಾಕ:ಜಗತ್ತಿಗೆ ಗುರು ಶಿಷ್ಯರ ಪರಂಪರೆಯನ್ನು ಪರಿಚಿಯಿಸಿದ ಕೀರ್ತಿ ಭಾರತಕ್ಕೆ ಸಲುತ್ತದೆ : ನಿ. ಶಿಕ್ಷಕ ಶಾಮರಾವ ಕರಿಕಟ್ಟಿ
ಜಗತ್ತಿಗೆ ಗುರು ಶಿಷ್ಯರ ಪರಂಪರೆಯನ್ನು ಪರಿಚಿಯಿಸಿದ ಕೀರ್ತಿ ಭಾರತಕ್ಕೆ ಸಲುತ್ತದೆ : ನಿ. ಶಿಕ್ಷಕ ಶಾಮರಾವ ಕರಿಕಟ್ಟಿ
ಗೋಕಾಕ ಅ 16: ಜಗತ್ತಿಗೆ ಗುರು-ಶಿಷ್ಯರ ಪರಂಪರೆಯನ್ನು ಪರಿಚಯಿಸಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ ಎಂದು ನಿವೃತ್ತ ಶಿಕ್ಷಕ ಶಾಮರಾವ ಕರಿಕಟ್ಟಿ ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾ ಭವನದಲ್ಲಿ ಇಲ್ಲಿಯ ಸರ್ಕಾರಿ ಹೊಸ ಮಾಧ್ಯಮಿಕ ಶಾಲೆಯ 1985-86 ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರು ವಂದನಾ ಹಾಗೂ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಶಿಷ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ತಾವು ಕಲಿತ ಶಾಲೆ, ಕಲಿಸಿದ ಗುರುಗಳ ಸ್ಮರಣೆಯಿಂದ, ಶಿಕ್ಷಕರು ತೋರಿಸಿದ ಸನ್ಮಾರ್ಗದಲ್ಲಿ ನಡೆದರೇ ನೆಮ್ಮದಿಯ ಬದುಕು ಸಾಧ್ಯ. ಪ್ರತಿಯೊಬ್ಬರು ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿ, ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಪರಸ್ಪರ ಪ್ರೀತಿ ವಿಶ್ವಾಸದಿಂದ ಸಮಾಜದ ರಕ್ಷಣೆ ಸೈನಿಕರಂತೆ ಸುಂಸ್ಕøತ ದೇಶವನ್ನು ನಿರ್ಮಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ನಮ್ಮ ಜೀವನದಲ್ಲಿ ಪವಿತ್ರವಾದ ಶಿಕ್ಷಕ ವೃತ್ತಿ ದೊರಕಿದ್ದು ಪುಣ್ಯದ ಕಾರ್ಯವಾಗಿದ್ದು, ಗುರುವಿನ ಕಾರ್ಯವನ್ನು ನಾವು ಯಾವುದೇ ಫಲಾಪೇಕ್ಷೆಯಿಲ್ಲದೆ ನಿರ್ವಹಿಸಿ, ನಾಡಿಗೆ ಒಳ್ಳೆಯ ಪ್ರಜೆಗಳನ್ನಾಗಿ ನಿರ್ಮಿಸುವಲ್ಲಿ ಪ್ರಯತ್ನಿಸಿದ್ದೇವೆ. ತಮ್ಮ ಮುಂದಿನ ಪೀಳಿಗೆಗೆ ಶ್ರೇಷ್ಠ ಸಂಸ್ಕಾರವನ್ನು ನೀಡಿದರೇ ಅದುವೇ ಗುರುವಿಗೆ ನೀಡಬೇಕಾದ ಗುರು ಕಾಣಿಕೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ.ಎ.ಕೋತವಾಲ, ಎ.ಎ.ಬೆಣ್ಣಿ, ಸಿ.ಎಸ್.ಮೇಗಲಮನಿ, ಎಸ್.ಎಂ.ಕರಿಕಟ್ಟಿ, ಎ.ಕೆ.ಜನಾಮದಾರ, ಎಂ.ಬಿ.ಹಾದಿಮನಿ, ಎಸ್.ಎ.ಉಮರಾಣಿ, ಎಂ.ಬಿ.ಗುದಗನವರ, ಎಸ್.ಎನ್.ಪೂಜೇರಿ, ಎಸ್.ಟಿ.ದಳವಾಯಿ, ಎಂ.ಆರ್.ಹರಿದಾಸ, ಬಿ.ಸಿ.ಬಿಳಗಿ, ಎಸ್.ಎಸ್.ಮುನವಳ್ಳಿ, ಆರ್.ಕೆ.ಹಂದಿಗುಂದ, ಸಿ.ಡಿ.ವಾಮನಾಚಾರ್ಯ, ಸಿಬ್ಬಂದಿಗಳಾದ ನಾಗಪ್ಪ ಆಲತಗಿ, ಸುರೇಶ ಆಲತಗಿ, ಕಾಲೆಬಾಯಿ,ಬಬಲಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಘಟಕರಾದ ಶಿವಾನಂದ ಹಿರೇಮಠ, ಬಸವರಾಜ ಹಿರೇಮಠ, ಚಂದ್ರಶೇಖರ ಮಾಸ್ತಿಹೊಳಿಮಠ, ಪ್ರದೀಪ ಅಂಕಲಿ,ರಂಜನಾ ದೇಶಪಾಂಡೆ, ವೀಣಾ, ಮಂಜುಳಾ ಶಿಂಧೆ, ಮಧುಮಾಲತಿ ಬೂದಿ, ಮಹಾಂತೇಶ ಬಾವಿಕಟ್ಟಿ, ಮಂಜುಳಾ ಪ್ರಭಾಕರ, ಜಯಶ್ರೀ ವಿನಯ ಕೊಡ್ಲಿವಾಡಮಠ, ಜಯಂತ ಹಿರಿಯೂರು, ರಾಜು ಕರಗುಪ್ಪಿಕರ, ಸಂಜಯ ಕುಂದವಾಡಕರ,ರಾಜು ಹೆಗ್ಗನ್ನವರ ಸೇರಿದಂತೆ ಇತರರು ಇದ್ದರು.