ಗೋಕಾಕ:ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ : ಡಾ.ವಿಶ್ವನಾಥ್ ಶಿಂಧೋಳಿಮಠ
ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ : ಡಾ.ವಿಶ್ವನಾಥ್ ಶಿಂಧೋಳಿಮಠ
ಗೋಕಾಕ ಜೂ 21 : ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ಡಾ.ವಿಶ್ವನಾಥ್ ಶಿಂಧೋಳಿಮಠ ಹೇಳಿದರು
ಬುಧವಾರದಂದು ನಗರದ ಶ್ರೀ ಚೆನ್ನಬಸವೆಶ್ವರ ವಿದ್ಯಾಪೀಠದಲ್ಲಿ ಹಮ್ಮಿಕೊಂಡ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು
ಇಡೀ ಜಗತ್ತಿನಲ್ಲಿ ಮಧುಮೇಹ ರೋಗಿಗಳು ಭಾರತದಲ್ಲಿ ಹೆಚ್ಚಿದ್ದಾರೆ. ಆ ಕಾರಣಕ್ಕಾಗಿ ಯೋಗ ಭಾರತಿಯರಿಗೆ ಅತಿ ಅವಶ್ಯಕವಾಗಿದೆ.ಯೋಗವು ಶರೀರದಲ್ಲಿರುವ ಮೂಳೆಗಳನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಪ್ರತಿನಿತ್ಯ ಯೋಗ ಮಾಡುವುದನ್ನು ತಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕು. ಟಿವಿ ಮತ್ತು ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಆಹಾರ ಪದ್ದತಿಗಳನ್ನು ಬದಲಾವಣೆ ಮಾಡಿಕೊಳ್ಳಬಾರದು. ಹೀಗೆ ಮಾಡುವುದರಿಂದ ಆರೋಗ್ಯದಲ್ಲಿ ಹೇರು ಪೇರಾಗುತ್ತದೆ. ರೋಗ ಬಂದಾಗ ಆಹಾರ ಪದ್ಧತಿ ಹಾಗೂ ವ್ಯಾಯಾಮಕ್ಕೆ ಮಾರು ಹೋಗದೆ ಪ್ರತಿನಿತ್ಯ ಯೋಗ ಮತ್ತು ವ್ಯಾಯಾಮ ಮಾಡುವುದನ್ನು ರೂಡಿಮಾಡಿಕೊಂಡು ಆರೋಗ್ಯವಂತರಾಗಬೇಕು ಎಂದು ಡಾ.ವಿಶ್ವನಾಥ್ ಶಿಂಧೋಳಿಮಠ ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಯೋಗಪಟ್ಟು ಕುಮಾರಿ ಸವಿತಾ ಕಡಲಿಕರ ವಿದ್ಯಾರ್ಥಿಗಳಿಗೆ ಯೋಗವನ್ನು ಹೇಳಿಕೊಟ್ಟರು
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎ .ಸಿ ಗವಿಮಠ, ಪ್ರಾಚಾರ್ಯರಾದ ಜಗದೀಶ್ ಮುತನಾಳ,ದ್ರಾಕ್ಷಾಯಣಿ ಮಠಪತಿ ಉಪಸ್ಥಿತರಿದ್ದರು