ಗೋಕಾಕ:ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಕೆಎಲ್ಇ ಸಂಸ್ಥೆ ಶ್ರಮಿಸುತ್ತಿದೆ
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಕೆಎಲ್ಇ ಸಂಸ್ಥೆ ಶ್ರಮಿಸುತ್ತಿದೆ
ಗೋಕಾಕ ಜೂ 30 : ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಕೆಎಲ್ಇ ಸಂಸ್ಥೆ ಶ್ರಮಿಸುತ್ತಿದೆ ಎಂದು ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ಶುಕ್ರವಾರದಂದು ನಗರದ ಕೆಎಲ್ಇ ಐಟಿಐ ಕಾಲೇಜಿನಲ್ಲಿ ಬೆಂಗಳೂರಿನ ಇಂಪ್ಯಾಕ್ಟ್ ಸರ್ವಿಸ ಪ್ರಾ.ಲಿ ಹಾಗೂ ಹಿಟಾಚಿ ಮತ್ತು ಇನಕ್ಯಾಫ ತುಮಕೂರು ಇವುಗಳ ಸಂಯೋಜನೆಯೊಂದಿಗೆ ವಿವಿಧ ಐಟಿಐ ಪಾಸಾದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಸಂಸ್ಥೆ ಕಲ್ಪಿಸುತ್ತಿರುವ ಅವಕಾಶಗಳನ್ನು ಸದುಪಯೋಗ ಪಡೆಸಿಕೊಂಡು ಇಂದಿನ ಸ್ವರ್ಧಾತ್ಮಕ ತಾಂತ್ರಿಕ ಯುಗಕ್ಕೆ ಸಿದ್ದರಾಗಬೇಕು. ತಮ್ಮಲ್ಲಿರುವ ಕೌಶಲಗಳನ್ನು ವೃದ್ಧಿಸಿಕೊಂಡು ಉದ್ಯೋಗಿಗಳಾಗಿ ತಮ್ಮ ಬದುಕನ್ನು ರೂಪಿಕೊಳ್ಳುವಂತೆ ಕರೆ ನೀಡಿದರು.
ಈ ಉದ್ಯೋಗಮೇಳದಲ್ಲಿ 90 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಕಂಪನಿಗಳ ಹೆಚ್,ಆರ್ ಗಳಾದ ಜಗದೀಶ್ವರ ಹಾಗೂ ಮುನು ಕೆ.ಜಿ , ಪ್ರಾಚಾರ್ಯ ಪದ್ಮಭೂಷಣ ಪಾಟೀಲ ಇದ್ದರು