ಗೋಕಾಕ:ಪರಿಸರ ಕಾಳಜಿ ಪ್ರತಿಯೊಬ್ಬರ ಜವಾಬ್ದಾರಿ : ಶಾಸಕ ರಮೇಶ ಜಾರಕಿಹೊಳಿ
ಪರಿಸರ ಕಾಳಜಿ ಪ್ರತಿಯೊಬ್ಬರ ಜವಾಬ್ದಾರಿ : ಶಾಸಕ ರಮೇಶ ಜಾರಕಿಹೊಳಿ
ಗೋಕಾಕ ಜು 1 : ನಾವು ಪರಿಸರ ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರ ಕಾಳಜಿ ಪ್ರತಿಯೊಬ್ಬರ ಜವಾಬ್ದಾರಿ ಎಂದು ಮಾಜಿ ಸಚಿವ ,ಶಾಸಕ ರಮೇಶ ಜಾರಕಿಹೊಳಿ ಹೇಳಿದರು .
ಶನಿವಾರದಂದು ಅರಣ್ಯ ಇಲಾಖೆ ವತಿಯಿಂದ ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಶಾಲಾ ಆವರಣದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಪರಿಸರ ಅಸಮತೋಲನದಿಂದಲೇ ಹವಾಮಾನ ವೈಪರಿತ್ಯ ಕಾಣುತ್ತಿದೆ.ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಪರಿಸರ ರಕ್ಷಣೆಗೆ ಹೆಚ್ಚಿನ ಮಹತ್ವ ಕೊಡುವುದು ಅತ್ಯಗತ್ಯವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು
ಈ ಸಂದರ್ಭದಲ್ಲಿ ಜಿಪಂ ಜಿಪಂ ಸದಸ್ಯ ಟಿ.ಆರ್ .ಕಾಗಲ, ತಶೀಲ್ದಾರ್ ಮಂಜುನಾಥ್, ಎ.ಸಿ ಎಫ ರಾಜೇಶ್ವರಿ ಈರನಟ್ಟಿ, ಆರ್ ಎಫ ಓ ಸಂಜೀವ ಸಂವಸುದ್ದಿ, ಬಿಇಒ ಜಿ.ಬಿ.ಬಳಗಾರ, ಎನ್.ಇ.ಎಸ್ ಶಾಲೆಯ ಡಿ.ಎಸ್.ಖೋತ, ಆರ್.ಬಿ.ಮಾವಿನಗಿಡದ, ಮಹಾಂತೇಶ ತಾವಂಶಿ, ಶಾಮಾನಂದ ಪೂಜೇರಿ ಉಪಸ್ಥಿತರಿದ್ದರು.