RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ರಾಗ ಬದ್ಧವಾದ ಕವನಗಳನ್ನು ಬೆಟಗೇರಿ ಕೃಷ್ಣ ಶರ್ಮರು ರಚಿಸಿದ್ದಾರೆ : ಸಾಹಿತಿ ಪುಷ್ಪಾ ಮುರಗೋಡ

ಗೋಕಾಕ:ರಾಗ ಬದ್ಧವಾದ ಕವನಗಳನ್ನು ಬೆಟಗೇರಿ ಕೃಷ್ಣ ಶರ್ಮರು ರಚಿಸಿದ್ದಾರೆ : ಸಾಹಿತಿ ಪುಷ್ಪಾ ಮುರಗೋಡ 

ರಾಗ ಬದ್ಧವಾದ ಕವನಗಳನ್ನು ಬೆಟಗೇರಿ ಕೃಷ್ಣ ಶರ್ಮರು ರಚಿಸಿದ್ದಾರೆ : ಸಾಹಿತಿ ಪುಷ್ಪಾ ಮುರಗೋಡ

ಗೋಕಾಕ ಅ 16: ಶುದ್ಧವಾದ ಅಚ್ಚ ಕನ್ನಡದೊಂದಿಗೆ ಶಬ್ದ ಸಂಪತ್ತಿನಿಂದ ರಾಗ ಬದ್ಧವಾದ ಸುಂದರ ಕವನಗಳನ್ನು ಬೆಟಗೇರಿ ಕೃಷ್ಣ ಶರ್ಮರು ರಚಿಸಿದ್ದಾರೆಂದು ಸಾಹಿತಿ ಪುಷ್ಪಾ ಮುರಗೋಡ ಹೇಳಿದರು.

ರವಿವಾರದಂದು ಇಲ್ಲಿಯ ವಿದ್ಯಾನಗರದಲ್ಲಿ ಡಾ. ಮದಭಾಂವಿಯವರ ನಿವಾಸದಲ್ಲಿ ಶ್ರೀ ಶಿವಯೋಗಿ ತತ್ವ ವಿಚಾರ ವೇದಿಕೆ ಹಾಗೂ ಸೃಜಲಶೀಲ ಸಾಹಿತ್ಯ ಗೆಳಯರ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉಪನ್ಯಾಸ ಹಾಗೂ ತತ್ವಾನುಭವ ಕಾರ್ಯಕ್ರಮದಲ್ಲಿ ಬೆಟಗೇರಿ ಕೃಷ್ಣಶರ್ಮರ ಕವನಗಳ ಕುರಿತು ಉಪನ್ಯಾಸ ನೀಡುತ್ತಿದ್ದರು.

ಕೃಷ್ಣಶರ್ಮರು 7 ಕವನ ಸಂಕಲನಗಳಲ್ಲಿ 208 ಕವನಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ತಮ್ಮ ಕವನಗಳಲ್ಲಿ ಮಕ್ಕಳ ಮನೋಧರ್ಮ, ಕನ್ನಡಾಭಿಮಾನ, ಮಹಿಳೆಯರ ಮನದಾಳ, ಶಬರಿಯ ತ್ಯಾಗ, ದಾಂಪತ್ಯ ಜೀವನ, ಪ್ರಕೃತಿ ವರ್ಣನೆಗಳನ್ನು ಜನಸಾಮಾನ್ಯ ಭಾಷೆಯಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಚಿಕ್ಕನಂದಿ ಶ್ರೀ ಸಿದ್ಧಾರೂಢ ದರ್ಶನ ಪೀಠದ ಶ್ರೀ ಸಹಾಜಾನಂದ ಶ್ರೀಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಸಾಹಿತಿ ಶಾಮರಾವ್ ಕರಿಕಟ್ಟಿ ವಹಿಸಿದ್ದರು. ವೇದಿಕೆ ಮೇಲೆ ಯೋಗಗುರು ಸದಾಶಿವ ಗುರೂಜೀ ಸೃಜನಶೀಲ ಸಾಹಿತ್ಯ ಬಳಗದ ಪ್ರಧಾನ ಕಾರ್ಯದರ್ಶಿ ಭಾರತಿ ಮದಭಾವಿ, ಶಿವಯೋಗಿ ತತ್ವ ವೇದಿಕೆ ಅಧ್ಯಕ್ಷ ವಸಂತ ಕುಲಕರ್ಣಿ, ಮಲ್ಲಿಕಾರ್ಜುನ ಈಟಿ, ಕಾಶಪ್ಪ ಕಲಾಲ, ನಾಗಪ್ಪ ಚಿಪ್ಪಲಕಟ್ಟಿ,ಶಾಮಾನಂದ ಪೂಜಾರಿ ಇದ್ದರು.
ಎಂ.ಬಿ.ಬಿರಾದಾರಪಾಟೀಲ ಸ್ವಾಗತಿಸಿದರು. ಶಕುಂತಲಾ ಹಿರೇಮಠ ನಿರೂಪಿಸಿದರು. ಟಿ.ಸಿ.ಮೊಹರೆ ವಂದಿಸಿದರು.

Related posts: