ಗೋಕಾಕ:ಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನಶೀಲರಾದರೆ ಯಶಸ್ಸು ನಿಶ್ಚಿತ : ತಹಸೀಲ್ದಾರ್ ಮಂಜುನಾಥ ಕೆ
ಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನಶೀಲರಾದರೆ ಯಶಸ್ಸು ನಿಶ್ಚಿತ : ತಹಸೀಲ್ದಾರ್ ಮಂಜುನಾಥ ಕೆ
ಗೋಕಾಕ ಜು 4 : ವಿದ್ಯಾರ್ಥಿಗಳು ಉನ್ನತ ಗುರಿಯೊಂದಿಗೆ ಕಠೀಣ ಪರಿಶ್ರಮದಿಂದ ಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನಶೀಲರಾದರೆ ಯಶಸ್ಸು ನಿಶ್ಚಿತವೆಂದು ತಹಶೀಲದಾರ ಮಂಜುನಾಥ ಕೆ ಹೇಳಿದರು.
ಅವರು, ಸೋಮವಾರದಂದು ನಗರದ ಕೆಎಲ್‍ಇ ಸಿ ಎಸ್ ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಪ್ರತಿಭಾನ್ವಿತರಿಗೆ ಹೆಚ್ಚಿನ ಅವಕಾಶಗಳಿವೆ. ಸರಕಾರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳನ್ನು ಶೈಕ್ಷಣಿಕವಾಗಿ ಕಲ್ಪಿಸಿದ್ದು ಅವುಗಳ ಸದುಪಯೋಗ ಹಾಗೂ ತಂದೆ-ತಾಯಿಯ ಸಕಾರದೊಂದಿಗೆ ಉನ್ನತ ಹುದ್ದೆ ಅಲಂಕರಿಸಿ ನಾಡಿನ ಕೀರ್ತಿ ಹೆಚ್ಚಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆಎಲ್‍ಇ ಸ್ಥಾನಿಕ ಆಡಳಿತ ಮಂಳಿಯ ಚೇರಮನ ಎಮ್ ಡಿ ಚುನಮರಿ, ಆಡಳಿತಾಧಿಕಾರಿ ಜಿ ಎಮ್ ಅಂದಾನಿ, ಪ್ರಾಚಾರ್ಯ ಕೆ ಬಿ ಮೆವುಂಡಿ, ಧಾರವಾಡದ ಮೇರು ಕೋಚಿಂಗ ಸೇಂಟರ ನಿರ್ದೇಶಕ ಡಾ.ರುದ್ರೇಶ ಮೇಟಿ, ಹುಬ್ಬಳ್ಳಿಯ ಸಾಫ್ಟ ಸ್ಕೀಲ್ ಟ್ರೇನರ್ ಲೋಲಾಕ್ಷಿ ಲೋಹಾರ ಇದ್ದರು.
ಉಪನ್ಯಾಸಕರಾದ ಬಿ ಎಮ್ ಪಾಟೀಲ ಸ್ವಾಗತಿಸಿದರು, ಎಮ್ ಎ ಪಾಟೀಲ ನಿರೂಪಿಸಿದರು. ಬಿ ಎಚ್ ಮಾರದ ವಂದಿಸಿದರು.