RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಮೊಬೈಲ್‌ ವಾಪಸ್‌: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಗೋಕಾಕ:ಮೊಬೈಲ್‌ ವಾಪಸ್‌: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ 

ಮೊಬೈಲ್‌ ವಾಪಸ್‌: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಗೋಕಾಕ ಜು 10 : ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡಿರುವ ಮೊಬೈಲ್‌ಗಳನ್ನು ವಾಪಸ ಪಡೆದು ಹೊಸ ಮೊಬೈಲಗಳನ್ನು ನೀಡಿ, ಹೆಚ್ಚಳವಾದ 1 ಸಾವಿರ ರೂ,ಗಳ ಗೌರವಧನವನ್ನು ಬಿಡುಗಡೆ ಮಾಡುವಂತೆ ಸೋಮವಾದಂದು ಇಲ್ಲಿನ ಕರ್ನಾಟಕ ರಾಜ್ಯ ಅಂಗನವಾಡಿ ಸಂಘದ ‌ಸದಸ್ಯರು ಶಿಶು ಅಭಿವೃದ್ಧಿ ಕಛೇರಿಯ ಎದುರು ಪತ್ರಿಭಟನೆ ನಡೆಯಿಸಿ ಸಿಡಿಪಿಓ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಅರ್ಪಿಸಿದರು.
‘2018ರಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಎಲ್‌ಜಿ ಕಂಪನಿಯ 63 ಸಾವಿರ ಮೊಬೈಲ್‌ಗಳನ್ನು ನೀಡಲಾಗಿತ್ತು. ಇದರಲ್ಲಿ, ಪೋಷಣ್ ಅಭಿಯಾನದ ನಿತ್ಯದ ಚಟುವಟಿಕೆಗಳನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ. ಈ ಮೊಬೈಲ್‌ಗಳಲ್ಲಿ ನೆಟ್‌ವರ್ಕ್‌, ರ್‍ಯಾಮ್‌, ಸ್ಟೋರೇಜ್‌ ಸಮಸ್ಯೆ ಇದೆ. ಹೊಸ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶವಿಲ್ಲ’ ಎಂದು ಮನವಿಯಲ್ಲಿ ದೂರಿದ್ದಾರೆ.
‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ಬೇರೆ ಇಲಾಖೆಗಳ ಸಮೀಕ್ಷೆ, ಚುನಾವಣಾ ಕೆಲಸಗಳನ್ನು ಮಾಡಲಾಗುತ್ತಿದೆ. ಈ ಮೊಬೈಲ್‌ಗಳನ್ನು ನಾಲ್ಕು ವರ್ಷಗಳಿಂದ ಬಳಸಿರುವುದರಿಂದ ಇವುಗಳ ಸಾಮರ್ಥ್ಯ ಕುಗ್ಗಿದೆ. ಆದ್ದರಿಂದ, ಮೊಬೈಲ್‌ಗಳ ಬದಲು ಟ್ಯಾಬ್ಲೆಟ್‌ ನೀಡಬೇಕು’ ದೇಶದ 26 ಲಕ್ಷ ಅಂಗನವಾಡಿ ಕಾರ್ಯಯಕರ್ತರು ಹಾಗೂ ಸಹಾಯಕಿಯರ ಜೀವನ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಇದೆ.
ನಮಗೆ ಸಮಾಜಿಕ ಭದ್ರತೆಗಳಾದ ಇಎಸ್ಐ , ಪಿಎಫ್,ಪಿಂಚಣಿ ,ಎಕ್ಸಗ್ರೇಷಿಯಾ ಇತರ ಸೌಲಭ್ಯಗಳನ್ನು ಕೊಡಲೆಬೇಕು.45 &46 ನೇ ಇಂಡಿಯನ್ ಲೇಬಲ್ ಕಾನ್ಫರೆನ್ಸ್ ಗಳ ಶಿಫಾರಸುಗಳನ್ನು ಜಾರಿ ಮಾಡಲೇಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ದೊಡವ್ವ ಪೂಜೇರಿ, ಮುನಿರಾ ಮುಲ್ಲಾ , ಸುನಂದಾ ಹರಿಜನ, ರೇಣುಕಾ ಪೂಜೇರಿ, ಸುಮಿತ್ರಾ ನೇಸರಗಿ, ಸುಮಿತ್ರಾ ನೇಸರಗಿ, ಗೌರವ್ವ ತಳವಾರ, ಚನ್ಶಮ್ಮ ಹೂಲಿ, ಸುವರ್ಣ ಭಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು಼

Related posts: