ಗೋಕಾಕ:ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ಧಾರ್ಮಿಕ ಹಕ್ಕು ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು : ಮೌಲಾನ ಅಬ್ದುಸಸಮಿ ತೆರದಾಳ
ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ಧಾರ್ಮಿಕ ಹಕ್ಕು ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು : ಮೌಲಾನ ಅಬ್ದುಸಸಮಿ ತೆರದಾಳ
ಗೋಕಾಕ ಜು 14 : ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ಧಾರ್ಮಿಕ ಹಕ್ಕು ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು, ಕಾನೂನು ಮಿತಿಯಲ್ಲಿ ಇದರ ವಿರುದ್ಧ ಹೋರಾಟ ನಡೆಯಲಿದೆ ಎಂದು ಪ್ರಮುಖ ಮುಸ್ಲಿಂ ಸಂಘಟನೆ ಜಮಿಯತ್ ಉಲೆಮಾ ಇ ಹಿಂದ್ ನ ತಾಲೂಕು ಘಟಕದ ಕಾರ್ಯದರ್ಶಿ ಮೌಲಾನಾ ಅಬ್ದುಸಸಮಿ ತೆರದಾಳ ಹೇಳಿದರು.
ಶುಕ್ರವಾರಂದು ನಗರದಲ್ಲಿ ಜಮಯತ ಉಲೆಮಾ ಇ ಹಿಂದನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು
‘ಯುಸಿಸಿ ಸಂವಿಧಾನದ ವಿಧಿ 25 ಮತ್ತು 26ರಲ್ಲಿ ದತ್ತವಾಗಿರುವ ಧಾರ್ಮಿಕ ಮತ್ತು ವ್ಯಕ್ತಿ ಸ್ವಾತಂತ್ರದ ವಿರುದ್ಧವಾಗಿದೆ. ಆದರೆ, ಇದರ ವಿರುದ್ಧ ಹೋರಾಟಕ್ಕೆ ನಾವು ಬೀದಿಗಿಳಿಯುವುದಿಲ್ಲ. ಕಾನೂನು ಪ್ರಕಾರವೇ ಹೋರಾಡಲಿದ್ದೇವೆ’ ಎಂದು ತಿಳಿಸಿದ ಅವರು ‘ನಮ್ಮದು ಜಾತ್ಯತೀತ ಸಂವಿಧಾನ. ಆ ಪ್ರಕಾರ, ಪ್ರತಿಯೊಬ್ಬರಿಗೂ ಪೂರ್ಣ ಧಾರ್ಮಿಕ ಸ್ವಾತಂತ್ರ್ಯವಿದೆ. ಅಲ್ಲದೆ, ಸರ್ವರಿಗೂ ತಮ್ಮ ಇಷ್ಟದ ಧರ್ಮ ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಭಾರತದಲ್ಲಿ ನಿರ್ದಿಷ್ಟವಾಗಿ ಅಧಿಕೃತ ಧರ್ಮ ಎಂದು ಇಲ್ಲ’
ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕುವ ಯತ್ನ ಎಂಬ ಕಾರಣಕ್ಕೇ ಆರಂಭದಿಂದಲೂ ಯುಸಿಸಿ ಅನ್ನು ನಾವು ವಿರೋಧಿಸುತ್ತಿದ್ದೇವೆ. ಸಂವಿಧಾನದ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ. ಏಕತೆಗೆ ಭಂಗತರುವ ಇದನ್ನು ಒಪ್ಪಲಾಗದು ಎಂದು ಹೇಳಿದರು .
ನಿರ್ಣಯ ಕುರಿತು ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ಮೌಲಾನಾ ಅಬ್ದುಲ್ಲಾ ಅವರು, ‘ಇದು, ಕೇವಲ ಮುಸಲ್ಮಾನರಿಗೆ ಮಾತ್ರವಲ್ಲ, ಎಲ್ಲ ಭಾರತೀಯರಿಗೂ ಸಂಬಂಧಿಸಿದ ವಿಷಯವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು