RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ರೈತರ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ

ಗೋಕಾಕ:ರೈತರ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ 

ರೈತರ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ

ಗೋಕಾಕ ಜು 15 : ರೈತರ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶನಿವಾರದಂದು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ರೈತರಿಗೆ ಬ್ಯಾಂಕಿನಿಂದ ನೋಟಿಸ್ ನೀಡುವುದನ್ನು ನಿಲ್ಲಿಸಬೇಕು, ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕುಲ ರೈತರಿಗೆ ಬೆಳೆ ವಿಮೆಪರಿಹಾರವನ್ನು ತಕ್ಷಣದಲ್ಲಿ ನೀಡಬೇಕು, ಎಂ.ಎಸ್.ಪಿ ಕಾನೂನನ್ನು ಜಾರಿಗೊಳಿಸಬೇಕು, ಡಾ.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು ಹಾಗೂ ಬರಗಾಲದಿಂದ ಹಾನಿಗೆ ಒಳಗಾದ ಬೆಳೆಗಳನ್ನು ತಕ್ಷಣದಲ್ಲಿ ಸರ್ವೇ ಮಾಡಿ ಸೂಕ್ತ ಪರಿಹಾರ ನೀಡಬೇಕು, ಭೂಮಾಪನ ಇಲಾಖೆಯಲ್ಲಿ ಪಿ.ಟಿ ಸಿಟ್ ತಯಾರಿಸುವಲ್ಲಿ ತಪ್ಪುಗಳನ್ನು ಮಾಡುತ್ತಿರುವದು ಕಂಡು ಬಂದಿದ್ದು ತಪಿಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಬೀಮಶಿ ಗದಾಡಿ, ಜಿಲ್ಲಾಧ್ಯಕ್ಷ ಶಂಕರ ಮದಹಳ್ಳಿ, ಬೀಮಶಿ ಹುಲಕುಂದ, ರಮೇಶ್ ಗೂದಿಗೊಪ್ಪ, ಮುದಕಪ್ಪಾ ಗೌಡಪ್ಪನ್ನವರ, ವೆಂಕಪ್ಟ ಕೊಪ್ಪದ, ರಾಯಪ್ಪ ಗೌಡಪ್ಪನ್ನವರ, ಅವಿನಾಶ್ ಖಾನಪ್ಟನವರ, ಹನುಮಂತ ಹುಚ್ಚೇಲಿ, ನಾಗರಾಜ್ ಗಂಗಪ್ಪಗೋಳ, ಮಲ್ಲಪ್ಪ ಬಂಡಿ, ಹನುಮಂತ ಅಳಗೊಡಿ, ಬಾಳು ಮರೆಪ್ಪಗೋಳ, ಮುತ್ತೇಪ್ಪಾ ಹುಲಕುಂದ, ಸಿದ್ದಪ್ಪಾ ಐದುಡ್ಡಿ, ನಾಗಪ್ಪ ಹೊಸಟ್ಟಿ, ಸಿದ್ದಪ್ಪ ಮರದಿ, ಲಕ್ಷ್ಮಣ ಹಳ್ಳೂರ, ಬಸು ಬಾಗನ್ನವರ, ಸಿದ್ದಪ್ಪಾ ಡೊಳ್ಳಿ, ರಾಯಪ್ಪ ಚಿಪ್ಪಲಕಟ್ಟಿರ ಶಂಕರ ಕಣವಿ ಉಪಸ್ಥಿತರಿದ್ದರು

Related posts: