RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಗುರುವಿನ ಮತ್ತು ತಂದೆ ತಾಯಿಗಳ ಮಾರ್ಗದರ್ಶನದಲ್ಲಿ ಮುನ್ನಡೆದರೆ ಎಲ್ಲವನ್ನು ಸಾಧಿಸಲು ಸಾಧ್ಯ : ಡಾ‌.ಬಶೀರ್ ಅಹ್ಮದ್ ಮತ್ತೆ

ಗೋಕಾಕ:ಗುರುವಿನ ಮತ್ತು ತಂದೆ ತಾಯಿಗಳ ಮಾರ್ಗದರ್ಶನದಲ್ಲಿ ಮುನ್ನಡೆದರೆ ಎಲ್ಲವನ್ನು ಸಾಧಿಸಲು ಸಾಧ್ಯ : ಡಾ‌.ಬಶೀರ್ ಅಹ್ಮದ್ ಮತ್ತೆ 

ಗುರುವಿನ ಮತ್ತು ತಂದೆ ತಾಯಿಗಳ ಮಾರ್ಗದರ್ಶನದಲ್ಲಿ ಮುನ್ನಡೆದರೆ ಎಲ್ಲವನ್ನು ಸಾಧಿಸಲು ಸಾಧ್ಯ : ಡಾ‌.ಬಶೀರ್ ಅಹ್ಮದ್ ಮತ್ತೆ
ಗೋಕಾಕ ಜು 16 : ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿ ಹೊಂದಿ, ಗುರುವಿನ ಮತ್ತು ತಂದೆ ತಾಯಿಗಳ ಮಾರ್ಗದರ್ಶನದಲ್ಲಿ ಮುನ್ನಡೆದರೆ ಎಲ್ಲವನ್ನು ಸಾಧಿಸಲು ಸಾಧ್ಯ ಎಂದು ನಗರದ ಎಲುಬು ಕಿಳು ತಜ್ಞ ಡಾ.ಬಶೀರ ಅಹ್ಮದ್ ಮತ್ತೆ ಹೇಳಿದರು
ರವಿವಾರದಂದು ನಗರದ ನೂರಾನಿ ಶಾದಿ ಮಹಲ ನಲ್ಲಿ ಇಲ್ಲಿನ ಮುಹಬ್ಬೀನ -ಎ – ಉರ್ದು ಸಂಘಟನೆ ಅವರು ದಿವಂಗತ ಶಿಕ್ಷಕ ಸೈಯದ ತರಾಸಗರ ಅವರ ಸ್ಮರಣಾರ್ಥ ಹಮ್ಮಿಕೊಂಡ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ತಮ್ಮ ತಂದೆ ತಾಯಿಗಳು ತಮ್ಮ ಶೇಯೊಬಿವೃದ್ದಿಗೆ ಮಾಡಿದ ತ್ಯಾಗಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ತಂದೆ ತಾಯಿಗಳ ಸೇವೆ ಮಾಡುವ ಜೊತೆಗೆ ಸಮಾಜವನ್ನು ಸದೃಢವನ್ನಾಗಿಸಲು ಶ್ರಮಿಸಬೇಕು. ತಮ್ಮ ಸಾಧನೆಗೆ ಪ್ರೇರಣೆ ನೀಡಿದ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದು ಒಳ್ಳೆಯ ಸಾಧಕರಾಗಬೇಕು ಎಂದು ಹೇಳಿದರು.
‌ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಬೆಳಗಾವಿಯ ಕುಮಾರಿ ಸುಫೀಯಾ ಕರಿಗಾರ ತಂದೆ , ತಾಯಿ ಮತ್ತು ಗುರುಗಳ ಮಾರ್ಗದರ್ಶನ ವಿಲ್ಲದೆ ಏನು ಸಾಧಿಸಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಕನಸುಗಳನ್ನು ಕಂಡು ಅವುಗಳನ್ನು ಸಕಾರಗೊಳಿಸವ ಕಡೆ ಗಮನ ಹರಿಸಬೇಕು ಅಂದಾಗ ನಾವು ಏನು ಬಯಸಿದ್ದಿರಿ ಅದನ್ನು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಜೀವನ ಎಂಬುವುದು ಮುಳ್ಳಿನ ದಾರಿಯಾಗಿದ್ದು ಸತತ ಪರಿಶ್ರಮ ಮತ್ತು ಕಠಿಣ ವೃತಗಳನ್ನು ಕೈಗೊಂಡಾಗ ಮಾತ್ರ ಅವುಗಳನ್ನು ಸಾಧಿಸಲು ಸಾಧ್ಯವಾಗಿದ್ದು, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಗಂಭೀರತೆಯಿಂದ ವಿದ್ಯಾಭ್ಯಾಸ ಮಾಡಿ ಸಾಧಕರಾಗಬೇಕು ಎಂದು ಹೇಳಿದರು
ಇದೇ ಸಂದರ್ಭದಲ್ಲಿ ನಿಟ್ ಪರೀಕ್ಷೆಯಲ್ಲಿ ಸಾಧನೆ ಗೈದ ಕುಮಾರಿ ತಬ್ಬಸುಮ್ಮ ದೇಸಾಯಿ, ಸೂಪೀಯಾ ಕರಿಗಾರ, ತಜೀನ ದಫೇದಾರ,ಮಹ್ಮದಮೊಸೀನ ಅತ್ತಾರ ಅವರನ್ನು ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಖತಾಲಅಹ್ಮದಸಾಬ ಶೇಖ ವಹಿಸಿದ್ದರು
ಕಾರ್ಯಕ್ರಮವನ್ನು ಶಿಕ್ಷಕ ಪಾರುಖ ಖೈರದಿ ನಿರೂಪಿಸಿದರು, ಶಿಕ್ಷಕ ಅಶಪಾಕ ಶಾಖಾಶಖಾನ ಸ್ವಾಗತಿಸಿದರು, ಸೈಯದ ಪಾಶ್ಚಾಪೂರ ವಂದಿಸಿದರು.
ಉರ್ದು ಸಾಹಿತಿ ಡಾ‌.ಯಾಸಿನ್ ತರಾಸಗರ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಜಾವೇದ್ ಗೋಕಾಕ, ಕಾಶೀಮಸಾಬ ಬಸ್ಸಾಪೂರಿ, ಕುತಬುದ್ದೀನ ಗೋಕಾಕ, ಅಬ್ದುಲರಹಮಾನ್ ದೇಸಾಯಿ, ಪ್ರೋ . ಖಾಜಾಫರಾಜ ಇಂಡಿಕರ , ಮೌಲಾನಾ ಅಬ್ದುಲ್ಲಾ , ಹುಸೇನ್ ಫನಿಬಂದ, ಮೀರಾಸಾಬ ಮಾಂಜರಿ, ನಿಸಾರ ಮಕಾಂದಾರ, ನ್ಯಾಯವಾದಿ ಸೈಯದ ಆಬಿದಲ್ಲಿ ಪೀರಜಾದೆ, ಮೌಲಾನಾ ಅಬ್ದುಸಸಮಿ ತೆರದಾಳ, ಮುಸ್ತಾಕ ಖಂಡಾಯತ, ರಿಯಾಜ ಚಟ್ನಿ, ಮಸೂದ ಬಾಳಪ್ರವೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: