RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಲಯನ್ಸ್ ಸದಸ್ಯರ ಪ್ರಾಮಾಣಿಕತೆಯೇ ವಿಶ್ವ ಮಟ್ಟದ ಪ್ರಶಂಸೆಗೆ ಕಾರಣ’

ಗೋಕಾಕ:ಲಯನ್ಸ್ ಸದಸ್ಯರ ಪ್ರಾಮಾಣಿಕತೆಯೇ ವಿಶ್ವ ಮಟ್ಟದ ಪ್ರಶಂಸೆಗೆ ಕಾರಣ’ 

ಲಯನ್ಸ್ ಸದಸ್ಯರ ಪ್ರಾಮಾಣಿಕತೆಯೇ ವಿಶ್ವ ಮಟ್ಟದ ಪ್ರಶಂಸೆಗೆ ಕಾರಣ
ಗೋಕಾಕ ಜು 24 : ಜನಸೇವೆ ಮೂಲಕ ವಿಶ್ವದ ಪ್ರಶಂಸೆಗೆ ಪಾತ್ರವಾದ ಸಂಸ್ಥೆ ಎಂಬ ಹೆಗ್ಗಳಿಕೆಗೆ ‘ಲಯನ್ಸ್ ಕ್ಲಬ್’ ಪಾತ್ರವಾಗಲು ಕ್ಲಬ್’ನ ಪ್ರತಿಯೊಬ್ಬ ಸದಸ್ಯರ ಪ್ರಾಮಾಣಿಕ ಸೇವಾ ಮನೋಭಾವವೇ ಮುಖ್ಯ ಕಾರಣ ಎಂದು ಲಯನ್ಸ್ ಕ್ಲಬ್’ನ ಗೋವಾ 317ಬಿ ಘಟಕದ 2ನೇ ಉಪ ಜಿಲ್ಲಾ ಪ್ರಾಂತಪಾಲ ಜೈಅಮೋಲ್ ನಾಯಿಕ ಅರ್ಥೈಸಿದರು.
ಭಾನುವಾರ ಇಲ್ಲಿನ ಡಾಲರ್ಸ್ ಕಾಲೋನಿ ಕ್ಲಬ್ ಹೌಸ್ ಸಭಾಂಗಣದಲ್ಲಿ ಆಯೋಜಿತ 2023-2024ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರ ಅಧಿಕಾರಿಯಾಗಿ ಪಾಲ್ಗೊಂಡು, ಪ್ರಕ್ರಿಯೆ ಪೂರೈಸಿದ ಬಳಿಕ ಮಾತನಾಡಿದ ಅವರು, ಮಾನವೀಯ ನೆಲೆಗಟ್ಟುಳ್ಳ ಸಂಸ್ಥೆಗೆ ಹೊಸ ಸದಸ್ಯರ ಸೇರ್ಪಡೆ ಎಂಬುದು ಬಹು ಪ್ರಮುಖವಾದ ಹಂತ ಹೀಗಾಗಿ ಕ್ಲಬ್’ನ ಸದಸ್ಯರು ಹೊಸ ಸದಸ್ಯರನ್ನು ಕರೆತರುವ ಯತ್ನ ನಿರಂತರವಾಗಿ ನಡೆಯುತ್ತಿರಲಿ ಎಂದು ಕಿವಿಮಾತು ಹೇಳಿದರು.
ಕ್ಲಬ್ ನೂತನ ಅಧ್ಯಕ್ಷರಾಗಿ ಡಾ. ಅಶೋಕ ಪಾಟೀಲ, ಕಾರ್ಯದರ್ಶಿಯಾಗಿ ಎಚ್.ಬಿ.ಪಾಟೀಲ ಮತ್ತು ಕೋಶಾಧಿಕಾರಿಯಾಗಿ ಶಂಕರ ದೊಡಮನಿ ಅವರು ನಿರ್ಗಮಿತ ಪದಾಧಿಕಾರಿಗಳಿಂದ ಸಂಸ್ಥೆಯ ನಿಯಮಾನುಸಾವ ಅಧಿಕಾರ ಸ್ವೀಕರಿಸಿ, ಪ್ರಮಾಣ ವಚನ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಗೆ ಸೇರ್ಪಡೆಗೊಂಡ ಗಿರೀಶ ಕುಲಕರ್ಣಿ ಮತ್ತು ಕೃಷ್ಣಶರ್ಮಾ ಪಾಟೀಲ ಅವರಿಗೆ ಕ್ಲಬ್’ನ ಪದಾಧಿಕಾರಿಗಳ ಪರವಾಗಿ ವೇದಿಕೆ ಮೂಲಕ ಭವ್ಯ ಸ್ವಾಗತ ಕೋರಿ, ಸದಸ್ಯರ ಜವಾಬ್ದಾರಿಗಳು ಮತ್ತು ಹಕ್ಕುಗಳ ಕುರಿತು ಮನನ ಮಾಡಲಾಯಿತು.
ಅಧಿಕಾರ ಸ್ವಕರಿಸಿದ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಡಾ. ಅಶೋಕ ಎಸ್. ಪಾಟೀಲ ಅವರು, ಕ್ಲಬ್ ಸೇರ್ಪಡೆಗೊಂಡು 11 ವರ್ಷಗಳ ಬಳಿಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಭಾಗ್ಯ ಒದಗಿದೆ ನನ್ನ ಸೇವಾ ಅವಧಿಯಲ್ಲಿ ವಿನೂತನ ಕಾರ್ಯಚಟುವಟಿಕೆಗಳ ಮೂಲಕ ಕ್ಲಬ್’ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಹುಮ್ಮಸ್ಸು ಹೊಂದಿದ್ದು ಸದಸ್ಯರ ಸಹಕಾರದೊಂದಿಗೆ ನನ್ನ ಗುರಿ ತಲುಪುವ ಭರವಸೆ ಇದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿ ಮೂಡಲಗಿ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯೆ ಡಾ. ಭಾರತಿ ಕೋಣಿ, ಕ್ಲಬ್’ನ ಜಿಲ್ಲಾ ಪದಾಧಿಕಾರಿ ವಕೀಲ ಎಂ.ಬಿ.ಪಾಟೀಲ, ಕ್ಯಾಬಿನೆಟ್ ಕಾರ್ಯದರ್ಶಿ ಕೀರ್ತಿ ನಾಯಿಕ, ಅಧ್ಯಕ್ಷತೆ ವಹಿಸಿದ್ದ ಕ್ಲಬ್’ನ ನಿರ್ಗಮಿತ ಅಧ್ಯಕ್ಷ ಡಾ. ಅಶೋಕ ಮುರಗೋಡ ಇದ್ದರು.
ಕ್ಲಬ್’ನ ಹೆಚ್ಚುವರಿ ಕ್ಯಾಬಿನೆಟ್ ಕಾರ್ಯದರ್ಶಿ ವಕೀಲ ಗುರುದೇವ ಸಿದ್ದಾಪೂರಮಠ ಪ್ರಾಸ್ತಾವಿಕ ಮಾತನಾಡಿ, ಗೋಕಾಕ ಲಯನ್ಸ್ ಕ್ಲಬ್ ಶೀಘ್ರವೇ ನೂತನ ಮಹಿಳಾ ಘಟಕವನ್ನು ಹೊಂದಲಿದೆ ಎಂಬ ಮಾಹಿತಿ ನೀಡಿದರು.
ಡಾ. ಅಶೋಕ ಮುರಗೋಡ ಸ್ವಾಗತಿಸಿದರು. ಚಾರ್ಟರ್ಡ ಅಕೌಂಟಂಟ್ ಪುರುಷೋತ್ತಮ ಬಾಫನಾ ಪರಿಚಯಿಸಿದರು. ಮುಖ್ಯ ಶಿಕ್ಷಕ ಎಸ್.ಕೆ.ಮಠದ ನಿರೂಪಿಸಿದರು. ಕಾರ್ಯದರ್ಶಿ ಎಚ್.ಬಿ.ಪಾಟೀಲ

Related posts: