ಗೋಕಾಕ:ಡಾ.ಪ್ರಭಾಕರ ಕೋರೆಯವರ 76ನೇ ಜನ್ಮ ದಿನದ ಪ್ರಯುಕ್ತ 5ಕಿ.ಮೀ ಓಟ ಮತ್ತು ನಡಿಗೆ ಸ್ಫರ್ಧೆ ಆಯೋಜನ
ಡಾ.ಪ್ರಭಾಕರ ಕೋರೆಯವರ 76ನೇ ಜನ್ಮ ದಿನದ ಪ್ರಯುಕ್ತ 5ಕಿ.ಮೀ ಓಟ ಮತ್ತು ನಡಿಗೆ ಸ್ಫರ್ಧೆ ಆಯೋಜನ
ಗೋಕಾಕ ಅ 1 : ನಗರದ ಕೆಎಲ್‍ಇ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ 76ನೇ ಜನ್ಮ ದಿನದ ಪ್ರಯುಕ್ತ 5ಕಿ.ಮೀ ಓಟ ಮತ್ತು ನಡಿಗೆ ಸ್ಫರ್ಧೆಯನ್ನು ಮಂಗಳವಾರದಂದು ಮುಂಜಾನೆ ಆಯೋಜಿಸಲಾಗಿತ್ತು.
ಈ ಸ್ಫರ್ಧೆಯಲ್ಲಿ ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ, ಆಡಳಿತಾಧಿಕಾರಿಗಳಾದ ಜಿ ಎಮ್ ಅಂದಾನಿ, ಅನುಪಾ ಕೌಶಿಕ, ಪ್ರಾಚಾರ್ಯರುಗಳಾದ ಕೆ ಬಿ ಮೇವುಂಡಿಮಠ, ಪದ್ಮಭೂಷನ ಪಾಟೀಲ, ಡಾ.ಈರಣ್ಣ ಕಾಜಗಾರ, ನಂದಾ ಚುನಮುರಿ, ಮನಿಷಾ ಮಾಂಗಳೇಕರ, ಅಮೃತ ಜಕ್ಕಲಿ, ಎಮ್ ಎ ಪಾಟೀಲ, ಡಾ.ಡಿ ಜಿ ಚೌಗಲಾ, ಡಾ.ಅರುಣ ಪಾಟೀಲ, ಗಣ್ಯರಾದ ಸಿಪಿಐ ಶ್ರೀಶೈಲ ಬ್ಯಾಕೂಡ, ರೂಪಾ ಮುನವಳ್ಳಿ, ಓಂಪ್ರಕಾಶ ಅಂಗಡಿ, ಲಯನ್ಸ್ ಸಂಸ್ಥೆಯ ಡಾ.ಅಶೋಕ ಪಾಟೀಲ, ಜಿ ಎಸ್ ಸಿದ್ಧಾಪೂರಮಠ, ಡಾ.ಅಶೋಕ ಮುಗೋಡ, ಡಾ.ಆರ್ ಬಿ ಪಟಗುಂದಿ ಹಾಗೂ ಸಂಸ್ಥೆಯ ಸಿಬ್ಬಂಧಿ, ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.
ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಟ್ರೋಫಿಯೊಂದಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.