ಗೋಕಾಕ:ಕೌಟುಂಬಿಕ ಚಲನಚಿತ್ರ “ಆರಂಭ”ವನ್ನು ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಿ ಕಲಾವಿದರನ್ನು ಆರ್ಶೀವದಿಸಬೇಕು : ಮಂಜುನಾಥ್ ಬಡಿಗೇರ
ಕೌಟುಂಬಿಕ ಚಲನಚಿತ್ರ “ಆರಂಭ”ವನ್ನು ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಿ ಕಲಾವಿದರನ್ನು ಆರ್ಶೀವದಿಸಬೇಕು : ಮಂಜುನಾಥ್ ಬಡಿಗೇರ
ಗೋಕಾಕ ಅ 3 : ಗೋಕಾಕ ತಾಲೂಕಿನ ಸುತ್ತಮುತ್ತಲಿನ ರಮ್ಯತಾಣಗಳಲ್ಲಿ ಚಿತ್ರಿಕರಿಸಿರುವ ಕೌಟುಂಬಿಕ ಚಲನಚಿತ್ರ “ಆರಂಭ”ವನ್ನು ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಿ ಕಲಾವಿದರನ್ನು ಆರ್ಶೀವದಿಸಬೇಕೆಂದು ಚಿತ್ರದ ನಾಯಕ ನಟ ಹುಬ್ಬಳ್ಳಿಯ ಮಂಜುನಾಥ್ ಬಡಿಗೇರ ಹೇಳಿದರು.
ಬುಧವಾರದಂದು ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಶುಕ್ರವಾರ ನಗರದ ಲಕ್ಷ್ಮೀ ಚಿತ್ರಮಂದಿರದಲ್ಲಿ “ಆರಂಭ” ಚಲನಚಿತ್ರ ಬಿಡುಗಡೆಯಾಗಲಿದ್ದು, ಮಹಿಳೆಯರ ಮೇಲೆ ದೇಶಾದ್ಯಂತ ನಡೆಯುತ್ತಿರುವ ಶೋಷಣೆಯ ವಿರುದ್ಧದ ಹೋರಾಟದ ಕಥೆಯನ್ನು ಒಳಗೊಂಡ ಈ ಚಿತ್ರವನ್ನು ಮನೆ ಮಂದಿಯಲ್ಲ ಕುಳಿತು ನೋಡವಂತಾಗಿದೆ. ಉತ್ತರ ಕರ್ನಾಟಕದ ಕಲಾವಿದರು ಹೆಚ್ಚಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದು, ಈ ಚಿತ್ರವನ್ನು ನೋಡುವ ಮುಖಾಂತರ ಈ ಭಾಗದ ಕಲಾವಿದರನ್ನು ಉಳಿಸಿ, ಬೆಳೆಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ರಜನಿ ಜಿರಗ್ಯಾಳ, ಮಹಾಲಿಂಗ ಮಂಗಿ, ಬಸವರಾಜ ಖಾನಪ್ಪನವರ, ಜ್ಯೋತಿ ಕೋಲಾರ , ಸುರೇಶ್ ಪತ್ತಾರ, ವಿನಾಯಕ , ರಾಜೇಶ್ವರಿ ಒಡೆಯರ್ ಉಪಸ್ಥಿತರಿದ್ದರು.