ಗೋಕಾಕ:ನಗರಸಭೆ ವತಿಯಿಂದ ಕೈಗೊಂಡ ಕಾಮಗಾರಿಗಳಿಗೆ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ
ನಗರಸಭೆ ವತಿಯಿಂದ ಕೈಗೊಂಡ ಕಾಮಗಾರಿಗಳಿಗೆ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ
ಗೋಕಾಕ ಅ 4 : ನಗರದ ವಾರ್ಡ್ ನಂ 29,30 ರಲ್ಲಿ ನಗರಸಭೆ ವತಿಯಿಂದ ಅಂದಾಜು 70 ಲಕ್ಷ ರೂ ವೆಚ್ಚದಲ್ಲಿ ಶಿರಗಿಹಾಳ ನಾಲಾ ಬಾಕ್ಸ್ ಕಣ್ವರ್ಟ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಯುವ ಮುಖಂಡ ಅಮರನಾಥ ಜಾರಕಿಹೊಳಿ ಅವರು ಶುಕ್ರವಾರದಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಅಬ್ಬಾಸ ದೇಸಾಯಿ, ಜಯಾನಂದ ಹುಣ್ಣಚ್ಯಾಳಿ, ಬಸವರಾಜ ಆರೆನ್ನವರ, ಪ್ರಕಾಶ ಮುರಾರಿ, ಶ್ರೀಶೈಲ ಪೂಜೇರಿ, ಬಾಬು ಮುಳಗುಂದ, ಯೂಸುಫ ಅಂಕಲಗಿ, ಕಾಳಮ್ಮನಗುಡಿ, ಸಿದ್ರಾಮ ಹುಚ್ಚರಾಮಗೋಳ, ಮುಖಂಡರಾದ ಬಸವರಾಜ ದೇಶನೂರ, ದುರ್ಗಪ್ಪ ಶಾಸ್ತ್ರೀಗೋಲ್ಲರ, ಜ್ಯೋತಿಭಾ ಸುಭಂಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.