ನೇಗಿನಹಾಳ:ದೈಹಿಕ, ಮಾನಸ್ಸಿಕ ಸಧೃಡತೆಗೆ ಕ್ರೀಡೆಗಳ ಬಗ್ಗೆ ಆಸಕ್ತಿ ವಹಿಸಿರಿ : ತಾ.ಪಂ ಸದಸ್ಯ ಮುದಕಪ್ಪ ಮರಡಿ
ದೈಹಿಕ, ಮಾನಸ್ಸಿಕ ಸಧೃಡತೆಗೆ ಕ್ರೀಡೆಗಳ ಬಗ್ಗೆ ಆಸಕ್ತಿ ವಹಿಸಿರಿ : ತಾ.ಪಂ ಸದಸ್ಯ ಮುದಕಪ್ಪ ಮರಡಿ
ನೇಗಿನಹಾಳ ಅ 16: ಇಂದಿನ ಯುವಕರು ವಿದ್ಯಾರ್ಥಿ ಜೀವನದಲ್ಲಿ ಮಾತ್ರ ಕ್ರೀಡೆಗಳಲ್ಲಿ ಭಾಗವಹಿಸಿ ನಂತರದ ಜೀವನದಲ್ಲಿ ಕ್ರೀಡಾಲೋಕದಿಂದ ದೂರುಳಿಯುವುದನ್ನು ಬಿಟ್ಟು ನಿರಂತರ ಕ್ರೀಡಾಹವ್ಯಾಸ ಬೆಳೆಸಿಕೊಂಡರೆ ಚೈತನ್ಯದಾಯಕವಾಗಿ ಇರಲು ಸಾದ್ಯವಾಗುವುದು ಎಂದು ಕಾದರವಳ್ಳಿ ತಾಲೂಕ ಪಂಚಾಯತ್ ಸದಸ್ಯ ಮುದಕಪ್ಪ ಮರಡಿ ಹೇಳಿದರು.
ಹೊಸ ಕಾದರವಳ್ಳಿ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ವೀರಭದ್ರೇಶ್ವರ ಯುವಕ ಮಂಡಳ ಮತ್ತು ಬಾಬಾಸಾಹೇಬ ಪಾಟೀಲ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಚುಟುಕು ಕ್ರಿಕೆಟ್ ಪಂದ್ಯವಳಿಯ ಕಾರ್ಯಕ್ರಮದಲ್ಲಿ ಕಾದರವಳ್ಳಿ ತಾ.ಪಂ ಸದಸ್ಯ ಮುದಕಪ್ಪ ಮರಡಿ ಬಹುಮಾನ ವಿತರಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು, ನನ್ನ ಸಮಕಾಲಿನ ಯುವಕರು ತಮ್ಮ ಶಿಕ್ಷಣ, ವೃತ್ತಿಯ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಆರೋಗ್ಯದಿಂದ ಬದುಕಿಗೆ ಅವಶ್ಯವಿರುವ ಕ್ರೀಡೆ, ಯೋಗ, ವ್ಯಾಯಾಮಗಳ ಬಗ್ಗೆ ನಿಸ್ಸಕಾಳಜಿ ವಹಿಸುತ್ತಿರುವು ಅತ್ಯಂತ ದುರಂತವಾಗಿದೆ. ಜೊತೆಗೆ ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್, ಹಾಗೂ ಟಿ.ವ್ಹಿ ಮಾದ್ಯಮಗಳ ಹಿಂದೆ ಬಿದ್ದು ಸಂಪೂರ್ಣ ನಿಷ್‍ಕ್ತರಾಗುತ್ತಿದ್ದಾರೆ ಎಂದರು. ನೇಗಿನಹಾಳದ ನೇತಾಜಿ ಕ್ರಿಕೆಟ್ ಕ್ಲಬ್, (ಪ್ರಥಮ) ಕಾದರವಳ್ಳಿಯ ಗೆಳೆಯರ ಬಳಗ ದ್ವೀತಿಯ ಮತ್ತು ತೃತೀಯ ಬಹುಮಾನ ಪಡೆದರು.