ಗೋಕಾಕ:ದೇಶದ ಬೆನ್ನೆಲುಬುಬಾದ ರೈತರು ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬೇಕು : ಶಾಸಕ ರಮೇಶ
ದೇಶದ ಬೆನ್ನೆಲುಬುಬಾದ ರೈತರು ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬೇಕು : ಶಾಸಕ ರಮೇಶ
ಗೋಕಾಕ ಅ 14 : ದೇಶದ ಬೆನ್ನೆಲುಬುಬಾದ ರೈತರು ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಸೋಮವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ಕೃಷಿ ಇಲಾಖೆಯಿಂದ ಸಾಲಬಾದೆ ಯಿಂದ ಆತ್ಮಹತ್ಯೆ ಮಾಡಿಕೊಂಡ ಹಾಗೂ ಹಾವು ಕಚ್ಚಿ ಮೃತಪಟ್ಟ ರೈತರ ಕುಟುಂಬದವರಿಗೆ ಸಹಾಯಧನದ ಆದೇಶ ಪತ್ರವನ್ನು ವಿತರಿಸಿ ಮಾತನಾಡುತ್ತಿದ್ದರು.
ರೈತರು ಅಮೂಲ್ಯವಾದ ಜೀವನಕ್ಕೆ ಹೆಚ್ಚಿನ ಮಹತ್ವನೀಡಿ , ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳದೆ ಧೈರ್ಯದಿಂದ ಎಲ್ಲವನ್ನು ಎದುರಿಸಿ ಅವುಗಳಿಗೆ ಪರಿಹಾರ ದೊರಕಸಿಕೊಳ್ಳಬೇಕು.ರೈತರ ಸಮಸ್ಯೆಗಳಿಗೆ ಪರಿಹರಿಸಲು ನಾವು ಸದಾ ಸಿದ್ದವಿದ್ದು, ಸಮಸ್ಯೆ ಬಂದಾಗ ಎದೆಗುಂದದೆ ಕುಟುಂಬದ ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಎಂ.ಮಂಜುನಾಥ್, ಮುಖಂಡರುಗಳಾದ ಟಿ.ಆರ್.ಕಾಗಲ್, ಮಡೆಪ್ಪ ತೋಳಿನವರ, ಭೀಮಗೌಡ ಪೊಲೀಸಗೌಡರ , ಕೃಷಿ ಅಧಿಕಾರಿಗಳಾದ ಎಚ್.ಡಿ.ಕೊಳೆಕರ, ಎಂ.ಎಂ.ನಧಾಪ ಉಪಸ್ಥಿತರಿದ್ದರು.