ಗೋಕಾಕ:ಆರ್.ಬಿ.ಎಲ್ ಬ್ಯಾಂಕಿನ 80ನೇ ಸಂಸ್ಥಾಪನಾ ಸಮಾರಂಭ
ಆರ್.ಬಿ.ಎಲ್ ಬ್ಯಾಂಕಿನ 80ನೇ ಸಂಸ್ಥಾಪನಾ ಸಮಾರಂಭ
ಗೋಕಾಕ ಅ 14 : ಗ್ರಾಹಕರ ಸಹಕಾರದಿಂದ ಬ್ಯಾಂಕ್ ಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಆರ್.ಬಿ.ಎಲ್ ಬ್ಯಾಂಕಿನ ಬೆಳಗಾವಿ ವಿಭಾಗೀಯ ವ್ಯವಸ್ಥಾಪಕ ನಂಜುಂಡಸ್ವಾಮಿ ಹಿರೇಮಠ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಇರುವ ಶಾಖೆಯಲ್ಲಿ ಬ್ಯಾಂಕಿನ 80ನೇ ಸಂಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವ 1943 ರಲ್ಲಿ ಕೇವಲ ಎರಡು ಶಾಖೆಗಳಿಂದ ಆರಂಭವಾದ ಬ್ಯಾಂಕ್ ಇಂದು ದೇಶದ 28 ರಾಜ್ಯಗಳಲ್ಲಿ ಸುಮಾರು 528 ಕ್ಕೂ ಅಧಿಕ ಶಾಖೆಗಳನ್ನು ಹೊಂದಿ ಗ್ರಾಹಕರಿಗೆ ಸೇವೆಯನ್ನು ಸಲ್ಲಿಸುತ್ತಿದೆ. ಗ್ರಾಹಕರಿಗೆ ಸ್ನೇಹಿಯಾಗಿ ಬ್ಯಾಂಕ್ ಕರ್ತವ್ಯ ನಿರ್ವಹಿಸುತ್ತಿದ್ದು ತಾವುಗಳ ಬ್ಯಾಂಕಿನ ಸೇವೆಗಳನ್ನು ಸಕಾಲಕ್ಕೆ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಶಾಖಾ ವ್ಯವಸ್ಥಾಪಕ ಚಂದ್ರಗೌಡಾ ಪಾಟೀಲ ಸ್ವಾಗತಿಸಿ, ಮಾತನಾಡಿ, ಗೋಕಾಕ ಶಹರದಲ್ಲಿ 43 ವರ್ಷಗಳ ಹಿಂದೆ ಶಾಖೆಯನ್ನು ತೆರೆಯಲಾಗಿತ್ತು ಅಂದಿನಿಂದ ಇಂದಿನವರೆಗೂ ತಮ್ಮೆಲ್ಲ ಸಹಕಾರದಿಂದ ಶಾಖೆಯು ಅಭಿವೃದ್ಧಿ ಹೊಂದಿದೆ. ನಮ್ಮ ಶಾಖೆಯಲ್ಲಿ ಲಾಕರ್ ಹಾಗೂ ಇನ್ನಿತರ ಸೌಲಭ್ಯಗಳು ಲಭ್ಯವಿದ್ದು ಗ್ರಾಹಕರು ಅದರ ಸದುಪಯೋಗ ಪಡೆದುಕೊಂಡು ಬ್ಯಾಂಕಿನ ಅಭಿವೃದ್ಧಿಗೆ ಸಹಕಾರಿಸುವಂತೆ ಕೋರಿದರು.
ಗ್ರಾಹಕರ ಪರವಾಗಿ ಸಲೀಂ ಖೋಜಾ, ಮನೋಹರ ಝಂವರ ಮತ್ತು ಗಂಗಾಧರ ಕಳ್ಳಿಗುದ್ದಿ ತಮ್ಮ ಅನಿಸಿಕೆ ಹಂಚಿಕೊಂಡರು.
ಸಂಸ್ಥೆಗಳ ಖಾತೆ ನಿರ್ವಹಣಾ ಮುಖ್ಯಸ್ಥ ಪ್ರಸಾದ ಬಾಸೂತ್ಕರ, ವಿಮಾ ವಿಭಾಗದ ಮುಖ್ಯಸ್ಥ ಸಂತೋಷ ಅಬ್ಬಿಗೇರಿ ಸೇರಿದಂತೆ ಬ್ಯಾಂಕಿನ ಗ್ರಾಹಕರಾದ ಡಾ. ಸುರೇಶ ಮರಾಠೆ, ಡಾ. ದಿಲೀಪ ಬಾಗಿ, ಡಾ ಪದ್ಮರಾಜ ಬೆನ್ನಾಡಿ, ಭೂಷಣ ಕಬ್ಬೂರ ಸೇರಿದಂತೆ ಇತರೆ ಗ್ರಾಹಕರು ಮತ್ತು ಸಿಬ್ಬಂದಿ ಇದ್ದರು.
ಕಾರ್ಯಕ್ರಮವನ್ನು ರವಿಕಿರಣ ಯಾತಗೇರಿ ನಿರೂಪಿಸಿದರು. ಧರಿಗೌಡ ಭುಜಗೌಡರ ವಂದಿಸಿದರು.