ಗೋಕಾಕ:ಕಾಂಕ್ರೀಟ್ ರಸ್ತೆ ಹಾಗೂ ಗಟಾರು ನಿರ್ಮಾಣ ಕಾಮಗಾರಿಗೆ ಯುವ ಮುಖಂಡ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ
ಕಾಂಕ್ರೀಟ್ ರಸ್ತೆ ಹಾಗೂ ಗಟಾರು ನಿರ್ಮಾಣ ಕಾಮಗಾರಿಗೆ ಯುವ ಮುಖಂಡ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ
ಗೋಕಾಕ ಅ 18 : ನಗರದ ನೆಹರೂ ಹೌಸಿಂಗ್ ಸೊಸೈಟಿಯ ಕೌಲನಿಯಲ್ಲಿ ಆರೀಫ ಪೀರಜಾದೆ ಮನೆಯಿಂದ ಫಾಲ್ಸ ರಸ್ತೆವರೆಗೆ ಕಾಂಕ್ರೀಟ್ ರಸ್ತೆ ಹಾಗೂ ಗಟಾರು ನಿರ್ಮಾಣ ಕಾಮಗಾರಿಗೆ ಯುವ ಮುಖಂಡ ಅಮರನಾಥ ಜಾರಕಿಹೊಳಿ ಅವರು ಶುಕ್ರವಾರದಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಜಯಾನಂದ ಹುಣ್ಣಚ್ಯಾಳಿ, ಆರೀಫ ಪೀರಜಾದೆ, ನ್ಯಾಯವಾದಿ ಬಿ.ಎಸ್. ಕುಂಬಾರ, ಕೌಜಲಗಿ, ಘೋರ್ಪಡೆ, ಜಾಧವ, ಎಸ್.ಎಸ್.ಅಂಗಡಿ, ರಿಯಾಜ ಚೌಗಲಾ, ಅಗಳನ್ನವರ, ಸಚಿನ ಕಮಟೆಕರ, ಪದ್ಮರಾಜ ದರಗಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.