ಗೋಕಾಕ:ಸರಕಾರಿ ಯೋಜನೆಗಳ ಸದುಪಯೋಗದಿಂದ ಜನತೆ ನೆಮ್ಮದಿಯ ಬದುಕನ್ನು ನಡೆಸಿ : ಶಾಸಕ ಲಖನ್ ಜಾರಕಿಹೊಳಿ
ಸರಕಾರಿ ಯೋಜನೆಗಳ ಸದುಪಯೋಗದಿಂದ ಜನತೆ ನೆಮ್ಮದಿಯ ಬದುಕನ್ನು ನಡೆಸಿ : ಶಾಸಕ ಲಖನ್ ಜಾರಕಿಹೊಳಿ
ಗೋಕಾಕ ಅ 30 : ಸರಕಾರಿ ಯೋಜನೆಗಳ ಸದುಪಯೋಗದಿಂದ ಜನತೆ ನೆಮ್ಮದಿಯ ಬದುಕನ್ನು ನಡೆಸುವಂತೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
ಬುಧವಾರದಂದು ನಗರದಲ್ಲಿ ತಾಲೂಕು ಆಡಳಿತ ಮತ್ತು ನಗರಸಭೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಗೃಹಲಕ್ಷ್ಮೀ ಯೋಜನೆಯ ಉದ್ಘಾಟನಾ ಸಮಾರಂಭವನ್ನು ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
1.10 ಲಕ್ಷ ಮಹಿಳೆಯರು ಇದ್ದಾರೆ ಅದರಲ್ಲಿ 85 ಸಾವಿರ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಉಳಿದವರು ಸಹ ಬೆಗನೆ ಅರ್ಜಿ ಸಲ್ಲಿಸಿ ಗೃಹಲಕ್ಷ್ಮೀ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬಡವ, ಕೂಲಿ ಕಾರ್ಮಿಕರ, ದೀನ ದಲಿತರ ಶ್ರೇಯೋದ್ದಿಗೆಗಾಗಿ ಗೃಹಲಕ್ಷ್ಮೀ ಸೇರಿದಂತೆ ಐದು ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಸದುಪಯೋಗ ಪಡೆದುಕೊಂಡುಸಬಲರಾಗಬೇಕು.
ಗೃಹಲಕ್ಷ್ಮೀ ಯೋಜನೆ ಒಂದಕ್ಕೆ ಸಿದ್ದರಾಮಯ್ಯ ನವರು 34 ಸಾವಿರ ಕೋಟಿ ಮಿಸಲಿಟ್ಟಿದ್ದಾರೆ. ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ನವರ ಕನಸಿನ ಕೂಸಾಗಿದ್ದು, 5 ಕೆ.ಜಿ ಇದ್ದ ಅಕ್ಕಿಯನ್ನು 10 ಕೆಜಿ ಮಾಡಿದ್ದಾರೆ. 5 ಕೆಜಿ ಆಹಾರಧ್ಯಾನದ ಜೊತೆಗೆ 5 ಕೆ.ಜಿ ಅಕ್ಕಿಯ ಹಣವನ್ನು ನೀಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಗೋಕಾಕ ಮತಕ್ಷೇತ್ರದ ಪರವಾಗಿ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇನೆ ಎಂದ ಲಖನ ಅವರು ದುಂದು ವೆಚ್ಚ ಮಾಡದೆ ಮಕ್ಕಳ , ತಮ್ಮ ಅಭಿವೃದ್ಧಿಗೆ ಸರಕಾರದ ಯೋಜನೆಗಳ ಲಾಭ ಪಡೆಯಬೇಕು ಎಂದು ಹೇಳಿದರು.
ತಹಸೀಲ್ದಾರ್ ಕೆ.ಮಂಜುನಾಥ್ ಅವರು ಮಾತನಾಡಿ ಸಮಾಜದ ಅಭಿವೃದ್ಧಿಯಲ್ಲಿ ಹೆಣ್ಣು ಮಕ್ಕಳು ಭಾಗಿಯಾದಾಗ ದೇಶದ ಅಭಿವೃದ್ಧಿಯಾಗುತ್ತದೆ. ಸ್ತ್ರೀಯರು ಮುಂದೆ ಬಂದು ಬಲಿಷ್ಠ ಭಾರತ ನಿರ್ಮಿಸಲು ಮುಂದಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಪೌರಾಯುಕ್ತ ಎಸ್.ಎ. ಮಹಾಜನ, ತಾಪಂ ಇಒ ಉದಯಕುಮಾರ್ ಕಾಂಬ್ಳೆ, , ಶಿಶು ಅಭಿವೃದ್ಧಿ ಅಧಿಕಾರಿ ಡಿ.ಎಸ್.ಕುಡವಕ್ಕಲಗಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಗರಸಭೆ ಅಧೀಕ್ಷಕ ಸಾಗರೆಕರ ನಿರೂಪಿಸಿ, ವಂದಿಸಿದರು.