ಗೋಕಾಕ:ಜನ ಸೇವೆ ಮುಂದೆ ಯಾವ ಸೇವೆಯೂ ದೊಡ್ಡದಲ್ಲ : ಮುರುಘರಾಜೇಂದ್ರ ಶ್ರೀ
ಜನ ಸೇವೆ ಮುಂದೆ ಯಾವ ಸೇವೆಯೂ ದೊಡ್ಡದಲ್ಲ : ಮುರುಘರಾಜೇಂದ್ರ ಶ್ರೀ
ಗೋಕಾಕ ಸೆ 5 : ಗ್ರಾಮೀಣ ಭಾಗದ ಬಡ ಜನತೆಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದ್ದು, ಅದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಮಂಗಳವಾರದಂದು ತಾಲೂಕಿನ ಮರಡಿಶಿವಾಪೂರ ಗ್ರಾಮದಲ್ಲಿ ಪತ್ರಕರ್ತ ಚಂದ್ರಶೇಖರ್ ಕೊಣ್ಣೂರ ಅವರು ಅವರ ಧರ್ಮಪತ್ನಿ ದಿವಂಗತ ಜಯಶ್ರೀ ಕೊಣ್ಣೂರ ಅವರ ಸ್ಮರಣಾರ್ಥ ನಿರ್ಮಿಸಿರುವ ಮಲ್ಲಿಕಾರ್ಜುನ ಕಲ್ಯಾಣ ಮಂಟಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗುರುಸೇವೆ ಮಾಡುವುದರಲ್ಲಿ ಆನಂದ ಸಿಗುತ್ತದೆ ಆದರೆ ಸಮಾಜ ಸೇವೆ ಮಾಡುವವರಿಗೆ ನಿತ್ಯವೂ ಆನಂದ ಸಿಗುತ್ತದೆ. ಜನ ಸೇವೆ ಮುಂದೆ ಯಾವ ಸೇವೆಯೂ ದೊಡ್ಡದಲ್ಲ . ಆ ದಿಸೆಯಲ್ಲಿ ಕೊಣ್ಣೂರ ಕುಟುಂಬದವರು ಕಲ್ಯಾಣ ಮಂಟಪದ ಕಟ್ಟಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹಸ್ತಾಂತರಿಸಿರುವುದು ಮಾದರಿ ಕಾರ್ಯವಾಗಿದೆ ಎಂದರು.
ಯುವ ನಾಯಕ ರಾಹುಲ ಜಾರಕಿಹೊಳಿ ನೂತನ ಕಲ್ಯಾಣ ಮಂಟಪವನ್ನು ಲೋಕಾರ್ಪಣೆ ಗೋಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಆಶಿವರ್ಚನ ನೀಡಿದ ಸುಕ್ಷೇತ್ರ ಇಂಚಲನ ಡಾ.ಶಿವಾನಂದ ಭಾರತಿ ಮಹಾಸ್ವಾಮಿಯವರಿಗೆ ತುಲಾಭಾರ ನೇರವೆರಿಸಲಾಯಿತು
ವೇದಿಕೆಯಲ್ಲಿ ಹರಳಿಕಟ್ಟಿ ಬ್ರಹ್ಮ ವಿದ್ಯಾಶ್ರಮದ ಶ್ರೀ ನಿಜಗುಣ ಸ್ವಾಮೀಜಿಗಳು, ಮಮದಾಪುರದ ಶ್ರೀ ಚರಮೂರ್ತೀಶ್ವರ ಸ್ವಾಮೀಜಿ, ಮರಡಿಶಿವಾಪುರದ ಗಂಗಯ್ಯಾ ಹೀರೆಮಠ ಸ್ವಾಮಿಜೀ, ಅಭಿಷೇಕ ಕಂಬಿ, ಸಾನಿಧ್ಯವನ್ನು ವಹಿಸಿದರು. ಸರ್ವೋತ್ತಮ ಜಾರಕಿಹೊಳಿ, ಸಿದ್ದಲಿಂಗ ದಳವಾಯಿ, ರಾಜು ಮುನ್ನವಳಿ, ಶ್ಯಾಮಾನಂದ ಪೂಜಾರಿ ,ಚಂದ್ರಶೇಖರ್ ಕೊಣ್ಣೂರ, ಸ್ನೇಹ ಮತ್ತು ಆನಂದ ಕೊಣ್ಣೂರ, ಶೃತಿ ಮತ್ತು ಓಂಪ್ರಕಾಶ್ ಬೆಟಗೇರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು .