ಗೋಕಾಕ:ಜೀವಿಗಳು ಬದುಕಲು ಪರಿಸರ ಮಹತ್ವದ ಪಾತ್ರ ವಹಿಸಿದೆ : ಸರ್ವೊತ್ತಮ ಜಾರಕಿಹೊಳಿ
ಜೀವಿಗಳು ಬದುಕಲು ಪರಿಸರ ಮಹತ್ವದ ಪಾತ್ರ ವಹಿಸಿದೆ : ಸರ್ವೊತ್ತಮ ಜಾರಕಿಹೊಳಿ
ಗೋಕಾಕ ಸೆ 13 : ಜೀವಿಗಳು ಬದುಕಲು ಪರಿಸರ ಮಹತ್ವದ ಪಾತ್ರ ವಹಿಸುತ್ತಿದ್ದು, ಎಲ್ಲರೂ ಪರಿಸರ ರಕ್ಷಣೆಗೆ ಮುಂದಾಗುವಂತೆ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ಅರಭಾವಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲಾ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಹಾಗೂ ಅರಣ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ 25 ಸಾವಿರ ಸಸಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ರಸ್ತೆ ಅಗಲಿಕರಣ, ಕಟ್ಟಡಗಳು, ಕಾರಖಾನೆಗಳನ್ನು ನಿರ್ಮಾಣ ಮಾಡುವ ಮೂಲಕ ಪರಿಸರ ನಾಶ ಮಾಡುತ್ತಿದ್ದಾನೆ. ಇದರಿಂದ ಪ್ರಕೃತಿ ವಿಕೋಪಗಳು ಉಂಟಾಗಿ ಜೀವಿಗಳ ಬದುಕು ಕಷ್ಟಕರವಾಗುತ್ತದೆ. ಎಲ್ಲರೂ ಅರಣ್ಯವನ್ನು ಉಳಿಸಿ,ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಇಂತಹ ಸಾಮಾಜಿಕ ಕಳಕಳಿಯ ಕಾರ್ಯ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ, ಯೋಜನಾಧಿಕಾರಿ ಮಮತಾ ನಾಯಕ, ಕೃಷಿ ಅಧಿಕಾರಿ ಭೀಮಪ್ಪ ಇಟಗಿ, ವಲಯ ಅರಣ್ಯ ಅಧಿಕಾರಿಗಳಾದ ಆನಂದ ಹೆಗಡೆ, ಸಂಜೀವ ಸಂವಸುದ್ದಿ, ಪ್ರಾಚಾರ್ಯ ಶಶಿಕಲಾ ಸತ್ಯನಾಯಕ, ಗಣ್ಯರಾದ ರಮೇಶ ಮಾದರ , ಕೃಷ್ಣಾ ಬಂಡಿವಡ್ಡರ, ದುಂಡಪ್ಪ ಸುತಾರ, ನಾಗಲಿಂಗ್ ಪೋತದಾರ, ಅಡಿವೆಪ್ಪ ಬಿಲಕುಂದಿ , ಗಣಪತಿ ಇಳಿಗೇರ ಇದ್ದರು.