ಗೋಕಾಕ:ಕಾವೇರಿ ನೀರಿಗಾಗಿ ಕರೆ ನೀಡಿದ್ದ ಬಂದ್ ಬೆಂಬಲಿಸಿ ನಗರದಲ್ಲಿ ಪ್ರತಿಭಟನೆ : ಕಾರ್ಯಕರ್ತರ ಬಂಧನ್
ಕಾವೇರಿ ನೀರಿಗಾಗಿ ಕರೆ ನೀಡಿದ್ದ ಬಂದ್ ಬೆಂಬಲಿಸಿ ನಗರದಲ್ಲಿ ಪ್ರತಿಭಟನೆ : ಕಾರ್ಯಕರ್ತರ ಬಂಧನ್
ಗೋಕಾಕ ಸೆ 27 : ಕಾವೇರಿ ನೀರಿಗಾಗಿ ಕರೆ ನೀಡಿದ್ದ ಕರ್ನಾಟಕ ಬಂದನ್ನು ಬೆಂಬಲಿಸಿ ನಗರದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರದಂದು ನಗರದಲ್ಲಿ ಪ್ರತಿಭಟನೆ ನಡೆಯಿಸಿ ರಸ್ತೆ ತಡೆ ನಡೆಸಿದ ಮುಖಂಡರನ್ನು ಪೊಲೀಸರು ಬಂಧಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ವಿವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರಕಾರ ವಿರುದ್ಧ ಘೋಷಣೆಗಳನ್ನು ಕೂಗಿ ಕಾವೇರಿ ನೀರು ಬಿಡದಂತೆ ಆಗ್ರಹಿಸಿ, ರಾಜ್ಯ ಸರಕಾರದ ನಿಲುವನ್ನು ಖಂಡಿಸಿ, ಸುಮಾರು ಒಂದು ಘಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಯಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಬಸವರಾಜ ಖಾನಪ್ಪನವರ, ಕಿರಣ ಢಮಾಮಗರ, ರಮೇಶ ಮಾದರ, ಮಂಜುನಾಥ್ ಪೂಜೇರಿ, ಸಾದಿಕ ಹಲ್ಯಾಳ, ಮಹಾದೇವ ಮಕ್ಕಳಗೇರಿ, ನಿಜಾಮ ನಧಾಪ, ಬಸವರಾಜ ಕಾಡಾಪೂರ, ಕೆಂಪಣ್ಣ ಚೌಕಾಶಿ, ಮಲ್ಲಿಕಜಾನ ತಲವಾರ, ಗಣಪತಿ ಈಳಿಗೇರ, ತಮ್ಮಣ್ಣಾ ಅರಬಾಂವಿ, ಪಟಣ್ಣಶೆಟ್ಟಿ ಕೆ.ಕೆ., ಲಕ್ಷ್ಮೀ ಪಾಟೀಲ, ಸವಿತಾ ಪಟ್ಟಣಶೆಟ್ಟಿ, ಸುನೀಲ ತೆಂಗಿನಮನಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.