RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಅವಕಾಶ ಸಿಕ್ಕರೆ ವಾಲ್ಮೀಕಿ ಸಮಾಜದವರೆ ಮುಂದಿನ ಸಿ.ಎಂ : ತಂದೆ ಸಿ ಎಂ ಆಗುವ ಆಸೆಯನ್ನು ಹೊರ ಹಾಕಿದ ಮಗ ರಾಹುಲ್ ಜಾರಕಿಹೊಳಿ

ಗೋಕಾಕ:ಅವಕಾಶ ಸಿಕ್ಕರೆ ವಾಲ್ಮೀಕಿ ಸಮಾಜದವರೆ ಮುಂದಿನ ಸಿ.ಎಂ : ತಂದೆ ಸಿ ಎಂ ಆಗುವ ಆಸೆಯನ್ನು ಹೊರ ಹಾಕಿದ ಮಗ ರಾಹುಲ್ ಜಾರಕಿಹೊಳಿ 

ಅವಕಾಶ ಸಿಕ್ಕರೆ ವಾಲ್ಮೀಕಿ ಸಮಾಜದವರೆ ಮುಂದಿನ ಸಿ.ಎಂ : ತಂದೆ ಸಿ ಎಂ ಆಗುವ ಆಸೆಯನ್ನು ಹೊರ ಹಾಕಿದ ಮಗ ರಾಹುಲ್ ಜಾರಕಿಹೊಳಿ

ಗೋಕಾಕ ಅ 28 : ಜಾತಿ, ಮತ ,ಫಂತ ಭೇದ ಭಾವವಿಲ್ಲದೆ ಮಹಾನ ಪುರುಷರ ಜಯಂತಿಗಳನ್ನು ಆಚರಿಸಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ವಾಲ್ಮೀಕಿ ದೇವಸ್ಥಾನದ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ಸಮಾಜ ಅವಕಾಶ ವಂಚಿತ, ತುಳಿತಕ್ಕೆ ಒಳಗಾಗಿರುವ ಸಮಾಜ ಇಂದು ಸರ್ಕಾರದ ಸವಲತ್ತುಗಳನ್ನು ಪಡೆದು ಶಿಕ್ಷಣ ಮತ್ತು ಸಾಮಾಜಿಕವಾಗಿ ಮುಂದೆ ಬರುತ್ತಿದೆ.ಒಳ್ಳೆಯ ಶಿಕ್ಷಣ ಸಿಕ್ಕರೆ ಮಾತ್ರ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ ಆ ನಿಟ್ಟಿನಲ್ಲಿ ಎಲ್ಲರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದ ಅವರು ಮುಂದೆ ಅವಕಾಶ ಸಿಕ್ಕರೆ ವಾಲ್ಮೀಕಿ ಸಮಾಜದವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ತಂದೆ ಸತೀಶ ಜಾರಕಿಹೊಳಿ ಅವರು ಮುಂಬರುವ ಸಿಎಂ ಎಂದು ಮಗ ರಾಹುಲ್ ಪರೋಕ್ಷವಾಗಿ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕಾರ್ಯನಿರತ ಪತ್ರಕರ್ತ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಹೆಸರಿಗೆ ಮಾತ್ರ ಮಹಾನ ಪುರುಷರ ಜಯಂತಿಗಳನ್ನು ಆಚರಣೆ ಮಾಡದೆ ಅವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ನಡೆಸಬೇಕು ಅಂದಾಗ ಮಾತ್ರ ಮಹಾನ ಪುರುಷರ ಜಯಂತಿ ಉತ್ಸವಗಳಿಗೆ ಅರ್ಥ ಬರಲು ಸಾಧ್ಯ ಆ ನಿಟ್ಟಿನಲ್ಲಿ ತಾಲೂಕಿನಲ್ಲಿ ಎಲ್ಲರೂ ಜಾತಿ ಬೇದ ವಿಲ್ಲದೆ ಒಳ್ಳೆಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುಂಚೆ ನಡೆದ ಮೆರವಣಿಗೆಗೆ ಯುವ ಮುಖಂಡ ಅಮರನಾಥ ಜಾರಕಿಹೊಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಡಾ‌.ಮೋಹನ್ ಭಸ್ಮೆ, ಉಪನ್ಯಾಸಕ ಸಿದ್ದೇಶ್ವರ ಮೆಳವಂಕಿ, ಪೌರಾಯುಕ್ತ ಎಸ್.ಎ.ಮಹಾಜನ, ತಾಪಂ ಇಓ ಉದಯಕುಮಾರ್ ಕಾಂಬ್ಳೆ, ಬಿಇಓ ಜಿ‌.ಬಿ.ಬಳಗಾರ, ಪರಿಶಿಷ್ಟ ವರ್ಗಗಳ ಅಧಿಕಾರಿ ಜಯಶ್ರೀ ಗೋಟುರೆ, ಶಿವಪ್ಪ ಗುಡ್ಡಾಕಾರ, ಲಕ್ಕಪ್ಪ ಪೂಜೇರಿ, ಯಲ್ಲಪ್ಪ ಪೂಜೇರಿ, ಕಾಡಪ್ಪ ನಾಯಕ, ಎಸ್ ಎ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: