ಗೋಕಾಕ:ರಥಯಾತ್ರೆಯ ಸ್ವಾಗತಕ್ಕೆ ದಿ.5ರ ರವಿವಾರದಂದು ಪೂರ್ವಭಾವಿ ಸಭೆ : ಶಿವಪುತ್ರ ಜಕಬಾಳ
ರಥಯಾತ್ರೆಯ ಸ್ವಾಗತಕ್ಕೆ ದಿ.5ರ ರವಿವಾರದಂದು ಪೂರ್ವಭಾವಿ ಸಭೆ : ಶಿವಪುತ್ರ ಜಕಬಾಳ
ಗೋಕಾಕ ನ 4 : ಶ್ರೀ ಭಗೀರಥ ಭಾರತ ಜನ ಕಲ್ಯಾಣ ರಥ ಯಾತ್ರೆ ಮಹಾರಾಷ್ಟ್ರದ ಮೂಲಕ ಬೆಳಗಾವಿ ಜಿಲ್ಲೆಗೆ ಆಗಮಿಸುತ್ತಿದ್ದು ರಥಯಾತ್ರೆಯ ಸ್ವಾಗತಕ್ಕೆ ಪೂರ್ವಭಾವಿ ಸಭೆಯನ್ನು ದಿ.5ರ ರವಿವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದೆ ಎಂದು ಗೋಕಾಕ ತಾಲೂಕ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ ಹೇಳಿದರು.
ಅವರು, ಶನಿವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೇದ ಪತ್ರಿಕಾಗೊಷ್ಠಿಯನ್ನು ಉದ್ಧೇಶಿಸಿ ಮಾತನಾಡಿ ಭಗೀರಥ ಭಾರತ ಜನ ಕಲ್ಯಾಣ ರಥ ಯಾತ್ರೆಯನ್ನು ಭಗೀರಥ ಮಹರ್ಷಿಗಳು ತಪಸ್ಸು ಮಾಡಿದ ಗಂಗೋತ್ರಿ ಗೋಮುಖದಿಂದ ಗಂಗಾ ಜಲವನ್ನು ಪೂಜಿಸಿ ತಂದು ಹರಿದ್ವಾರಾ ಋಷಿಕೇಶದಿಂದ ಭಗೀರಥರಥ ಯಾತ್ರೆ ಉದ್ಘಾಟನೆ ಮಾಡಿ ದೆಹಲಿ, ಉತ್ತರಪ್ರದೇಶ, ಬಿಹಾರ್, ರಾಜಸ್ತಾನ್, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಭಗೀರಥ ಪೀಠ ಹೊಸದುರ್ಗದ ಜಗದ್ಗುರು ಶ್ರೀ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ ಬೃಹತ್ ರಥಯಾತ್ರೆ ನಡೆಯುತ್ತಿದೆ.
ದಕ್ಷಿಣ ಭಾರತದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗೋವಾ ರಾಜ್ಯಗಳಲ್ಲಿ ಯಾತ್ರೆ ಆಯೋಜನೆ ಮಾಡಿ ಜವಾಬ್ದಾರಿ ತೆಗೆದುಕೊಂಡು ಯಶಸ್ವಿ ಮಾಡಲು ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಿಂದ ಯಾತ್ರೆಯನ್ನು ಸ್ವಾಗತಿಸಿ ಕರ್ನಾಟಕ ರಾಜ್ಯ ಮಟ್ಟದ ಉಪ್ಪಾರ ಸಮಾಜದ ಸಮಾವೇಶ ಏರ್ಪಡಿಸಿ ಸಮಾಜಕ್ಕೆ ಮೀಸಲಾತಿ ಸೇರಿದಂತೆ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದರು.
ಪೂರ್ವಭಾವಿ ಸಭೆಯ ದಿವ್ಯಸಾನಿಧ್ಯವನ್ನು ಭಗೀರಥ ಪೀಠ ಹೊಸದುರ್ಗದ ಜಗದ್ಗುರು ಶ್ರೀ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಜಿ ವಹಿಸಲಿದ್ದು, ಎಲ್ಲ ಉಪ್ಪಾರ ಸಮಾಜದ ಮುಖಂಡರು, ಸಂಘದ ಪದಾಧಿಕಾರಿಗಳು ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಿ ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಗೋಕಾಕ ತಾಲೂಕ ಭಗೀರಥ ಉಪ್ಪಾರ ಸಂಘದ ಉಪಾಧ್ಯಕ್ಷರುಗಳಾದ ಅಡಿವೆಪ್ಪ ಕಿತ್ತೂರ, ಕುಶಾಲ ಗುಡೇನ್ನವರ, ಸಮಾಜದ ಮುಖಂಡರುಗಳಾದ ಅಶೋಕ ಗೋಣಿ, ವಾಯ್ ಎಲ್ ಹೆಜ್ಜೆಗಾರ, ಅಡಿವೆಪ್ಪ ಬಿಲಕುಂದಿ, ಯಲ್ಲಪ್ಪ ಸುಳ್ಳನವರ ಇದ್ದರು.