ಗೋಕಾಕ:ಮಿತವಾಗಿ ಮತ್ತು ಜಾಗೃತವಾಗಿ ವಾಹನ ಓಡಿಸಬೇಕು : ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ .ಬಳಗಾರ
ಮಿತವಾಗಿ ಮತ್ತು ಜಾಗೃತವಾಗಿ ವಾಹನ ಓಡಿಸಬೇಕು : ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ .ಬಳಗಾರ
ಗೋಕಾಕ ನ 5 : ವಾಯು ಮಾಲಿನ್ಯ ತಡೆಯುವಲ್ಲಿವಾಹನ ಮಾಲೀಕರು ಮತ್ತು ಚಾಲಕರ ಪಾತ್ರ ಅತ್ಯಂತ ಮಹತ್ವಾಗಿದೆ. ಮಿತವಾಗಿ ಮತ್ತು ಜಾಗೃತವಾಗಿ ವಾಹನ ಓಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಸಲಹೆ ನೀಡಿದರು.
ಶನಿವಾರದಂದು ನಗರದ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಹಮ್ಮಿಕೊಂಡ ವಾಯುವ್ಯಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಾಹನಗಳು ಉಂಟು ಮಾಡುವ ವಾಯು ಮಾಲಿನ್ಯದಿಂದ ಭೌತಿಕವಾಗಿ ಹಾಗೂ ಜೈವಿಕವಾಗಿ ಪರಿಸರ ಹಾಳಾಗುತ್ತದೆ. ವಾಯು ಮಾಲಿನ್ಯ ತಡೆಗಟ್ಟಲು ಹೆಚ್ಚು ಹೆಚ್ಚು ಗಿಡಮರಗಳನ್ನು ನೆಟ್ಟು ಪೋಷಿಸಬೇಕು’ ಆ ನಿಟ್ಟಿನಲ್ಲಿ ನಾವೆಲ್ಲರೂ ಪರಿಸರ ಉಳಿಸಿ,ಬೆಳೆಸಲು ಮುಂದಾಗಬೇಕು ಎಂದು ಹೇಳಿದರು .
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನಪ್ಪ ಕಪರದ ಮಾತನಾಡಿ ಪರಿಸರ ಉಳಿದರೆ ನಾವು ಉಳಿಯಲು ಸಾಧ್ಯ. ಆದ್ದರಿಂದ ಪರಿಸರ ಮಾಲಿನ್ಯ ಮಾಡದ ಹಾಗೆ ಬದುಕು ಸಾಗಿಸಬೇಕು ಎಂದರು.
ಹಿರಿಯ ಮೋಟಾರ ವಾಹನ ನಿರೀಕ್ಷಕ ರವಿ ಭೀಸೆ ಮಾತನಾಡಿ, ಅಗತ್ಯಕ್ಕೆ ತಕ್ಕಂತೆ ವಾಹನಗಳ ಬಳಕೆ ಮಾಡೊಣ. ಜತೆಗೆ ವಾಹನ ಕೂಡಾ ಪರಿಸರಕ್ಕೆ ಹಾನಿ ಮಾಡದ ರೀತಿಯಲ್ಲಿಇಟ್ಟುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಚೇರಿ ಅಧೀಕ್ಷಕ ಎಸ್.ಎಚ.ಕರಿಗಾರ,ಮೋಟಾರ ವಾಹನ ನಿರೀಕ್ಷಿಕ ಸಂತೋಷ ಕುಮಾರ್, ರೋಟರಿ ಸಂಸ್ಥೆಯ ಸೋಮಶೇಖರ್ ಮಗದುಮ್ಮ ಇದ್ದರು.