RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ನಗರದಲ್ಲಿ ಕಾಟಾಚಾರಕ್ಕೆ ಅರಣ್ಯ ಇಲಾಖೆಯಿಂದ ಅರಣ್ಯ ಕ್ರೀಡಾಕೂಟ ಆಯೋಜನೆ

ಗೋಕಾಕ:ನಗರದಲ್ಲಿ ಕಾಟಾಚಾರಕ್ಕೆ ಅರಣ್ಯ ಇಲಾಖೆಯಿಂದ ಅರಣ್ಯ ಕ್ರೀಡಾಕೂಟ ಆಯೋಜನೆ 

ನಗರದಲ್ಲಿ ಕಾಟಾಚಾರಕ್ಕೆ ಅರಣ್ಯ ಇಲಾಖೆಯಿಂದ ಅರಣ್ಯ  ಕ್ರೀಡಾಕೂಟ ಆಯೋಜನೆ

ಗೋಕಾಕ ನ 28 : ಅರಣ್ಯ ಇಲಾಖೆಯ ವತಿಯಿಂದ
ನಗರದಲ್ಲಿ ಎರಡು ದಿನಗಳ ಕಾಲ ನಡೆದ  ಕ್ರೀಡಾಕೂಟ ಕಾಟಾಚಾರಕ್ಕೆ ಎಂಬಂತೆ ಆಯೋಜನೆಯಾಗಿದ್ದು ಕಂಡು ಬಂದಿದೆ.

ನ 27 ಮತ್ತು 28 ರಂದು ಅರಣ್ಯ ಇಲಾಖೆ ವತಿಯಿಂದ ಬೆಳಗಾವಿ ವೃತ್ತ ಮಟ್ಟದ ಮಟ್ಟದ ಅರಣ್ಯ  ಕ್ರೀಡಾಕೂಟ  ಆಯೋಜನೆ ಮಾಡಲಾಗಿತ್ತು. ಕ್ರೀಡಾಕೂಟದಲ್ಲಿ ಬೆಳಗಾವಿ , ಬಾಗಲಕೋಟೆ , ವಿಜಯಪುರ ಹಾಗೂ ಘಟಪ್ರಭಾ ವಲಯದ  ಅರಣ್ಯ ಇಲಾಖೆಯ ಕ್ರೀಡಾಪಟುಗಳು ಭಾಗವಹಿಸಬೇಕಾಗಿತ್ತು. ಆದರೆ ನಿರೀಕ್ಷೆ ತಕ್ಕಂತೆ ಕ್ರೀಡಾಕೂಟದಲ್ಲಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಾಗಲಿ, ಅರಣ್ಯ ರಕ್ಷಕರಾಗಲಿ, ವಲಯ ಅರಣ್ಯಾಧಿಕಾರಿಗಳಾಗಲಿ, ಉಪ ವಲಯ ಅರಣ್ಯ  ಅಧಿಕಾರಿಗಳಾಗಲಿ ಅಷ್ಟೊಂದು ಉತ್ಸಾಹದಿಂದ ಭಾಗವಿಸಿದ್ದು ಕಂಡು ಬರಲಿಲ್ಲಿ, 100 ಮೀಟರ್, 400 ಮೀಟರ್ ಹಾಗೂ 800 ಮೀಟರ ಓಟದಲ್ಲಿ ಬರೀ ನಾಲ್ಕೈದು ಕ್ರೀಡಾಪಟುಗಳು ಅಷ್ಟೇ ಭಾಗವಹಿಸಿದ್ದು ಕಂಡು ಬಂತು. ಇದು ಓಟದಲ್ಲಿ ಆದರೆ ವಿವಿಧ ಕ್ರೀಡೆಗಳಲ್ಲಿಯೂ ಸಹ ಕ್ರೀಡಾಪಟುಗಳು ಕೊರತೆ ಎದ್ದು ಕಾಣುತ್ತಿತ್ತು.

ಕ್ರೀಡಾಂಗಣದಲ್ಲಿ ಅರಣ್ಯ ಇಲಾಖೆಯಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು ಆದರೆ ಕ್ರೀಡಾಪಟುಗಳು ಇಲ್ಲದ ಕಾರಣ ಎಲ್ಲಾ ಸ್ಥಳಗಳು ಬಿಕ್ಕೋ ಎನ್ನುತ್ತಿದ್ದವು. ಸೋಮವಾರ ಮತ್ತು ಮಂಗಳವಾರ ಕ್ರೀಡೆಗಳನ್ನು ಆಯೋಜಿಸಿದ್ದರಿಂದ ಕ್ರೀಡೆಗಳನ್ನು ನೋಡಲು ಪ್ರೇಕ್ಷಕರ ಕೊರತೆ ಸಹ ಈ ಕ್ರೀಡಾಕೂಟದಲ್ಲಿ ಎದ್ದು ಕಾಣುತ್ತಿತ್ತು.

ಕಾಟಾಚಾರಕ್ಕೆ ಆಯೋಜನೆ  : ಗೋಕಾಕ ವಲಯದಲ್ಲಿ ಬೆಳಗಾವಿ ವೃತ್ತ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡವಾಗಿತ್ತು ಆದರೆ  ಈ ಕ್ರೀಡಾಕೂಟ ಆಯೋಜನೆ ಗೋಕಾಕನ ಅರಣ್ಯ ಇಲಾಖೆ ಅಧಿಕಾರಿಗಳಿಗೆ  ಬೇಕಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಆಯೋಜನೆಗೊಳ್ಳುತ್ತಿದ್ದ ಈ ಕ್ರೀಡಾಕೂಟ ಈ ವರ್ಷ ವಲಯ ಮಟ್ಟದಲ್ಲಿ ಆಯೋಜನೆ ಗೊಂಡಿತ್ತು. ಇದನ್ನು ಆಯೋಜನೆ ಮಾಡಲು ಗೋಕಾಕ ವಲಯದ ಅರಣ್ಯ ಅಧಿಕಾರಿಗಳು ಹಿಂದೆಟ್ಟು ಹಾಕಿದ್ದರು ಎಂದು ಹೇಳಲಾಗುತ್ತಿದೆ. ಕೊನೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಗೋಕಾಕ ನಗರದಲ್ಲಿಯೇ ಈ ಭಾರಿಯ ಕ್ರೀಡಾಕೂಟ ಆಯೋಜನೆ ಮಾಡಬೇಕು ಎಂದು ಪಟ್ಟ ಹಿಡಿದ ಪರಿಣಾಮ ಗೋಕಾಕದಲ್ಲಿ ಬೆಳಗಾವಿ ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ  ಎಂದು ಈ ಕ್ರೀಡಾಕೂಟವನ್ನು ಬಣ್ಣಿಸಲಾಗುತ್ತಿದೆ.

ಪ್ರೇಕ್ಷಕರಿಲ್ಲದೇ ಸೊರಗಿದ ಅರಣ್ಯ  ಕ್ರೀಡಾಕೂಟ  :  ಸೋಮವಾರ ಮತ್ತು ಮಂಗಳವಾರದಂದು ಆಯೋಜನೆಗೊಂಡಿದ್ದ ಅರಣ್ಯ ಕ್ರೀಡಾಕೂಟವನ್ನು ನೋಡಲು ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ವಾರದ ಮೊದಲ ದಿನ ಆಯೋಜನೆ ಮಾಡಲಾಗಿದರಿಂದ ಕ್ರೀಡಾಂಗಣದಲ್ಲಿ ಕ್ರೀಡೆಗಳನ್ನು ನೋಡಲು ಪ್ರೇಕ್ಷಕರು ಕ್ರೀಡಾಂಗಣದತ್ತ ಮುಖವೇ ಮಾಡಲಿಲ್ಲ. ಇದರಿಂದ ವಾಲ್ಮೀಕಿ  ಕ್ರೀಡಾಂಗಣ ಬಿಕ್ಕೋ ಎನ್ನುತ್ತಿತು.ಪ್ರೇಕ್ಷಕರಿಲ್ಲದ  ಪರಿಣಾಮ ಅರಣ್ಯ ಕ್ರೀಡಾಕೂಟ ಸೊರಗಿತ್ತು.

ಕ್ರೀಡಾಕೂಟಕ್ಕೆ ಪ್ರಚಾರ ಕೊರತೆ: ನಗರದಲ್ಲಿ ಎರಡು ದಿನಗಳ ಕಾಲ  ಆಯೋಜಿಸಿರುವ ಬೆಳಗಾವಿ ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟ ನಡೆಸುತ್ತಿರುವ ಬಗ್ಗೆ  ಇಲಾಖೆ ಅಧಿಕಾರಿಗಳು  ಸುದ್ದಿಗೋಷ್ಠಿಯಾಗಲಿ , ಇತರ ಪ್ರಚಾರ ಕಾರ್ಯವನ್ನು ಮಾಡದಿರುವುದು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಒತ್ತಾಯದ   ಕಾರಣದಿಂದ ತರಾತುರಿಯಲ್ಲಿ  ಕಾಟಾಚಾರಕ್ಕೆ ಆಯೋಜನೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಅರಣ್ಯ ಕ್ರೀಡಾಕೂಟ ಈ ಭಾಗದ ಕ್ರೀಡಾಪಟುಗಳ ಹಾಗೂ ಕ್ರೀಡಾ ಆಸಕ್ತರಿಗೆ  ಮಾರ್ಗದರ್ಶನ ಆಗಬೇಕಾಗಿತ್ತು. ಆದರೆ, ಹೆಚ್ಚಿನ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ಆಸಕ್ತರಿಗೆ  ಈ ಕುರಿತು ಮಾಹಿತಿ ತಲುಪಿಲ್ಲ. ಆದ್ದರಿಂದ ಕ್ರೀಡಾಂಗಣದಲ್ಲಿ  ಅಲ್ಲಲ್ಲಿ ನಾಲ್ಕಾರು ಜನರ ಮಾತ್ರ ಕಂಡುಬರುತ್ತಿದ್ದರು. ಕ್ರೀಡಾ ಆಸಕ್ತರು , ಪ್ರೇಕ್ಷಕರ ಕೊರತೆಯಿಂದ ಅರಣ್ಯ ಕ್ರೀಡಾಕೂಟ ಸೊರಗಿದೆ.ಇಲಾಖೆ ಮೂಲಗಳ ಪ್ರಕಾರ ಉನ್ನತ ಅಧಿಕಾರಿಗಳ ಒತ್ತಾಯ ಮೇರೆಗೆ ಈ ಕ್ರೀಡಾಕೂಟವನ್ನು ನಗರದಲ್ಲಿ ಆಯೋಜನೆ ಮಾಡಲಾಗಿದೆ ಎಂಬ ಸುದ್ದಿಗಳು ಸಹ ಹರಿದಾಡುತ್ತಿವೆ.
ಸಾರ್ವಜನಿಕರನ್ನು ಆಕರ್ಷಿಸುವ ಉದ್ದೇಶದಿಂದ ಕ್ರೀಡಾಂಗಣದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.  ಲಾಂಗ ಜಂಪ, ಕಬ್ಬಡ್ಡಿ, ವಾಲಿಬಾಲ್ ಸೇರಿದಂತೆ ಇತರ ಕ್ರೀಡೆಗಳನ್ನು ಆಯೋಜಿಸಿದ್ದ ಪರಿಣಾಮ ವಾಲ್ಮೀಕಿ ಕ್ರೀಡಾಂಗಣದಲ್ಲಿ ದೈಹಿಕ ಶಿಕ್ಷಕರ ಮತ್ತು ಇಲಾಖೆಯ ಇತರ ಅಧಿಕಾರಿಗಳು ಮೂರ್ನಾಲ್ಕು ದಿನಗಳಿಂದ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗೆ ಮೈದಾನವನ್ನು ಸಜ್ಜುಗೊಳಿಸಿದ್ದರು ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಈ ಕ್ರೀಡಾಕೂಟ ಪ್ರಚಾರ ಮಾಡದ ಕಾರಣ ಕ್ರೀಡಾಂಗಣದಲ್ಲಿ ಯಾರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಲಿಲ್ಲ ಮತ್ತು ಇಲಾಖೆಯ ಕ್ರೀಡಾಪಟುಗಳು ಸಹ ನಿರೀಕ್ಷಿತ ಪ್ರಮಾಣದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದ ಕಾರಣ ನಗರದಲ್ಲಿ ಅರಣ್ಯ ಇಲಾಖೆ ವತಿಯಿಂದ ಆಯೋಜನೆ ಗೊಂಡಿದ್ದ ಕ್ರೀಡಾಕೂಟ ಕಾಟಾಚಾರಕ್ಕೆ ಎಂಬಂತೆ ಆಯೋಜನೆ ಗೊಂಡಿದ್ದು ಕಂಡು ಬಂದಿತ್ತು.ಒಟ್ಟಿನಲ್ಲಿ ಕ್ರೀಡೆ ಯನ್ನು ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಕಾರಣವಾಗಬೇಕಾಗಿದ್ದ ಅರಣ್ಯ ಕ್ರೀಡಾಕೂಟ ಅವ್ಯವಸ್ಥೆ ಹಾಗೂ ಮೋಜು ಮಸ್ತಿಗೆ ಸೀಮಿತವಾಯಿತು.

Related posts: