ಗೋಕಾಕ:ಕನಕದಾಸರು ಜಾತ್ಯಾತೀತ ಸಮಾಜ ನಿರ್ಮಾಣ ಸಂದೇಶ ನೀಡಿದ ಶ್ರೇಷ್ಠ ಸಂತರಾಗಿದ್ದರು : ಪ್ರಾಚಾರ್ಯ ಎಚ್ ಎಸ್ ಅಡಿಬಟ್ಟಿ
ಕನಕದಾಸರು ಜಾತ್ಯಾತೀತ ಸಮಾಜ ನಿರ್ಮಾಣ ಸಂದೇಶ ನೀಡಿದ ಶ್ರೇಷ್ಠ ಸಂತರಾಗಿದ್ದರು : ಪ್ರಾಚಾರ್ಯ ಎಚ್ ಎಸ್ ಅಡಿಬಟ್ಟಿ
ಗೋಕಾಕ ನ 30 : ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿ ಜಾತ್ಯಾತೀತ ಸಮಾಜ ನಿರ್ಮಾಣ ಸಂದೇಶ ನೀಡಿದ ಶ್ರೇಷ್ಠ ಸಂತರಾಗಿದ್ದರು ಎಂದು ಎಸ್‍ಎಲ್‍ಜೆ ಪಾಲಿಟೇಕ್ನಿಕನ ಪ್ರಾಚಾರ್ಯ ಎಚ್ ಎಸ್ ಅಡಿಬಟ್ಟಿ ಹೇಳಿದರು.
ಅವರು, ಗುರುವಾರದಂದು ನಗರದ ಲಕ್ಷ್ಮೀ ಏಜ್ಯುಕೇಶನ ಟ್ರಸ್ಟನ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕನಕ ಜಯಂತಿ ಸಮಾರಂಭದಲ್ಲಿ ಮುಖ್ಯತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತ ಕನಕದಾಸರ ಕೀರ್ತನೆಗಳು ಸರ್ವರಿಗೂ ಸರ್ವಕಾಲಕ್ಕೂ ದಾರಿದೀಪವಾಗಿದ್ದು ಅವುಗಳ ಆಚರಣೆಗೆ ತರುವಂತೆ ಕರೆ ನೀಡಿದರು.
ಕಾರ್ಯಕ್ರವನ್ನು ಉದ್ಘಾಟಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಅವರನ್ನು ಕನಕದಾಸರ ಅಭಿಮಾನಿಗಳು ಕಂಬಳಿಯೊಂದಿಗೆ ಪಟಕಾ ಹಾಕಿ ಕನಕದಾಸರ ಭಾವಚಿತ್ರ ನೀಡಿ ಸತ್ಕರಿಸಿದರು.
ವೇದಿಕೆಯ ಮೇಲೆ ಆಡಳಿತಾಧಿಕಾರಿ ಬಿ ಕೆ ಕುಲಕರ್ಣಿ, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳಾದ ಡಾ.ಎ ಬಿ ಪಾಟೀಲ, ಐ ಎಸ್ ಪವಾರ, ಜಿ ಆರ್ ನಿಡೋಣಿ, ಅರುಣ ಪೂಜೇರ, ಆರ್ ಎಮ್ ದೇಶಪಾಂಡೆ, ಎಚ್ ವಿ ಪಾಗ್ನೀಸ್, ಪಿ ವಿ ಚಚಡಿ ಇದ್ದರು.